ಮಾಸ್ಕೋ: ರಷ್ಯಾ ಒಕ್ಕೂಟದ ವಿಶೇಷ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಮತ್ತು ಅವರ ನಿಷ್ಕಲ್ಮಶ ಸೇವೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಧನ್ಯವಾದ ಅರ್ಪಿಸಿದ್ದಾರೆ.
Advertisement
ಮಾಸ್ಕೋ ಕ್ರೆಮ್ಲಿನ್‍ನಲ್ಲಿ ಮಾತನಾಡಿದ ಅವರು, ನಾನು ವಿಶೇಷ ಕಾರ್ಯಾಚರಣೆ ಪಡೆಗಳ ಕಮಾಂಡ್, ಸಿಬ್ಬಂದಿಗೆ, ರಷ್ಯಾದ ಜನತೆ ಮತ್ತು ನಮ್ಮ ಮಹಾನ್ ಮಾತೃಭೂಮಿಗೆ ಅವರು ಮಾಡಿದ ನಿಷ್ಕಲ್ಮಶ ಸೇವೆಗಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರಾಷ್ಟ್ರಗೀತೆ ಹಾಡಿದ ಉಕ್ರೇನ್ ಮಹಿಳೆಯ ವೀಡಿಯೋ ವೈರಲ್
Advertisement
Advertisement
ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿತು. ಅಂದಿನಿಂದ ರಷ್ಯಾದ ಪಡೆಗಳು ಉಕ್ರೇನ್‍ನಾದ್ಯಂತ ಮಿಲಿಟರಿ ನೆಲೆಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದೆ. ಇದೀಗ ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಒಳ ನುಗ್ಗಲು ದಾರಿ ಹುಡುಕುತ್ತಿದೆ. ಇದನ್ನೂ ಓದಿ: ಉಕ್ರೇನ್‍ನ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ- ಬಾಲಕಿ ಸೇರಿ 6 ಮಂದಿ ಸಾವು
Advertisement
ಇದೀಗ ರಷ್ಯಾದ ಪಡೆ ಉಕ್ರೇನ್ ದೇಶದ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಸ್ಫೋಟಗೊಳಿಸಿದ್ದಾರೆ. ರಷ್ಯಾದ ಕ್ಷಿಪಣಿಗಳು ಕೈವ್‍ನ ನೈಋತ್ಯದ ಉಕ್ರೇನಿಯನ್ ಪಟ್ಟಣವಾದ ವಾಸಿಲ್ಕಿವ್‍ಗೆ ಅಪ್ಪಳಿಸಿ ತೈಲ ಟರ್ಮಿನಲ್ ಸುಟ್ಟು ಹಾಕಲಾಗಿದೆ.
ಭಾನುವಾರ ರಷ್ಯಾ ಪಡೆಗಳು ದಕ್ಷಿಣ ಉಕ್ರೇನಿಯನ್ ನಗರಗಳಾದ ಖೆರ್ಸನ್ ಮತ್ತು ಬರ್ಡಿಯಾನ್ಕ್ಸ್‍ವನ್ನು ಸಂಪೂರ್ಣವಾಗಿ ನಿರ್ಬಂಧಿಸಿವೆ. ಹೆನಿಚೆಸ್ಕ್ ಪಟ್ಟಣ ಮತ್ತು ಖೆರ್ಸನ್ ಬಳಿಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.