ಪಣಜಿ: ಗೋವಾದಲ್ಲಿ (Goa) ರಷ್ಯಾದ (Russia) ವ್ಯಕ್ತಿಯೊಬ್ಬ ಇಬ್ಬರು ಸ್ನೇಹಿತೆಯರ ಕತ್ತು ಸೀಳಿ ಕೊಂದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಗೋವಾದ ಅರಾಂಬೋಲ್ ಮತ್ತು ಮೊರ್ಜಿಮ್ ಗ್ರಾಮದಲ್ಲಿ ವಾಸವಾಗಿದ್ದ ಎಲೆನಾ ವನೀವಾ (37) ಮತ್ತು ಎಲೆನಾ ಕಸ್ತನೋವಾ (37) ಅವರನ್ನು ಅಲೆಕ್ಸಿ ಲಿಯೊನೊವ್ ಎಂಬಾತ ಕೊಲೆಗೈದಿದ್ದಾನೆ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭರತ್ ರೆಡ್ಡಿ ಆಪ್ತನ ಇಬ್ಬರು ಗನ್‌ಮ್ಯಾನ್‌ಗಳು ಅರೆಸ್ಟ್ – ಶನಿವಾರ ಬಳ್ಳಾರಿಯಲ್ಲಿ ರೆಡ್ಡಿ, ರಾಮುಲು ಪವರ್‌ಶೋ
ಜನವರಿ 14 ರಂದು ಆರೋಪಿ ಮೊರ್ಜಿಮ್‌ನಲ್ಲಿ ವಾಸವಾಗಿದ್ದ ಸ್ನೇಹಿತೆ ಎಲೆನಾ ವನೀವಾ ಅವರ ಕುತ್ತಿಗೆಯನ್ನು ಸೀಳಿ ಕೊಂದಿದ್ದಾನೆ. ಜನವರಿ 15 ರಂದು ಸಂಜೆ ಎಂಟು ಕಿಲೋಮೀಟರ್ ದೂರದಲ್ಲಿರುವ ಅರಂಬೋಲ್ ಗ್ರಾಮಕ್ಕೆ ತನ್ನ ಸ್ನೇಹಿತೆ ಎಲೆನಾ ಕಸ್ತನೋವಾ ಅವರನ್ನು ಭೇಟಿಯಾಗಲು ಹೋಗಿದ್ದ. ಬಳಿಕ ಆಕೆಯನ್ನು ಹಗ್ಗದಿಂದ ಕಟ್ಟಿ ಆಕೆಯ ಕತ್ತು ಸೀಳಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡೂ ಶವಗಳು ಶುಕ್ರವಾರ (ಜ.16) ಪತ್ತೆಯಾಗಿವೆ. ಇನ್ನೂ ವನೀವಾ ಅವರು ವಾಸವಾಗಿದ್ದ ಮನೆ ಮಾಲೀಕರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಲಿಯೊನೊವ್‌ನನ್ನು ಪೊಲೀಸರು ಬಂಧಿಸಿದ್ದು, ಜೋಡಿ ಕೊಲೆಗಳ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ!

