ಮಾಸ್ಕೋ: ಕಳೆದ 2 ತಿಂಗಳಿಗೂ ಅಧಿಕ ಸಮಯದಿಂದ ಉಕ್ರೇನ್ ವಿರುದ್ಧ ಯುದ್ಧ ಸಾರಿಸುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಮತ್ತೊಂದು ಆತಂಕ ಶುರುವಾಗಿದೆ. ಈಗಾಗಲೇ ಕ್ಯಾನ್ಸರ್ ಕಾಯಿಲೆಯಿಂದ ನಿರಂತರ ಆರೋಗ್ಯ ಸಮಸ್ಯೆಯಲ್ಲಿರುವ ಪುಟಿನ್‌ಗೆ ಡೆಡ್‌ಲೈನ್ ಫಿಕ್ಸ್ ಆಗಿದೆ.
ಏಕೆಂದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಹೆಚ್ಚೆಂದರೆ ಅವರಿನ್ನು 3 ವರ್ಷ ಬದುಕಿರಬಹುದೆಂದು ವೈದ್ಯರು ಹೇಳಿರುವುದಾಗಿ ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್‌ಎಸ್‌ಬಿಯ ವರದಿ ಹೇಳಿದೆ.
Advertisement
Advertisement
69 ವರ್ಷದ ರಷ್ಯಾದ ಅಧ್ಯಕ್ಷ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಪುಟಿನ್ ಅವರ ಕಣ್ಣಿನ ದೃಷ್ಟಿ ಗಂಭೀರವಾಗಿ ಹದಗೆಟ್ಟಿದೆ. ಅವರ ಬೆರಳುಗಳೂ ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ಗುಪ್ತಚರ ಇಲಾಖೆಯ ಮೂಲಗಳಿಂದ ಮಾಧ್ಯಮಗಳು ವರದಿ ಮಾಡಿವೆ.
Advertisement
Advertisement
ಗುಪ್ತಚರ ಸಂಸ್ಥೆಯ ವರದಿಯನ್ನು ಬ್ರಿಟನ್ನಲ್ಲಿ ಪುಟಿನ್ ಹತ್ಯೆ ಮಾಡಲು ಸಂಚು ರೂಪಿಸಿರುವವರಿಗೆ ತಿಳಿಯದಂತೆ ಬಚ್ಚಿಡಲಾಗಿದೆ. ದುರ್ಬಲತೆಗೆ ಕಾರಣವಾಗುತ್ತದೆ ಎಂಬ ಭಯದಿಂದ ಗ್ಲಾಸ್ ಧರಿಸಲು ಪುಟಿನ್ ತಿರಸ್ಕರಿಸುತ್ತಿದ್ದಾರೆ. ತನ್ನ ಕೆಳಗೆ ಕೆಲಸ ಮಾಡುವವರ ವಿರುದ್ಧ ಅವರು ಇತ್ತೀಚೆಗೆ ಅನಿಯಂತ್ರಿತ ಕೋಪದಿಂದ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪುಟಿನ್ ಇದೇ ತಿಂಗಳಲ್ಲಿ ಕ್ಯಾನ್ಸರ್ ಸರ್ಜರಿಗೆ ಒಳಗಾಗಿದ್ದರು. ವೈದರ ಸಲಹೆ, ಚಿಕಿತ್ಸೆಯಿಂದ ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ರಷ್ಯಾದ ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ.