ಮಾಸ್ಕೋ: ಉಕ್ರೇನ್ (Ukraine) ಮೇಲೆ ನಡೆಯುತ್ತಿರುವ ಯುದ್ಧದ ಹಿನ್ನೆಲೆ ರಷ್ಯಾದಲ್ಲಿ (Russia) ಶಾಲಾ ಮಕ್ಕಳಿಗೂ ಸೇನಾ ತರಬೇತಿ ನೀಡಲಾಗುತ್ತಿದೆ. ಮಕ್ಕಳು ಶಸ್ತ್ರಾಸ್ತ್ರ ಹಿಡಿದು ತರಬೇತಿ ಪಡೆಯುತ್ತಿರುವ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ದಕ್ಷಿಣದ ನಗರವಾದ ವ್ಲಾಡಿಕಾವ್ಕಾಜ್‌ನಲ್ಲಿ ಸೇನಾ ಸಮವಸ್ತ್ರದಲ್ಲಿ ಹದಿಹರೆಯದ ಬಾಲಕರು ಶಸ್ತ್ರಾಸ್ತ್ರಗಳನ್ನು ಹಿಡಿದು ತರಬೇತಿಯಲ್ಲಿ ನಿರತರಾಗಿದ್ದಾರೆ. ಅವರಿಗೆ ಸೇನಾ ಸಿಬ್ಬಂದಿ ತರಬೇತಿ ನೀಡುತ್ತಿದ್ದಾರೆ. ಇದನ್ನೂ ಓದಿ: ಪಪುವಾ ನ್ಯೂಗಿನಿಯಾದಲ್ಲಿ ಭಾರಿ ಭೂಕುಸಿತಕ್ಕೆ 100 ಮಂದಿ ಬಲಿ
ಪಿಸ್ತೂಲ್‌ನಿಂದ ಗುಂಡು ಹಾರಿಸುವುದು ಸುಲಭ. ಆದರೆ ಆಕ್ರಮಣಕಾರಿ ರೈಫಲ್‌ನಿಂದ ಗುರಿಯಿಟ್ಟು ಫೈರ್ ಮಾಡುವುದು ತುಂಬಾ ಕಷ್ಟಕರವಾಗಿದೆ ಎಂದು ಶಾಲಾ ವಿದ್ಯಾರ್ಥಿ ಡೇವಿಡ್ ತನ್ನ ತರಬೇತಿ ಅನುಭವ ಹಂಚಿಕೊಂಡಿದ್ದಾನೆ.
ಉಕ್ರೇನ್ ಮೇಲಿನ ರಷ್ಯಾ ಯುದ್ಧ ಈಗ 3ನೇ ವರ್ಷಕ್ಕೆ ಕಾಲಿಟ್ಟಿದೆ. ರಷ್ಯಾದಲ್ಲಿ ಯುವಕರಿಗೆ ಮಿಲಿಟರಿ ಸೇವೆ ಕಡ್ಡಾಯವಾಗಿದೆ. ತರಬೇತಿ ಕುರಿತು ರಷ್ಯಾದ ಉತ್ತರ ಒಸ್ಸೆಟಿಯಾ ಪ್ರದೇಶದ ನಾಯಕ ನಿವೃತ್ತ ವೈಸ್ ಅಡ್ಮಿರಲ್ ಸೆರ್ಗೆಯ್ ಮೆನೈಲೊ ಮಾತನಾಡಿ, ತರಬೇತಿಯು ತಂಡದಲ್ಲಿ ಯುವಜನರು ಮಿಲಿಟರಿ ಕರ್ತವ್ಯ ಪೂರೈಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಯೆಟ್ನಾಂನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – 14 ಮಂದಿ ಬಲಿ
ಪ್ರತಿಯೊಬ್ಬರೂ ಜೀವಗಳನ್ನು ಉಳಿಸಲು. ಶಸ್ತ್ರಾಸ್ತ್ರಗಳನ್ನು ನಿರ್ವಹಿಸಲು ಮತ್ತು ದೈಹಿಕವಾಗಿ ಸದೃಢರಾಗಿರಬೇಕು ಎಂದು ಸಶಸ್ತ್ರ ಪಡೆಗಳನ್ನು ಬೆಂಬಲಿಸುವ ಸ್ವಯಂಸೇವಕ ಸಂಸ್ಥೆಯ ಸ್ಥಳೀಯ ಮುಖ್ಯಸ್ಥ ಬೋರಿಸ್ ಕಾಂಟೆಮಿರೊವ್ ಹೇಳಿದ್ದಾರೆ.