ಕೀವ್: ಉಕ್ರೇನ್ ನಾಗರಿಕನನ್ನು ಕೊಂದ ರಷ್ಯಾ ಸೈನಿಕನಿಗೆ ಉಕ್ರೇನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಫೆ.24ರಿಂದ ರಷ್ಯಾದ ಆಕ್ರಮಣದಿಂದ ಉಂಟಾದ ಮೊದಲ ಯುದ್ಧಾಪರಾಧಗಳ ವಿಚಾರಣೆಯಲ್ಲಿ ನಿರಾಯುಧ ನಾಗರಿಕನನ್ನು ಕೊಂದ ರಷ್ಯಾದ ಸೈನಿಕನಿಗೆ ಉಕ್ರೇನಿಯನ್ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿತು. ಇದನ್ನೂ ಓದಿ: ಸ್ಫೋಟಕ ಆಡಿಯೋ ಲೀಕ್ – ತೈವಾನ್ ಮೇಲೆ ಆಕ್ರಮಣಕ್ಕೆ ಚೀನಾ ಯೋಜನೆ
21 ವರ್ಷ ವಯಸ್ಸಿನ ಕಮಾಂಡರ್ ವಾಡಿಮ್ ಶಿಶಿಮರಿನ್, ಫೆ.28 ರಂದು ಈಶಾನ್ಯ ಉಕ್ರೇನಿಯನ್ ಗ್ರಾಮ ಚುಪಾಖಿವ್ಕಾದಲ್ಲಿ 62 ವರ್ಷದ ವ್ಯಕ್ತಿಗೆ ಗುಂಡು ಹಾರಿಸಿ ಕೊಂದ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಫೆ.24ರಂದು ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿತು. ರಷ್ಯಾದ ಆಕ್ರಮಣ ಮುಂದುವರಿದಿದ್ದು, ಈಗಾಗಲೇ ಉಕ್ರೇನ್‌ನ ಮರಿಯುಪೋಲ್‌ನ್ನು ಸಂಪೂರ್ಣ ವಶಕ್ಕೆ ಪಡೆದಿದೆ. ಈ ಭಾಗದಲ್ಲಿ ಉಕ್ರೇನ್ ಸೈನಿಕರು ರಷ್ಯಾ ಸೈನಿಕರಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ಭಾರತದಿಂದ ಅಗತ್ಯ ವಸ್ತುಗಳ ಪೂರೈಕೆ