InternationalLatestMain PostTech

ರಷ್ಯಾದ ಮಹಿಳಾ ಗಗನಯಾತ್ರಿ ಸ್ಪೇಸ್ ಎಕ್ಸ್ ಮೂಲಕ ಬಾಹ್ಯಾಕಾಶಕ್ಕೆ

ವಾಷಿಂಗ್ಟನ್: ಅಮೇರಿಕಾ ಹಾಗೂ ರಷ್ಯಾದ ಒಳ ಜಗಳ ನಿನ್ನೆ ಮೊನ್ನೆಯದಲ್ಲ. ಇತಿಹಾಸದ ಪುಟದಲ್ಲೂ ಬಲಿಷ್ಟ ರಾಷ್ಟ್ರಗಳ ಶೀತಲ ಸಮರದಬಗ್ಗೆ ಕೇಳುತ್ತಲೇ ಬಂದಿದ್ದೇವೆ. ಇದೀಗ ಅಮೇರಿಕಾದ ಸ್ಪೇಸ್ ಎಕ್ಸ್ ಕಂಪನಿ ರಷ್ಯಾದ ಮಹಿಳಾ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳಿಸುವ ಯೋಜನೆ ಮಾಡಿ ಆಶ್ಚರ್ಯ ಮೂಡಿಸಿದೆ

ನಾಸಾ ಹಾಗೂ ರಷ್ಯಾದ ಸ್ಪೇಸ್ ಏಜೆನ್ಸಿ 2022ರ ಕ್ರ್ಯೂ ಡ್ರ್ಯಾಗನ್ ಒಪ್ಪಂದವನ್ನು ಮಾಡಿಕೊಂಡಿದ್ದು, ಇದರಲ್ಲಿ ಗಗನಯಾತ್ರಿಯನ್ನು ಉಡಾಯಿಸುವ ಯೋಜನೆ ನಡೆದಿದೆ. ಒಪ್ಪಂದದ ಪ್ರಕಾರ ಬಾಹ್ಯಾಕಾಶ ನೌಕೆಯಲ್ಲಿ ರಷ್ಯಾದ ಮೊದಲ ಮಹಿಳಾ ಗಗನಯಾತ್ರಿ ಅನ್ನಾ ಕಿಕಿನಾ ಪ್ರಯಾಣಿಸಲಿದ್ದಾರೆ.

2022ರಲ್ಲಿ ಸ್ಪೇಸ್ ಎಕ್ಸ್ ಕ್ರ್ಯೂ-5 ಮಿಷನ್‌ನಲ್ಲಿ ಗಗನಯಾತ್ರಿಯನ್ನು ಉಡಾವಣೆ ಮಾಡುವ ವಿಷಯವನ್ನು ಸ್ಪೇಸ್ ಸ್ಟೇಶನ್ ಪ್ರೋಗ್ರಾಮ್ ಮ್ಯಾನೇಜರ್ ಜೋಯಲ್ ಮೊಂಟಲ್ಬಾನೋ ತಿಳಿಸಿದರು. 2025ರ ಹೊತ್ತಿಗೆ ಬಾಹ್ಯಾಕಾಶ ನಿರ್ವಹಣೆಯಲ್ಲಿ ರಷ್ಯಾ ಹಾಗೂ ಅಮೆರಿಕ ಜಂಟಿಯಾಗಿ ಕಾರ್ಯ ನಿರ್ವಹಿಸುವುದರ ಬಗ್ಗೆ ಸುಳಿವನ್ನೂ ನೀಡಿದ್ದಾರೆ. ಇದನ್ನೂ ಓದಿ: ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್‌ಲಿಂಕ್‌ ಉಪಗ್ರಹಗಳು? ದರ ಎಷ್ಟು? ನೆಟ್‌ ಹೇಗೆ ಸಿಗುತ್ತೆ?

ವಾಷಿಂಗ್ಟನ್ ಹಾಗೂ ಮಾಸ್ಕೋ ನಡುವಿನ ಒತ್ತಡದ ಸಂಬಂಧ ಬಾಹ್ಯಾಕಾಶಕ್ಕೆ ವಿಸ್ತರಿಸಿದ್ದರೂ, ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್ ಮಾಸ್ಕೋಗೆ ಭೇಟಿ ನೀಡಿದಾಗ 2022ರ ಕ್ರ್ಯೂ ಡ್ರ್ಯಾಗನ್ ಒಪ್ಪಂದದ ಬಗ್ಗೆ ಯೋಜನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್‌ನಲ್ಲಿರುವ ಏಕೈಕ ಮಹಿಳಾ ಗಗನಯಾತ್ರಿ ಅನ್ನಾ ಕಿಕಿನಾ ಅವರನ್ನು ಈ ಯೋಜನೆಗೆ ಆಯ್ಕೆ ಮಾಡಿದೆ. ಅವರು ಈಗಾಗಲೇ ಈ ಯೋಜನೆಗಾಗಿ ಸ್ಪೇಸ್ ಎಕ್ಸ್‌ನಲ್ಲಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಹಾಗೂ ಕ್ರ್ಯೂ-5 ಮಿಷನ್‌ನಲ್ಲಿ ಗಗನಯಾತ್ರಿಗಳಾದ ನಿಕೋಲ್ ನಮ್ ಹಾಗೂ ಜೋಶ್ ಕಸಾಡಾ ಅವರೊಂದಿಗೆ ಬಾಹ್ಯಾಕಾಶ ಪ್ರಯಾಣ ಬೆಳೆಸಲಿದ್ದಾರೆ ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: 12 ದಿನಗಳ ಬಾಹ್ಯಾಕಾಶ ಪ್ರಯಾಣದಿಂದ ಮರಳಿದ ಜಪಾನ್ ವ್ಯಕ್ತಿ!

ದಶಕಗಳ ಹಿಂದೆ ಅಮೆರಿಕ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ರಷ್ಯಾವನ್ನು ಅವಲಂಬಿಸಿತ್ತು. ಇತ್ತೀಚೆಗೆ ಅಮೇರಿಕಾ ಸ್ಪೇಸ್ ಎಕ್ಸ್ ಕಂಪನಿಯ ಮೂಲಕ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿದೆ.

Leave a Reply

Your email address will not be published.

Back to top button