ಮಾಸ್ಕೋ: ಜಿ20(G20) ಶೃಂಗಸಭೆಯಲ್ಲಿ ಭಾಗವಹಿಸದೇ ಇರಲು ರಷ್ಯಾ ಅಧ್ಯಕ್ ವ್ಲಾದಿಮಿರ್ ಪುಟಿನ್(Vladimir Putin) ನಿರ್ಧರಿಸಿದ್ದಾರೆ.
ಇಂಡೋನೇಷ್ಯದ(Indonesia) ಬಾಲಿಯಲ್ಲಿ ನ.15 ಮತ್ತು 16 ರಂದು ಶೃಂಗಸಭೆ ನಡೆಯಲಿದೆ. ಈ ಶೃಂಗಸಭೆಯಲ್ಲಿ ತನ್ನ ಹತ್ಯೆ ಮಾಡಬಹುದು ಎಂಬ ಕಾರಣಕ್ಕೆ ಭಾಗವಹಿಸದೇ ಇರಲು ನಿರ್ಧಾರ ತೆಗೆದುಕೊಂಡಿದ್ದಾರೆ.
Advertisement
Advertisement
ಅಮೆರಿಕ, ಯುಕೆ ಅಥವಾ ಉಕ್ರೇನ್ ಪುಟಿನ್ ಹತ್ಯೆಗೆ ಸಂಚು ರೂಪಿಸಿದೆ ಎಂದು ರಷ್ಯಾದ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಯಲ್ಲಿ ಪುಟಿನ್ ಶೃಂಗಸಭೆಗೆ ತೆರಳುತ್ತಿಲ್ಲ. ಇದನ್ನೂ ಓದಿ: ರಷ್ಯಾ ಆಕ್ರಮಣದಿಂದ ನಾಶವಾದ ವಿಶ್ವದ ದೈತ್ಯ ವಿಮಾನ ಮರು ನಿರ್ಮಾಣಕ್ಕೆ ಉಕ್ರೇನ್ ಚಿಂತನೆ
Advertisement
ಈ ಸಭೆಯಲ್ಲಿ ಪುಟಿನ್ ಅವರನ್ನು ಅವಮಾನ ಮಾಡುವ ಸಾಧ್ಯತೆಯಿದೆ. ಉದಾಹರಣೆಗೆ ಕೆಲವು ಅಂಗವಿಕಲ ಸಾಮಾಜಿಕ ಕಾರ್ಯಕರ್ತರು ಪುಟಿನ್ ಅವರನ್ನು ಕೆಳಗೆ ಬೀಳಿಸುತ್ತಾರೆ. ಇದಕ್ಕೆ ವಿಶ್ವದ ಮಾಧ್ಯಮಗಳು ಕೆಳಗೆ ಬಿದ್ದ ಪುಟಿನ್ ಎಂದು ವರದಿ ಮಾಡುತ್ತವೆ. ಹುಚ್ಚು ಪಾಶ್ಚಾತ್ಯ ಮಾಧ್ಯಮಗಳು ಈ ರೀತಿಯ ಸುದ್ದಿ ಮಾಡಲು ಪ್ಲಾನ್ ಮಾಡಿದೆ. ಈ ಎಲ್ಲಾ ಕಾರಣಗಳಿಂದ ಪುಟಿನ್ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ರಷ್ಯಾ ಹೇಳಿದೆ.