ಬೆಂಗಳೂರು: ಚಂದನವನದ ನಟಿ ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ ಮೊದಲ ಪದವನ್ನು ಕಲಿಯುತ್ತಿದ್ದಾನೆ. ಅದನ್ನು ಮೇಘನಾ ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಫುಲ್ ಖುಷ್ ಆಗಿದ್ದಾರೆ.
ರಾಯನ್‍ನ ವಿಶೇಷ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಮೇಘನಾ ಯಾವಾಗಲೂ ತುಂಬಾ ಉತ್ಸುಕರಾಗಿರುತ್ತಾರೆ. ಅದೇ ರೀತಿ ಇಂದು ರಾಯನ್ ಮೊದಲ ಪದ ಕಲಿತಿದ್ದಾನೆ. ಆ ವೀಡಿಯೋವನ್ನು ಮೇಘನಾ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ರಾಯನ್ ತನ್ನ ಮೊದಲ ಪದಗಳನ್ನು ಕಲಿಯುತ್ತಿದ್ದಾನೆ. ನಮ್ಮ ಲಯನ್ ಕಿಂಗ್ ನ ಈ ವೀಡಿಯೋದಲ್ಲಿ ನಿಮಗೆ ಇಷ್ಟವಾದ ಭಾಗ ಯಾವುದು? ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಅಲ್ಲು ಅರ್ಜುನ್
View this post on Instagram
ಈ ವೀಡಿಯೋಗೆ ಪ್ರತಿಕ್ರಿಯಿಸಿದ ಅಭಿಮಾನಿಗಳು ವಾವ್, ನಮ್ಮ ಲಯನ್ ಕಿಂಗ್, ನಮ್ಮ ಸಿಂಬ ಎಂದು ಬರೆದು ಕಮೆಂಟ್ ಮಾಡುತ್ತಿದ್ದಾರೆ. ಈ ವೀಡಿಯೋದಲ್ಲಿ ಮೇಘನಾ ರಾಯನ್ ಗೆ, ಲಯನ್ ಹೇಗೆ ಕೂಗುತ್ತೆ ತೋರಿಸು ಎಂದಾಗ, ರಾಯನ್ ಸಿಂಹದ ಘರ್ಜನೆಯನ್ನು ಅನುಕರಿಸಿದ್ದಾನೆ. ಈ ವೀಡಿಯೋ ಸಖತ್ ಕ್ಯೂಟ್ ಆಗಿ ಬಂದಿದ್ದು, ರಾಯನ್ ರಿಯಾಕ್ಷನ್ ಮಾತ್ರ ನೋಡುಗರನ್ನು ಆಕರ್ಷಿಸುತ್ತೆ.
ಮೇಘನಾ, ರಾಯನ್ ಫೋಟೋ ಮತ್ತು ವೀಡಿಯೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿತ್ತಿರುತ್ತಾರೆ. ಅದು ಅಲ್ಲದೇ ಇತ್ತೀಚೆಗೆ ಅವರು ರಾಯನ್ ನ ಗೆಳೆಯರ ಜೊತೆಗೆ ಕುಳಿತು ಆಟವಾಡುತ್ತಿರುವ ವಿಶೇಷವಾದ ಫೋಟೋವನ್ನು ಶೇರ್ ಮಾಡಿದ್ದರು. ಈ ಫೋಟೋದಲ್ಲಿ ರಾಯನ್ ಮುದ್ದಾಗಿ ಕಾಣುತ್ತಿದ್ದನು. ಇದನ್ನೂ ಓದಿ: ಕನ್ನಡದಲ್ಲಿ ನನಗೆ ಡಬ್ಬಿಂಗ್ ಮಾಡಲು ಆಗಲಿಲ್ಲ: ರಶ್ಮಿಕಾ ಮಂದಣ್ಣ
ಮೇಘನಾ ರಾಯನ್ ಬಂದ ಮೇಲೆ ಅವನಿಗಾಗಿಯೇ ತಮ್ಮ ಸಮಯವನ್ನು ಇಟ್ಟಿರುವ ಅವರು, ಯಾವಾಗಲೂ ಅವನ ಲಾಲನೆ-ಪಾಲನೆಯಲ್ಲಿ ಫುಲ್ ಬ್ಯುಸಿಯಾಗಿರುತ್ತಾರೆ.