ಮಾಸ್ಕೋ: ಬ್ರಹ್ಮೋಸ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ್ದ ರಷ್ಯಾದ ಕ್ಷಿಪಣಿ ವಿನ್ಯಾಸಕ ಅಲೆಕ್ಸಾಂಡರ್ ಲಿಯೊನೊವ್ 74 ನೇ ವಯಸ್ಸಿಗೆ ನಿಧನರಾಗಿದ್ದಾರೆ.
ಹೈಪರ್‌ಸಾನಿಕ್ ಕ್ಷಿಪಣಿ ಜಿರ್ಕಾನ್ ಮತ್ತು ಹೊಸ ಪೀಳಿಗೆಯ ಇಂಡೋ-ರಷ್ಯನ್ ಬ್ರಹ್ಮೋಸ್ ಎನ್‌ಜಿ ಅಭಿವೃದ್ಧಿಯಲ್ಲಿ ರಷ್ಯಾದ ಉನ್ನತ ಕ್ಷಿಪಣಿ ವಿನ್ಯಾಸಕ ಅಲೆಕ್ಸಾಂಡರ್ ಲಿಯೊನೊವ್ ಪ್ರಮುಖ ಪಾತ್ರವಹಿಸಿದ್ದರು.
ಲಿಯೊನೊವ್, ನವದೆಹಲಿ ಮೂಲದ ಬ್ರಹ್ಮೋಸ್ ಏರೋಸ್ಪೇಸ್‌ನಲ್ಲಿ ರಷ್ಯಾದ ಜಂಟಿ ಉದ್ಯಮ ಪಾಲುದಾರ NPO ಮಶಿನೋಸ್ಟ್ರೊಯೆನಿಯಾ (NPOMASH) ನ CEO ಮತ್ತು ಮುಖ್ಯ ವಿನ್ಯಾಸಕರಾಗಿದ್ದರು.

