ಮಾಸ್ಕೋ: ರಷ್ಯಾದ ಕಂಪನಿಯೊಂದರ ಬಿಯರ್ ಬಾಟಲ್‌ಗಳ ಮೇಲೆ ಭಾರತದ ರಾಷ್ಟ್ರಪಿತ ಗಾಂಧೀಜಿ ಅವರ ಭಾವಚಿತ್ರ ಮುದ್ರಿಸಿ ಮಾರಾಟ ಮಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ಬ್ರೂವರೀಸ್ ಕಂಪನಿ ತಯಾರಿಸುವ ಬಿಯರ್ ಬಾಟಲ್‌ಗಳಲ್ಲಿ ಗಾಂಧೀಜಿ ಅವರ ಭಾವಚಿತ್ರ ಹಾಗೂ ಸಹಿ ಇರುವುದು ಕಂಡುಬಂದಿದೆ. ಬಿಯರ್ ಬಾಟಲ್ ಪ್ರದರ್ಶಿಸುವ ವೀಡಿಯೋ ಇನ್‌ಸ್ಟಗ್ರಾಮ್‌ನಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
My humble request with PM @narendramodi Ji is to take up this matter with his friend @KremlinRussia_E . It has been found that Russia’s Rewort is selling Beer in the name of GandhiJi… SS pic.twitter.com/lT3gcB9tMf
— Shri. Suparno Satpathy (@SuparnoSatpathy) February 13, 2025
ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಗಾಂಧಿಯವರು ತಮ್ಮ ಜೀವನದುದ್ದಕ್ಕೂ ಮದ್ಯಪಾನದಿಂದ ದೂರವಿರುವುದನ್ನು ಪ್ರತಿಪಾದಿಸಿದ್ದರು. ಈಗ ಎಣ್ಣೆಗೆ ಅವರ ಫೋಟೊವನ್ನೇ ಬಳಸಿರುವುದು ಸರಿಯಲ್ಲ ಎಂದು ಅನೇಕರು ಟೀಕಿಸಿದ್ದಾರೆ.
ಮದ್ಯಪಾನಕ್ಕೆ ಸಂಬಂಧಿಸಿದಂತೆ ಗಾಂಧಿಯವರ ಚಿತ್ರವನ್ನು ಬಳಸುತ್ತಿರುವುದು ಇದೇ ಮೊದಲಲ್ಲ. 2019 ರಲ್ಲಿ, ಇಸ್ರೇಲ್‌ನ 71 ನೇ ಸ್ವಾತಂತ್ರ್ಯ ದಿನಾಚರಣೆಯ ನೆನಪಿಗಾಗಿ ಇಸ್ರೇಲಿ ಕಂಪನಿಯೊಂದು ತನ್ನ ಮದ್ಯದ ಬಾಟಲಿಗಳ ಮೇಲೆ ಮಹಾತ್ಮ ಗಾಂಧಿಯವರ ಚಿತ್ರವನ್ನು ಹಾಕುವ ಮೂಲಕ ವಿವಾದ ಹುಟ್ಟುಹಾಕಿತ್ತು. ಭಾರೀ ವಿರೋಧದ ಬಳಿಕ ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಿತು.