ಕೈವ್/ಮಾಸ್ಕೋ: ರಷ್ಯಾ-ಉಕ್ರೇನ್ ನಡುವಿನ ಯುದ್ಧದ (Russia Ukraine War) ಸಂದರ್ಭದಲ್ಲಿ ಉಕ್ರೇನ್ ಮಹಿಳೆಯರ (Ukrainian Women) ಮೇಲೆ ಅತ್ಯಾಚಾರ ಮಾಡುವಂತೆ ತನ್ನ ಪತಿಗೆ ಒತ್ತಾಯಿಸುತ್ತಿದ್ದ ರಷ್ಯಾ ಸೈನಿಕನ ಪತ್ನಿಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಓಲ್ಗಾ ಬೈಕೊವ್ಸ್ಕಯಾ ಎಂಬ ಮಹಿಳೆ ತನ್ನ ಸೈನಿಕ ಪತಿ ರೋಮನ್ ಬೈಕೊಬ್ಸ್ಕಿಗೆ ಉಕ್ರೇನಿಯನ್ ಮಹಿಳೆಯರ ಮೇಲೆ ಅತ್ಯಾಚಾರ ಎಸಗುವಂತೆ ದೂರವಾಣಿ ಕರೆ ಮಾಡಿ ಒತ್ತಾಯಿಸುತ್ತಿದ್ದಳು. ನನಗೆ ಏನನ್ನೂ ಹೇಳಬೇಡಿ, ಅರ್ಥಮಾಡಿಕೊಳ್ಳಿ ನೀವು ಅವರನ್ನು ರೇಪ್ ಮಾಡಿ ಎಂದು ಒತ್ತಾಯಿಸಿದ್ದಳು. ಈ ಸಂಭಾಷಣೆಯ ಆಡಿಯೋವನ್ನ ಉಕ್ರೇನ್ ಸೀಕ್ರೆಟ್ ಸರ್ವಿಸ್ ರಿಲೀಸ್ ಮಾಡಿದ್ದು, ಮಹಿಳೆಗೆ ಉಕ್ರೇನ್ ಕೋರ್ಟ್ 5 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಎಲ್ಲಾ ಅಧಿಕಾರ ಅನುಭವಿಸಿದ್ದೇನೆ, ಮಂತ್ರಿ ಮಾಡೋದು ಸಿಎಂಗೆ ಬಿಟ್ಟ ವಿಚಾರ: ಆರ್.ವಿ.ದೇಶಪಾಂಡೆ
ಬಹಳ ದಿನಗಳಿಂದಲೂ ಉಕ್ರೇನ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ರಷ್ಯಾ ಸೈನಿಕನ ಪತ್ನಿ ವಿರುದ್ಧ ಯುದ್ಧದ ಕಾನೂನು ಉಲ್ಲಂಘನೆ, ಯುದ್ಧಾಪರಾಧ ಸೇರಿದಂತೆ ವಿವಿಧ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಾರದೇ ಇದ್ದರೆ ಈ ಸಂಸತ್ತನ್ನೇ ಕಾಂಗ್ರೆಸ್ ವಕ್ಫ್‌ಗೆ ನೀಡ್ತಿತ್ತು: ಕಿರಣ್ ರಿಜಿಜು
ಸದ್ಯ ಉಕ್ರೇನ್ ಕೋರ್ಟ್ ಆಕೆಗೆ ಶಿಕ್ಷೆ ವಿಧಿಸಿದ್ದರೂ ಆಕೆ ಸಿಕ್ಕಿಲ್ಲ, ತಲೆ ಮರೆಸಿಕೊಂಡಿದ್ದಾಳೆ. ಆಕೆ ಬಂಧನಕ್ಕೆ ಉಕ್ರೇನ್ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಇದನ್ನೂ ಓದಿ: ಬ್ಲಡ್ ಶುಗರ್ ಲೆವೆಲ್ ಏರಿಕೆ – ಲಾಲೂ ಪ್ರಸಾದ್ ಯಾದವ್ ಆಸ್ಪತ್ರೆಗೆ ದಾಖಲು