ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಭಾರತಕ್ಕೆ (India) ಸುಮಾರು 13 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿರುವುದಾಗಿ ರಷ್ಯಾದ (Russia) ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಅಷ್ಟೇ ಅಲ್ಲದೇ ಹತ್ತು ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿದೆ ಎಂದು ತಿಳಿಸಿದೆ.
ಭಾರತ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ರಗಳನ್ನು (Arms) ರಷ್ಯಾದಿಂದ ಖರೀದಿಸುವ ದೇಶವಾಗಿದೆ. ಖರೀದಿಯ ಆರ್ಡರ್‌ನಲ್ಲಿ ಶೇ.20 ರಷ್ಟು ಭಾರತದ ಪಾಲಿದೆ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.
Advertisement
Advertisement
ಈ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರು ಡಿಸೆಂಬರ್‌ನಲ್ಲಿ ಶಾಂತಿ ಮಾತುಕತೆಗೆ ಕರೆಕೊಟ್ಟಿದ್ದು ನೇರವಾಗಿ ರಷ್ಯಾ, ಉಕ್ರೇನ್ ಮೇಲೆ ನಡೆಸಿದ ದಾಳಿಯನ್ನು ಖಂಡಿಸಲು ಭಾರತಕ್ಕೆ ಸಾಧ್ಯವಾಗಿಲ್ಲ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಭಾರತಕ್ಕೆ ರಷ್ಯಾದಿಂದ ಬಂತು ಎಸ್ 400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ
Advertisement
ಭಾರತ ಸೇರಿದಂತೆ, ಚೀನಾ ಮತ್ತು ಆಗ್ನೇಯ ಏಷ್ಯಾದ ದೇಶಗಳು ರಷ್ಯಾದ ಶಸ್ತ್ರಾಸ್ತ್ರಗಳನ್ನು ಕೊಂಡುಕೊಳ್ಳಲು ಮನಸ್ಸು ಮಾಡುತ್ತಿವೆ ಎಂದು ಮಿಲಿಟರಿ ತಾಂತ್ರಿಕ ಸೇವೆಯ ಮುಖ್ಯಸ್ಥ ಡ್ಮಿಟ್ರೈ ಶುಘೈವ್ ತಿಳಿಸಿದ್ದಾಗಿ ವರದಿಯಲ್ಲಿ ಹೇಳಲಾಗಿದೆ.
Advertisement
ಏಷ್ಯಾದ ದೇಶಗಳಿಂದ ಎಸ್-400 ಟ್ರಯಾಫ್ ಕ್ಷಿಪಣಿ, ಸುಕೋಯ್ 30 ಯುದ್ಧ ವಿಮಾನಗಳು, ಮಿಗ್-29 ಹೆಲಿಕಾಪ್ಟರ್ ಮತ್ತು ಡ್ರೋಣ್ ಖರೀದಿಗೆ ಬೇಡಿಕೆಯಿದೆ ಎಂದು ಶುಘೈವ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ 14ನೇ ಅಂತರಾಷ್ಟ್ರೀಯ ಏರ್ ಶೋಗೆ 200 ಬಗೆಯ ವಿವಿಧ ಮಾದರಿಯ ಶಸ್ತ್ರಾಸ್ತ್ರಗಳು ಪ್ರದರ್ಶನಗೊಳ್ಳಲಿದೆ. ಏರ್ ಶೋನಲ್ಲಿ ಪ್ರದರ್ಶನಗೊಳ್ಳುವ ವಿಮಾನಗಳ ಬೇಡಿಕೆ ಆಧಾರದ ಮೇಲೆ ಸ್ಥಳೀಯವಾಗಿ ಉತ್ಪಾದಿಸಲು ಕಂಪನಿಗಳಿಗೆ ಭಾರತ ಒತ್ತಾಯಿಸಲಿದೆ ಎಂದು ವರದಿಯಲ್ಲಿ ತಿಳಿಸಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k