Connect with us

Crime

30 ಜನರನ್ನು ಕೊಂದು ತಿಂದ ನರಭಕ್ಷಕ ದಂಪತಿ ಅರೆಸ್ಟ್

Published

on

ಮಾಸ್ಕೋ: ಮನುಷ್ಯರನ್ನು ಕೊಂದು ಅವರ ದೇಹದ ವಿವಿಧ ಭಾಗಗಳನ್ನು ತಿನ್ನುತ್ತಿದ್ದ ನರಭಕ್ಷಕ ದಂಪತಿಯನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ.

ರಷ್ಯಾದ ಕ್ರಾಸ್ನೋಡರ್ ಪ್ರದೇಶ ನಿವಾಸಿಗಳಾದ ನಟಾಲಿಯಾ ಬಕ್ಯೀವಾ ಮತ್ತು ಡಿಮಿಟ್ರಿ ಬಕ್ಯೀವ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ಮನುಷ್ಯರಿಗೆ ಅಧಿಕ ಪ್ರಮಾಣದ ನಿದ್ರೆ ಮಾತ್ರೆಗಳನ್ನು ನೀಡಿ ಅವರು ಬದುಕಿರುವಾಗಲೇ ಅವರ ಚರ್ಮ ಸುಲಿದು, ದೇಹದ ವಿವಿಧ ಭಾಗಗಳನ್ನು ದಂಪತಿ ಕಿತ್ತು ತಿನ್ನುತ್ತಿದ್ದರು. ನಂತರ ಉಳಿದ ಭಾಗಗಳನ್ನು ಡಿಪ್ ಫ್ರಿಜ್ ನಲ್ಲಿಟ್ಟು ಶೇಖರಿಸುತ್ತಿದ್ದರು ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಕ್ರಾಸ್ನೋಡರ್ ನಗರ ಪೊಲೀಸರಿಗೆ ರಸ್ತೆಯಲ್ಲಿ ಮೊಬೈಲ್ ಒಂದು ದೊರೆತಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಮನುಷ್ಯ ದೇಹದ ವಿವಿಧ ಭಾಗಗಳನ್ನು ಕಿತ್ತು ತಿನ್ನುತ್ತಿರುವ ಫೋಟೋಗಳು ಲಭ್ಯವಾಗಿತ್ತು. ಈ ಮೊಬೈಲ್ ಫೋಟೋಗಳನ್ನು ತನಿಖೆಗೆ ಒಳಪಡಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ತನಿಖೆಯ ವೇಳೆ ದಂಪತಿ ಸುಮಾರು 30ಕ್ಕೂ ಹೆಚ್ಚು ಜನರನ್ನು ಕೊಂದು ಅವರ ದೇಹಗಳನ್ನು ತಿಂದಿರುವ ಮಾಹಿತಿಯನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಮಿಲಿಟರಿ ನೆಲೆಯಲ್ಲಿ ಈ ದಂಪತಿ ಕೆಲಸ ಮಾಡುತ್ತಿದ್ದರು.

Click to comment

Leave a Reply

Your email address will not be published. Required fields are marked *

www.publictv.in