ಮಾಸ್ಕೋ: ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದಾಗಿನಿಂದ ವಿದೇಶೀ ವಿನಿಮಯಕ್ಕೆ ಭಾರೀ ಹೊಡೆತ ಬಿದ್ದಿದೆ. ಹೀಗಾಗಿ ರಷ್ಯಾ ಸೆಂಟ್ರಲ್ ಬ್ಯಾಂಕ್ ತನ್ನ ಆರ್ಥಿಕತೆಯನ್ನು ಕಾಪಾಡಲು ಬಡ್ಡಿ ದರದಲ್ಲಿ ಭಾರೀ ಏರಿಕೆ ಮಾಡಿದೆ.
ರಷ್ಯಾ ಸೆಂಟ್ರಲ್ ಬ್ಯಾಂಕ್‍ನ ಬಡ್ಡಿ ದರ ಈ ಹಿಂದೆ ಶೇ.9.5 ಇದ್ದು, ಇದೀಗ ಶೇ.20 ಕ್ಕೆ ಏರಿಕೆ ಮಾಡಿದೆ. ಈ ಮೂಲಕ ರಷ್ಯಾ ತನ್ನ ಹೂಡಿಕೆದಾರರನ್ನು ಕಾಪಾಡಲು ಪ್ರಯತ್ನಿಸುತ್ತಿದೆ.
Advertisement
ರಷ್ಯಾ ಸೆಂಟ್ರಲ್ ಬ್ಯಾಂಕ್ ಸೋಮವಾರ ಪ್ರಮುಖ ಬಡ್ಡಿ ದರವನ್ನು ಶೇ.9.5 ರಿಂದ ಶೇ.20ಕ್ಕೆ ಏರಿಸುವುದಾಗಿ ಘೋಷಿಸಿದೆ. ರಷ್ಯಾದಲ್ಲಿ ಯುದ್ಧದ ಹಿನ್ನೆಲೆ ವಿದೇಶೀ ವಹಿವಾಟು ಕುಂಠಿತಗೊಂಡಿದ್ದು, ರೂಬೆಲ್(ರಷ್ಯಾ ಕರೆನ್ಸಿ) ಬೆಲೆ ಕುಸಿಯುತ್ತಿದೆ. ಈ ಹಣದುಬ್ಬರವನ್ನು ಸರಿದೂಗಿಸಲು ಬಡ್ಡಿ ದರದಲ್ಲಿ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ: ದಲೈಲಾಮಾ
Advertisement
Advertisement
ರಷ್ಯಾದಲ್ಲಿ ಸಂಭವಿಸುತ್ತಿರುವ ನಾಟಕೀಯ ಬೆಳವಣಿಗೆಯಿಂದ ಜನರು ಭಯಬೀತರಾಗಿ ತಮ್ಮ ಹಣವನ್ನು ಹಿಂಪಡೆಯಲು ಎಟಿಎಂನಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಈ ಬೆಳವಣಿಗೆಯಿಂದ ರಷ್ಯಾ ಹೂಡಿಕೆದಾರರು ಕೈಜಾರಿ ಹೋಗಬಾರದೆಂಬ ಕಾರಣಕ್ಕೆ ಬಡ್ಡಿ ದರವನ್ನು ದ್ವಿಗುಣಗೊಳಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದನ್ನೂ ಓದಿ: ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ
Advertisement
ಯುದ್ಧ ಪ್ರಾರಂಭವಾದಾಗಿನಿಂದ ರೂಬೆಲ್ ಮೌಲ್ಯ ಕುಸಿಯತೊಡಗಿದೆ. ಪ್ರತಿ ಡಾಲರ್‍ಗೆ ರೂಬೆಲ್ ಬೆಲೆ 119.50 ರಷ್ಟು ಕುಸಿದಿದೆ. ಶುಕ್ರವಾರದ ದಿಂದ ರೂಬೆಲ್ ಬೆಲೆ ಶೇ.30% ರಷ್ಟು ಕಡಿಮೆಯಾಗಿದೆ.