ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!

Public TV
1 Min Read
ukraine hypermarket 2

– ಪುಟಿನ್‌ ಪಡೆ ದಾಳಿಗೆ ಉಕ್ರೇನ್‌ನ 21 ಮಂದಿ ಬಲಿ

ಕೀವ್: ಉಕ್ರೇನ್‌ನ (Ukraine) ದಕ್ಷಿಣ ಖೆರ್ಸನ್‌ ಪ್ರದೇಶದ ಮೇಲೆ ರಷ್ಯಾ (Russia) ನಡೆಸಿದ ದಾಳಿಗೆ 21 ಮಂದಿ ಬಲಿಯಾಗಿದ್ದಾರೆ. ಶುಕ್ರವಾರದಿಂದ ಖೆರ್ಸನ್‌ (Kherson) ನಗರದಲ್ಲಿ ಅಧಿಕಾರಿಗಳು ಕರ್ಫ್ಯೂ ಘೋಷಿಸಿದ್ದಾರೆ.

ರಷ್ಯಾದ ಕ್ಷಿಪಣಿಗಳು ರೈಲ್ವೆ ನಿಲ್ದಾಣ, ಮನೆಗಳು, ಹಾರ್ಡ್‌ವೇರ್ ಅಂಗಡಿ, ಸೂಪರ್‌ ಮಾರ್ಕೆಟ್‌ಗಳನ್ನೆಲ್ಲ ಹೊಡೆದುರುಳಿಸಿವೆ. ಘಟನೆಯಲ್ಲಿ 21 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಇದನ್ನೂ ಓದಿ:  ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ – ವಿಡಿಯೋ ವೈರಲ್ ಬೆನ್ನಲ್ಲೇ ಪೇದೆ ಅಮಾನತು

kherson

ಬುಧವಾರದಿಂದ ರಷ್ಯಾದ ಪಡೆಗಳು ಖೆರ್ಸನ್‌ ನಗರ ಮತ್ತು ಇತರೆ ಪ್ರದೇಶಗಳ ಮೇಲೆ ಬೃಹತ್‌ ಶೆಲ್‌ ದಾಳಿಯನ್ನು ನಡೆಸುತ್ತಿವೆ. ಯುದ್ಧದ ಸನ್ನಿವೇಶದಲ್ಲೂ ಖೆರ್ಸನ್‌ ನಗರದಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ತೆರೆಯುತ್ತಿರುವ ಏಕೈಕ ಹೈಪರ್‌ಮಾರ್ಕೆಟ್‌ನಲ್ಲಿ ಶೆಲ್‌ ದಾಳಿಯಿಂದಾಗಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಖೆರ್ಸನ್‌ನಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ಕರ್ಫ್ಯೂ ವಿಧಿಸಲಾಗಿದೆ. ನಗರದ ಬೀದಿಗಳಲ್ಲಿ ಜನರ ಓಡಾಟಕ್ಕೆ ನಿಷೇಧ ವಿಧಿಸಲಾಗಿದೆ. ನಗರ ಪ್ರವೇಶಿಸುವುದು ಮತ್ತು ಹೊರ ಹೋಗುವುದಕ್ಕೂ ನಿರ್ಬಂಧ ಹೇರಲಾಗಿದೆ. ಆಹಾರ ಮತ್ತು ಔಷಧವನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ಯಾವುದೇ ಸಮಸ್ಯೆ ಇದ್ದಲ್ಲಿ ಕೆಳ ನ್ಯಾಯಾಲಯಕ್ಕೆ ಹೋಗಿ: ಕುಸ್ತಿಪಟುಗಳಿಗೆ ಸುಪ್ರೀಂ ಸೂಚನೆ

Share This Article