ಬೀಜಿಂಗ್: ರಷ್ಯಾದ ಮೇಲೆ ಅಮೆರಿಕ ಯುರೋಪಿಯನ್ ದೇಶಗಳು ಸೇರಿದಂತೆ ಹಲವು ದೇಶಗಳು ನಾನಾ ಆರ್ಥಿಕ ನಿರ್ಬಂಧಗಳನ್ನು ಹೇರಿದೆ. ಈ ಬೆನ್ನಲ್ಲೇ ರಷ್ಯನ್ ಉದ್ಯಮಿಗಳು ಮತ್ತು ಕಂಪನಿಗಳು ತಮ್ಮ ದೇಶದಲ್ಲಿರುವ ಚೀನಾ ಮೂಲದ ಬ್ಯಾಂಕ್‍ಗಳಲ್ಲಿ ಖಾತೆ ಆರಂಭಿಸುತ್ತಿದ್ದಾರೆ.
ರಷ್ಯಾ ರಾಜಧಾನಿ ಮಾಸ್ಕೋ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಚೀನಾದ ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ, ಅಗ್ರಿಕಲ್ಚರ್ ಬ್ಯಾಂಕ್ ಆಫ್ ಚೀನಾ ಹೀಗೆ ಮೊದಲಾದವುಗಳು ಹಲವು ವರ್ಷಗಳಿಂದ ಸೇವೆಸಲ್ಲಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಈ ಬ್ಯಾಂಕ್‍ಗಳಲ್ಲಿ ರಷ್ಯಾದ ಮೂಲದ 200 ರಿಂದ 300 ಉದ್ಯಮಿಗಳು ಹೊಸ ಬ್ಯಾಂಕ್ ಖಾತೆ ತೆರದಿದ್ದಾರೆ ಎಂದು ಬ್ಯಾಂಕ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಒಲಿಂಪಿಕ್ಸ್ ಮುಗಿಯುವವರೆಗೆ ಯುದ್ಧವನ್ನು ಮುಂದೆ ಹಾಕಿ ಎಂದಿದ್ದ ಚೀನಾ!
ಆರ್ಥಿಕ ನಿರ್ಬಂಧ ಹಿನ್ನಲೆಯಲ್ಲಿ ರಷ್ಯಾದ ಉದ್ಯಮಿಗಳು ಇದೀಗ ಅಮೆರಿಕದ ಡಾಲರ್, ಯರೋಪ್‍ನ ಯುರೋ, ರಷ್ಯಾದ ರೂಬಲ್ ಬಳಸಿ ಜಾಗತಿಕ ಮಟ್ಟದಲ್ಲಿ ವಹಿವಾಟು ನಡೆಸುವುದು ಅಸಾಧ್ಯ. ಹೀಗಾಗಿ ಇವುಗಳನ್ನು ಹೊರತುಪಡಿಸಿದರೆ ಇನ್ನು ಮಾನ್ಯತೆ ಹೊಂದಿರುವ ಚೀನಾದ ಕರೆನ್ಸಿಯಾದ ಯುವಾನ್‍ನಲ್ಲೇ ವಹಿವಾಟು ನಡೆಸಬೇಕು. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!
ಜಾಗತಿಕ ನಿರ್ಬಂಧದಿಂದ ಡಾಲರ್‌ನಲ್ಲಿ ವಹಿವಾಟು ಅಸಾಧ್ಯವಾಗಿದೆ. ಹೀಗಾಗಿ ಚೀನಿ ಕರೆನ್ಸಿಯಲ್ಲಿ ವಹಿವಾಟಿಗೆ ರಷ್ಯನ್ನರು ಸಜ್ಜಾಗಿದ್ದಾರೆ. ಹೀಗಾಗಿ ಅಗತ್ಯ ಹಣಕಾಸಿನ ವಹಿವಾಟಿಗೆ ಅವಕಾಶ ಕಲ್ಪಿಸಲು ರಷ್ಯಾ ಕಂಪನಿಗಳು ಚೀನಾ ಬ್ಯಾಂಕ್‍ಗಳನ್ನು ಖಾತೆ ತೆರೆಯುತ್ತಿದ್ದಾರೆ ಎನ್ನಲಾಗಿದೆ.