– ಇದು ಸಾವಲ್ಲ, ಅವ್ರ ಮರುಹುಟ್ಟು
ಬೆಂಗಳೂರು: ನಿನ್ನೆ ಮೊನ್ನೆವರೆಗೂ ಫೋನ್‍ನಲ್ಲಿ ರವಿ ಬೆಳಗೆರೆಯೊಂದಿಗೆ ನನ್ನ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದೆ. ಅವರಿಗೆ ಅನಾರೋಗ್ಯ ಕಾಡುತ್ತಲೇ ಇತ್ತು. ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ ಅನ್ನಿಸುತ್ತಿದೆ ಎಂದು ನಿದೇರ್ಶಕ ಯೋಗರಾಜ್ ಭಟ್ ಸಂತಾಸ ಸೂಚಿಸಿದ್ದಾರೆ.
ರವಿಬೆಳಗೆರೆಯ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗರಾಜ್ ಭಟ್, ಕನ್ನಡ ಅಭಿಮಾನಿಯಾಗಿ ಇದು ರವಿ ಬೆಳಗೆರೆ ಅವರ ಸಾವಲ್ಲ, ಅವರ ಹುಟ್ಟು. ಅವರ ನೆನಪು, ಬರಹಗಳೊಂದಿಗೆ ನಮ್ಮೊಂದಿಗೆ ಇದ್ದಾರೆ. ಅವರು ಸಂಗೀತ ಪ್ರಿಯರು, ನನ್ನದು ಅವರದ್ದು ಅದ್ಭುತ ಸ್ನೇಹ. ನನ್ನ ಸಿನಿಮಾ, ಹಾಡುಳ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು. ತುಂಬು ಜೀವನವನ್ನು ನಡೆಸಿದ್ದು, ಧೈರ್ಯಕ್ಕೆ ಮತ್ತೊಂದು ಹೆಸರು. ಧೀಮಂತ ಪತ್ರಕರ್ತ ಎಂದರು.
ರವಿಬೆಳಗೆರೆ ಅವರು ನಾನು ಬಯಲುಸೀಮೆ ಶೈಲಿಯಲ್ಲಿ ಮಾತನಾಡುತ್ತಿದ್ದೆವು. ಹಿಂದಿ, ಉರ್ದು ಗೊತ್ತಿದ್ದರಿಂದ ನಮ್ಮೊಂದಿಗೆ ಈ ಬಗ್ಗೆಯೂ ಮಾತನಾಡುತ್ತಿದ್ದೆವು. ಅಷ್ಟು ದೊಡ್ಡ ಸಂಗೀತ ಅಭಿಮಾನಿಗೆ ನನ್ನ ಹಾಡು ಇಷ್ಟ ಆಗಿದ್ದು ಆನಂದದ ವಿಷಯ. ಎಲ್ಲಾ ಕಲೆಗಳನ್ನು ಮೋಹಿಸಿ ಬದುಕಿದ ಜೀವ ಅವರದ್ದು. ಕಳೆದ ವರ್ಷ ಕರಾವಳಿಯಲ್ಲಿ ನನಗೆ ಪ್ರಶಸ್ತಿಯನ್ನು ನೀಡಿದ್ದರು. ಈಗ ಹೋಗಿ ಬನ್ನಿ ಅಂತ ಅನ್ನೋದು ಬಿಟ್ಟರೆ ಬೇರೆನಿಲ್ಲ ಎಂದು ಹೇಳಿದರು.