ಮಾಸ್ಕೋ: ಸ್ವಂತ ಮಗಳ ಮೇಲೆಯೇ ತಂದೆ ತಾಯಿ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ ಆಘಾತಕಾರಿ ಘಟನೆ ರಷ್ಯಾದಲ್ಲಿ ನಡೆದಿದೆ.
ಆರೋಪಿಗಳಿಬ್ಬರೂ 34 ವರ್ಷದವರಾಗಿದ್ದು 12 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ದಂಪತಿಯನ್ನ ಪೊಲೀಸರು ಈಗಾಗಲೇ ಬಂಧಿಸಿದ್ದು, ಸದ್ಯ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಅಪರಾಧ ಸಾಬೀತಾದರೆ 20 ವರ್ಷಗಳ ಜೈಲು ಶಿಕ್ಷೆ ಎದುರಿಸಲಿದ್ದಾರೆ ಎಂದು ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.
2016ರ ಡಿಸೆಂಬರ್‍ನಿಂದ 2017ರ ಮಾರ್ಚ್ ವರೆಗಿನ ಅವಧಿಯಲ್ಲಿ ಆರೋಪಿ ದಂಪತಿ ಮಗಳಿಗೆ ಸತತವಾಗಿ ಹಿಂಸೆ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಹೆಂಡತಿ ಇರುತ್ತಿದ್ದ ಹಾಸಿಗೆ ಮೇಲೆಯೇ ಪಾಪಿ ತಂದೆ ಮಗಳ ಮೇಲೆ ಪ್ರತಿ ಎರಡು ದಿನಕ್ಕೊಮ್ಮೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಮಹಿಳೆ ಕೃತಕ ಮರ್ಮಾಂಗ ಬಳಸಿ ಮಗಳಿಗೆ ಕಿರುಕುಳ ನೀಡಿದ ಪ್ರತ್ಯೇಕ ಆರೋಪ ಎದುರಿಸುತ್ತಿದ್ದಾಳೆ.
ಇಂಥ ಕ್ರೂರಿ ತಂದೆ ತಾಯಿಗಳಿಗೆ ಮಗಳ ಮೇಲಿನ ಹಕ್ಕನ್ನು(ಪೇರೆಂಟಲ್ ರೈಟ್ಸ್) ನಿರಾಕರಿಸಲಾಗಿದೆ. ಅಂದ್ರೆ ಇನ್ಮುಂದೆ ಬಾಲಕಿಯನ್ನ ಅವರು ಸಾಕಲು ಸಾಧ್ಯವಿಲ್ಲ. ಸದ್ಯ ಬಾಲಕಿಯನ್ನ ಆರೈಕೆ ಮಾಡಲಾಗ್ತಿದೆ ಎಂದು ವರದಿಯಾಗಿದೆ.
ನಾನು 13 ವರ್ಷದವಳಿದ್ದಾಗ ನನ್ನ ಮೇಲೂ ಅತ್ಯಾಚಾರ ನಡೆದಿತ್ತು ಎಂದು ನಿರ್ಲಜ್ಜ ಮಹಿಳೆ ಹೇಳಿಕೊಂಡಿದ್ದಾಳೆ. ನಾನು ಹಾಗೂ ನನ್ನ ಗಂಡ ಮಗಳನ್ನ ಮುಂದಿನ ಜೀವನಕ್ಕಾಗಿ ತಯಾರು ಮಾಡ್ತಿದ್ವಿ ಎಂದು ತನ್ನ ನೀಚ ಕೃತ್ಯಕ್ಕೆ ಸಮರ್ಥನೆ ನೀಡಿದ್ದಾಳೆ.
ಬಾಲಕಿ ತನ್ನ ಋತುಚಕ್ರಕ್ಕೆ ಸಂಬಂಧಿಸಿದ ತೊಂದರೆಯ ಬಗ್ಗೆ ವೈದ್ಯರ ಬಳಿ ಹೋದಾಗ ಈ ಭಯಾನಕ ಸಂಗತಿ ಬೆಳಕಿಗೆ ಬಂದಿದೆ. ಬಾಲಕಿ ಕನ್ಯೆಯಲ್ಲ ಎಂಬುದು ವೈದ್ಯರಿಗೆ ಗೊತ್ತಾಗಿದೆ. ನಂತರ ಸಂತ್ರಸ್ತ ಬಾಲಕಿ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾಳೆ.
ನಂತರ ಆರೋಪಿ ದಂಪತಿ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾರೆ. ಮಗಳನ್ನು ಬಲವಂತವಾಗಿ ಒಂದೇ ಹಾಸಿಗೆಯಲ್ಲಿ ಮಲಗಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾರೆ. ಬಾಲಕಿಯ ಅಜ್ಜ, ಅಜ್ಜಿ ಅದೇ ಫ್ಲ್ಯಾಟ್‍ನಲ್ಲಿ ವಾಸವಿದ್ದರೂ ಲೈಂಗಿಕ ದೌರ್ಜನ್ಯದ ಬಗ್ಗೆ ಅವರಿಗೆ ಯಾವುದೇ ಮಾಹಿತಿ ತಿಳಿದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.