ಮಾಸ್ಕೋ: ಸಾಮಾನ್ಯವಾಗಿ ಹಲವು ಕಂಪನಿಗಳನ್ನು ಮಹಿಳಾ ಸಿಬ್ಬಂದಿ ಫಾರ್ಮಲ್ ಅಥವಾ ಸೆಮಿ ಫಾರ್ಮಲ್ ಉಡುಪುಗಳನ್ನು ಧರಿಸಬೇಕು ಎಂಬ ನಿಯಮವಿರುತ್ತೆ. ಆದರೆ ರಷ್ಯಾದ ಕಂಪನಿಯೊಂದು ಸ್ಕರ್ಟ್ ಅಥವಾ ಶಾರ್ಟ್ ಡ್ರೆಸ್ ಧರಿಸಿ ಕೆಲಸಕ್ಕೆ ಬಂದರೆ ಹೆಚ್ಚುವರಿ ಬೋನಸ್ ನೋಡುತ್ತೇವೆ ಎಂದು ಘೋಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದೆ.
Advertisement
ಹೌದು. ವಿವಿಧ ಕಂಪನಿಗಳು ಮಹಿಳೆಯರ ಮೇಲೆ ಕೆಲಸದ ಸ್ಥಳದಲ್ಲಿ ನಡೆಯುವ ದೌರ್ಜನ್ಯ ತಡೆಯಲು ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ರಷ್ಯಾದ ಅಲ್ಯುಮಿನಿಯಂ ಉತ್ಪಾದಿಸುವ ಟ್ಯಾಟ್‍ಪ್ರೋಫ್ ಹೆಸರಿನ ಕಂಪನಿ ವಿಚಿತ್ರ ಆಫರ್ ಮಹಿಳಾ ಸಿಬ್ಬಂದಿ ಮುಂದಿಟ್ಟಿದೆ.
Advertisement
`ಫೆಮಿನಿಟಿ ಮ್ಯಾರಥಾನ್’ ಎಂಬ ಅಭಿಯಾನವನ್ನ ಕಂಪನಿ ಆರಂಭಿಸಿದೆ. ಈ ಅಭಿಮಾನದ ವಿಶೇಷತೆ ಏನಪ್ಪಾ ಅಂದರೆ, ಸ್ಕರ್ಟ್ ಅಥವಾ ಮೊಣಕಾಲಿನಿಂದ 5 ಸೆ.ಮೀ ಉದ್ದವಿಲ್ಲದ ಡ್ರೆಸ್ ಧರಿಸಿ ಮಹಿಳಾ ಸಿಬ್ಬಂದಿ ಆಫಿಸ್‍ಗೆ ಬರಬೇಕಾಗುತ್ತದೆ. ಹೌದು ಈ ರೀತಿ ಬಟ್ಟೆ ಧರಿಸಿ ಮಹಿಳಾ ಸಿಬ್ಬಂದಿ ಕೆಲಸಕ್ಕೆ ಬಂದರೆ ನಿತ್ಯ ಅಂದಾಜು 106 ರೂಪಾಯಿ (100 ರೂಬೆಲ್ಸ್) ಎಕ್ಸ್ಟ್ರಾ ಬೋನಸ್ ನೀಡುವುದಾಗಿ ಕಂಪನಿ ಆಫರ್ ನೀಡಿದೆ.
Advertisement
Advertisement
ಪುರುಷರಂತೆ ಮಹಿಳೆಯರು ಕೆಲಸದಲ್ಲಿ ಸರಿ ಸಮಾನವಾಗಿ ಕೆಲಸ ಮಾಡುತ್ತಾರೆ. ಆದರಿಂದ ಅವರಿಗೆ ಕಂಪನಿಯಲ್ಲಿ ಉತ್ತಮ ವಾತಾವರಣ ಕಲ್ಪಿಸಿಕೊಡಲು ಈ ಅಭಿಯಾನ ಶುರುಮಾಡಿದ್ದೇವೆ. ಈಗಾಗಲೇ ಈ ಅಭಿಯಾನಕ್ಕೆ 60ಕ್ಕೂ ಹೆಚ್ಚು ಮಂದಿ ಮಹಿಳಾ ಸಿಬ್ಬಂದಿ ಪಾಲ್ಗೊಂಡಿದ್ದಾರೆ ಎಂದು ಕಂಪನಿ ತಿಳಿಸಿದೆ.
ಅಲ್ಯುಮಿನಿಯಂ ಉತ್ಪಾದಿಸುವ ಟ್ಯಾಟ್‍ಪ್ರೋಫ್ ಎಂಬ ಕಂಪನಿ, ಕರ್ತವ್ಯದ ಸ್ಥಳವನ್ನು ಆಕರ್ಷಣಿಯಗೊಳಿಸಲು ಈ ಕ್ರಮ ಎಂದು ಹೇಳಿಕೊಂಡಿದೆ. ಆದರೆ ಕಂಪನಿಯ ಆಫರ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಈ ಟೀಕೆಗಳನ್ನು ಬದಿಗೊತ್ತಿ ಕಂಪನಿ ಇದೇ ತಿಂಗಳಲ್ಲಿ ಫೆಮಿನಿಟಿ ಎಂಬ ಕಾರ್ಯಕ್ರಮ ಆಯೋಜಿಸಲಿದೆ. ಇದರಲ್ಲಿ ಪುರುಷ ಸಿಬ್ಬಂದಿಗೂ ಕೂಡ ಸ್ಪರ್ಧೆಯನ್ನು ನಡೆಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.