ವಾರ್ಸಾ: ಉಕ್ರೇನ್ ಮೇಲೆ ರಷ್ಯಾ (Russia) ಕ್ಷಿಪಣಿ ದಾಳಿ ನಡೆಸುತ್ತಿದ್ದ ವೇಳೆ ಎರಡು ಕ್ಷಿಪಣಿಗಳು ಪೂರ್ವ ಪೋಲೆಂಡ್ (Poland) ಭೂಪ್ರದೇಶದಲ್ಲಿ ಬಿದ್ದು ಇಬ್ಬರು ನಾಗರಿಕರು ಸಾವನ್ನಪ್ಪಿದ ಘಟನೆ ನಡೆದಿದೆ.
ಉಕ್ರೇನ್‍ನ ಗಡಿಯಲ್ಲಿರುವ ಪೋಲೆಂಡ್ ದೇಶದ ಲುಬ್ಲಿನ್ ವೊವೊಡೆಶಿಪ್‍ನಲ್ಲಿರುವ ಪ್ರಜೆವೊಡೋವ್‍ನ ಜನನಿಬಿಡ ಪ್ರದೇಶದಲ್ಲಿ ಎರಡು ರಾಕೆಟ್‍ಗಳು ಬಿದ್ದಿವೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ, ಪೊಲೀಸರು ಮತ್ತು ಸೇನೆಯು ಘಟನಾ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಹೇಳಿದೆ. ಉಕ್ರೇನ್ ಆಕ್ರಮಣದ ನಂತರ ರಷ್ಯಾದ ಶಸ್ತ್ರಾಸ್ತ್ರಗಳು ನ್ಯಾಟೋ ದೇಶದ ಮೇಲೆ ಬಂದಿರುವುದು ಇದೇ ಮೊದಲ ಬಾರಿಗೆ ಆಗಿದೆ.
Advertisement
I’m discussing a meeting with world leaders on the loss of life in Eastern Poland and the United States’ commitment to support Poland’s investigation. https://t.co/duaAT0lEoZ
— President Biden (@POTUS) November 16, 2022
Advertisement
ಪೋಲೆಂಡ್‍ನಲ್ಲಿ ಇಬ್ಬರು ಸಾವನ್ನಪ್ಪಿದ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) G7 ಹಾಗೂ ನ್ಯಾಟೋ ನಾಯಕರೊಂದಿಗೆ ತುರ್ತು ಸಭೆ ಕರೆದಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ 20 ಸಭೆಗಾಗಿ ಜಾಗತಿಕ ನಾಯಕರು ಬುಧವಾರ ಪೋಲೆಂಡ್‍ನಲ್ಲಿ ಸ್ಫೋಟಗಳ ನಂತರ ತುರ್ತು ಸಭೆ ನಡೆಸಿದರು. ಅಮೆರಿಕದ ಪೂರ್ಣ ಬೆಂಬಲದೊಂದಿಗೆ, ಪೋಲೆಂಡ್ ಸಹಕಾರದಲ್ಲಿ ಈ ಪ್ರಕರಣದ ತನಿಖೆ ನಡೆಯಲಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹೆತ್ತ ಮಗುವನ್ನೇ ಮಾರಿದ ತಾಯಿ – ನಾಲ್ಕೂವರೆ ವರ್ಷದ ಬಳಿಕ ಮತ್ತೆ ತಂದೆಯನ್ನ ಸೇರಿದ ಬಾಲಕ
Advertisement
President Biden on Missile Strike in Poland: “I’m going to make sure we figure out exactly what happened…and then we’re going to collectively determine our next step as we investigate and proceed.” pic.twitter.com/pY55Feq66m
— CSPAN (@cspan) November 16, 2022
Advertisement
ನ್ಯಾಟೊ ಸದಸ್ಯ ರಾಷ್ಟ್ರ ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ವಿದ್ಯಮಾನಗಳಿಗೆ ಕಾರಣವಾಗಿದೆ. ಇಬ್ಬರು ನಾಗರಿಕರ ಸಾವಿಗೆ ಪೋಲೆಂಡ್ ತೀವ್ರ ಸಂತಾಪ ಸೂಚಿಸಿದೆ. ಪೋಲೆಂಡ್ ಅಧ್ಯಕ್ಷ ಅಂಡ್ರೇಜ್ ದುದಾ ಬುಧವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ವಿವಾದಿತ ಬಸ್ ನಿಲ್ದಾಣಕ್ಕೆ ರಾತ್ರೋರಾತ್ರಿ ನಾಮಫಲಕ – ಸುತ್ತೂರು ಶ್ರೀಗಳ, ಮೋದಿ ಫೋಟೋ ಬಳಕೆ