ಕೀವ್: ಉಕ್ರೇನ್‍ನಲ್ಲಿ ಯುದ್ಧ ಮಾಡುತ್ತಿರುವ ರಷ್ಯಾ ಸೈನಿಕರು ಕೇವಲ ಈರುಳ್ಳಿ, ಆಲೂಗಡ್ಡೆ ಮತ್ತು ಉಪ್ಪಿನಕಾಯಿ ತಿಂದು ಬದುಕುತ್ತಿರುವುದು ಬಹಿರಂಗವಾಗಿದೆ.
Advertisement
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ 21ನೇ ದಿನಕ್ಕೆ ಕಾಲಿಟ್ಟಿದೆ. ಎರಡು ರಾಷ್ಟ್ರಗಳು ಪರಸ್ಪರ ಬಾಂಬ್, ಕ್ಷಿಪಣಿ ದಾಳಿ ಮಾಡುತ್ತಿದ್ದು, ಉಕ್ರೇನ್ ಹಲವು ಸಾವು ನೋವುಗಳೊಂದಿಗೆ ಮುನ್ನುಗ್ಗುತ್ತಿದೆ. ಈ ನಡುವೆ ಉಕ್ರೇನ್ ಸೈನಿಕರು ರಷ್ಯಾದ ಆಹಾರ ತಯಾರಿಕಾ ಟ್ರಕ್ ಒಂದನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾದ ಆಕ್ರಮಣ ಪ್ರತಿಭಟಿಸಲು ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು: ಇಂಗ್ಲೆಂಡ್ ಪ್ರಧಾನಿ
Advertisement
Advertisement
ಈ ಟ್ರಕ್‍ನಲ್ಲಿ ಕೇವಲ ಈರುಳ್ಳಿ, ಆಲೂಗಡ್ಡೆ ಮತ್ತು ಉಪ್ಪಿನಕಾಯಿ ಮಾತ್ರ ಸಿಕ್ಕಿದೆ. ಇದನ್ನು ಗಮನಿಸುತ್ತಿದ್ದಂತೆ ರಷ್ಯಾದ ಸೈನಿಕರು ಕೇವಲ ಈ ಮೂರು ಆಹಾರವನ್ನು ಮಾತ್ರ ಸೇವಿಸಿ ಯುದ್ಧ ಮಾಡುತ್ತಿರುವ ಸಂಶಯ ಮೂಡಿದೆ. ಈರುಳ್ಳಿ, ಆಲೂಗಡ್ಡೆ ಮತ್ತು ಉಪ್ಪಿನಕಾಯಿ ತಿಂದು ರಷ್ಯಾ ಸೈನಿಕರು ಡಯಟ್ ಮಾಡುತ್ತಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ
Advertisement
ಉಕ್ರೇನ್ ವಶಪಡಿಸಿಕೊಂಡಿರುವ ರಷ್ಯಾದ ಆಹಾರ ತಯಾರಿಕಾ ಟ್ರಕ್‍ನಲ್ಲಿ ಈರುಳ್ಳಿ, ಆಲೂಗಡ್ಡೆಗಳ ಮೂಟೆ ಸಿಕ್ಕಿದ್ದು, ಈ ಟ್ರಕ್ ಯುದ್ಧದ ವೇಳೆ ಸೈನಿಕರಿಗೆ ಆಹಾರ ತಯಾರಿಸಲೆಂದೇ ತಯಾರಾಗಿರುವ ಅತ್ಯಾಧುನಿಕ ಅಡುಗೆ ಕೋಣೆ ಇರುವ ಟ್ರಕ್ ಆಗಿದೆ. ಮೂಲಗಳ ಪ್ರಕಾರ ಇಂತಹ ಹಲವು ಟ್ರಕ್‍ಗಳು ಆಹಾರ ತಯಾರಿಕೆಗಾಗಿ ಇದ್ದು, ಇದೀಗ ಉಕ್ರೇನ್ ವಶಪಡಿಸಿಕೊಂಡಿರುವ ಟ್ರಕ್‍ನಲ್ಲಿ ಕೇವಲ ಈರುಳ್ಳಿ, ಆಲೂಗಡ್ಡೆ ಮಾತ್ರ ಸಿಕ್ಕಿದೆ. ಇತರ ಟ್ರಕ್‍ನಲ್ಲಿ ಇನ್ನುಳಿದ ಆಹಾರ ಪದಾರ್ಥಗಳಿರುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅಲ್ಲದೆ ಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ ಆಹಾರ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ವರದಿಯಾಗಿದೆ.