ಬೆಂಗಳೂರು: ಸೂರಿ ನಿರ್ದೇಶನದ ಟಗರು ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಖಡಕ್ ಪೊಲೀಸ್ ಅಧಿಕಾರಿಯಾಗಿ ರುಸ್ತುಂ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಗೊತ್ತಿರದ ವಿಚಾರವೇನಲ್ಲ. ಟಗರು ಚಿತ್ರದಲ್ಲಿ ಶಿವಣ್ಣನಿಗೆ ಡಾಲಿ ಧನಂಜಯ್, ಚಿಟ್ಟೆ ವಸಿಷ್ಠ ಸಿಂಹ ವಿಲನ್ ಗಳಾಗಿ ಠಕ್ಕರ್ ಕೊಟ್ಟಿದ್ರು. ರುಸ್ತುಂ ಚಿತ್ರದಲ್ಲಿಯೂ ವಿಲನ್ ಗಳದ್ದೇ ಹಾವಳಿಯಿದ್ದು ಶಿವಣ್ಣನಿಗೆ ಎದುರಾಳಿಯಾಗಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತಾಗಿದ್ದರೆ ತೆಲುಗಿನ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಹಾಗೂ ಶಿವಣ್ಣನ ನಡುವಿನ ಕಾಳಗವನ್ನೇ ನೋಡಬಹುದಾಗಿತ್ತು. ಆದ್ರೆ ಅಕ್ಕಿನೇನಿ ನಾಗಾರ್ಜುನ್ ಶಿವರಾಜ್ ಕುಮಾರ್ ಜತೆ ನಟಿಸೋದಿಲ್ಲ ಅಂತಾ ಹೇಳಿದ್ದಾರಂತೆ..!
Advertisement
ಅಕ್ಕಿನೇನಿ ರಿಜೆಕ್ಟ್ ಮಾಡೋದಕ್ಕೆ ಕಾರಣವೇನು?
ಶಿವಣ್ಣ ಮೊದಲೇ ಮಾಸ್ ಹೀರೋ. ಅಲ್ಲದೇ ರುಸ್ತುಂ ಹೇಳಿ ಕೇಳಿ ಮಾಸ್ ಎಂಟರ್ ಟೈನಿಂಗ್ ಸಿನಿಮಾ. ಆಕ್ಷನ್ ಓರಿಯೆಂಟೆಡ್ ಸಿನಿಮಾ ಕೂಡ. ಶಿವಣ್ಣ ಖಡಕ್ಕಾಗಿ ತಮ್ಮ ಖದರ್ ತೋರಿಸ್ತಾರೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಹಾಗಿರೋವಾಗ ಅವರ ಎದುರಿಗೆ ತೊಡೆ ತಟ್ಟಿ ನಿಲ್ಲೋ ವಿಲನ್ ಅವರಿಗೆ ಸರಿ ಸಮನಾಗಿ ಇರಬೇಕಲ್ವಾ. ಯಾರೋ ನಟಿಸಿದ್ರೆ ಆ ಪಾತ್ರಕ್ಕೆ ತೂಕ ಇರೋದಿಲ್ಲ ಅಂದರಂತೆ.
Advertisement
ನಿರ್ದೇಶಕ ರವಿ ವರ್ಮ ಏನ್ ಹೇಳ್ತಾರೆ..?
ಈ ಮೊದಲು ರುಸ್ತುಂ ನಿರ್ದೇಶಕ ರವಿ ವರ್ಮ ಶಿವಣ್ಣನಿಗೆ ಎದುರಾಳಿಯಾಗಿ ನಾಗಾರ್ಜುನ ಮ್ಯಾಚ್ ಆಗ್ತಾರೆ ಅಂತ ಯೋಚಿಸಿ ಅವರನ್ನು ಅಪ್ರೋಚ್ ಮಾಡಿದ್ದಂತೆ. ಪ್ರಾರಂಭದಲ್ಲಿ ಖಂಡಿತಾ ಮಾಡ್ತೀನಿ ಅಂತ ನಾಗಾರ್ಜುನ್, ಆಮೇಲೆ ಪಾತ್ರದ ಆಳ ತಿಳಿದ ಮೇಲೆ ನಟಿಸಲು ನೋ ಎಂದಿದ್ದಾರಂತೆ. ಆಮೇಲೆ ಅನಿಲ್ ಕಪೂರ್ ಸೆಲೆಕ್ಟ್ ಮಾಡಿದ್ರೂ ಕಾರಣಾಂತರಗಳಿಂದ ಅವರೂ ರಿಜೆಕ್ಟ್ ಆಗಿ ಅಂತಿಮವಾಗಿ ವಿವೇಕ್ ಒಬೇರಾಯ್ ಅವರನ್ನು ಫೈನಲ್ ಮಾಡಲಾಗಿದೆಯಂತೆ.