ಮಾಸ್ಕೋ: ಉಕ್ರೇನ್ ಮೇಲೆ ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು (ICBM) ರಷ್ಯಾ ಉಡಾಯಿಸಿದೆ. 60 ವರ್ಷಗಳಲ್ಲೇ ಯುದ್ಧದಲ್ಲಿ ಈ ಕ್ಷಿಪಣಿಯನ್ನು ಮೊದಲ ಬಾರಿಗೆ ಬಳಕೆ ಮಾಡಲಾಗಿದೆ.
ಉಕ್ರೇನ್‌ನ (Ukraine) ಡಿನಿಪ್ರೊದಲ್ಲಿ ಮೂಲಸೌಕರ್ಯವನ್ನು ಗುರಿಯಾಗಿಸಲು ಮಾಸ್ಕೋ ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ಸ್ (ಎಂಐಆರ್‌ವಿ) ಪ್ರಯೋಗಿಸಲಾಗಿದೆ. ಇದು ತಂತ್ರಜ್ಞಾನದ ಮೊದಲ ಬಳಕೆಯಾಗಿದೆ. ಇದನ್ನೂ ಓದಿ: ಅಮೆರಿಕ ನಿರ್ಮಿತ ದೀರ್ಘ ಶ್ರೇಣಿಯ ಕ್ಷಿಪಣಿಗಳಿಂದ ರಷ್ಯಾ ಮೇಲೆ ಉಕ್ರೇನ್ ದಾಳಿ
ICBMಗಳು 5,500 ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪ್ತಿಯನ್ನು ಹೊಂದಿವೆ. ಪರಮಾಣು, ರಾಸಾಯನಿಕ ಮತ್ತು ಜೈವಿಕ ಸಿಡಿತಲೆಗಳನ್ನು ಸಾಗಿಸಲು ನಿರ್ಮಿಸಲಾಗಿದೆ. ಇದು ಸಾಂಪ್ರದಾಯಿಕ ಸಿಡಿತಲೆಯನ್ನು ಸಹ ಸಾಗಿಸಬಲ್ಲದು. ಇದನ್ನು ರಷ್ಯಾ RS-26 ರುಬೆಜ್, ಬ್ಯಾಲಿಸ್ಟಿಕ್ ಕ್ಷಿಪಣಿಯಲ್ಲಿ ಬಳಸಿದೆ ಎಂದು ವರದಿಯಾಗಿದೆ. ಉಕ್ರೇನ್‌ನಲ್ಲಿ ಹಾನಿಗೊಳಗಾದ ಸ್ಥಳದಿಂದ 1,000 ಕಿಮೀ ದೂರದಲ್ಲಿರುವ ರಷ್ಯಾದ ಅಸ್ಟ್ರಾಖಾನ್ ಪ್ರದೇಶದಿಂದ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ.
ಐಸಿಬಿಎಂಗಳ ಉಡಾವಣೆಯ ಕುರಿತು ರಷ್ಯಾ ಪ್ರತಿಕ್ರಿಯಿಸಲು ನಿರಾಕರಿಸಿದೆ. ಆದರೂ, ಕೀವ್ ಅದರ ಬಳಕೆಯನ್ನು ದೃಢಪಡಿಸಿದೆ. ಹೊಸ ಅಣ್ವಸ್ತ್ರ ನೀತಿಗೆ ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಸಹಿ ಹಾಕಿದ ಬೆನ್ನಲ್ಲೇ ಉಕ್ರೇನ್ ಮೇಲೆ ಕ್ಷಿಪಣಿ ಉಡಾವಣೆಯಾಗಿದೆ. ಇದನ್ನೂ ಓದಿ: 1,000 ದಿನ ಪೂರೈಸಿದ ರಷ್ಯಾ-ಉಕ್ರೇನ್ ಯುದ್ಧ; ಪರಮಾಣು ಶಸ್ತ್ರಾಸ್ತ್ರ ಬಳಕೆ ಎಚ್ಚರಿಕೆ ನೀಡಿದ ಪುಟಿನ್
ದೀರ್ಘ ಶ್ರೇಣಿಯ ಎಟಿಎಸಿಎಂಎಸ್ ಕ್ಷಿಪಣಿಗಳನ್ನು ರಷ್ಯಾ ಮೇಲೆ ಉಡಾಯಿಸಲು ಈಚೆಗೆ ಉಕ್ರೇನ್‌ಗೆ ಅಮೆರಿಕ ಅನುಮತಿ ನೀಡಿತ್ತು. ಅದರ ಬೆನ್ನಲ್ಲೇ ಉಕ್ರೇನ್ ಕ್ಷಿಪಣಿಗಳನ್ನು ರಷ್ಯಾ ಮೇಲೆ ಉಡಾಯಿಸಿತು.