ಡಾಕಾ: ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಬಾಂಗ್ಲಾದೇಶೀಯರನ್ನೂ ಸ್ಥಳಾಂತರಿಸಿದ್ದಕ್ಕೆ ಪ್ರಧಾನಿ ಮೋದಿಗೆ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಧನ್ಯವಾದ ತಿಳಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತ ಆಪರೇಷನ್ ಗಂಗಾ ಯೋಜನೆ ಅಡಿಯಲ್ಲಿ ಉಕ್ರೇನ್‌ನ ಸುಮಿಯಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯ ನಡೆಸುತ್ತಿದೆ. ಕದನ ವಿರಾಮ ಸಂದರ್ಭದಲ್ಲಿ ಕೀವ್, ಸುಮಿ, ಖಾರ್ಕಿವ್, ಚೆರ್ನಿಹಿವ್ ಹಾಗೂ ಮರಿಯೋಪೋಲ್‌ನಿಂದ ಭಾರತೀಯರು ಗಡಿಯೆಡೆಗೆ ಧಾವಿಸುತ್ತಿದ್ದು, ಅಲ್ಲಿಂದ ಅವರನ್ನು ಏರ್‌ಲಿಫ್ಟ್ ಮಾಡಲಾಗುತ್ತಿದೆ. ಇದನ್ನೂ ಓದಿ: ಪ್ರಧಾನಿ, ಭಾರತದ ರಾಯಭಾರಿ ಕಚೇರಿಗೆ ಧನ್ಯವಾದ ತಿಳಿಸಿದ ಪಾಕ್ ಯುವತಿ
Advertisement
Advertisement
ಈ ಸಂದರ್ಭದಲ್ಲಿ ಬೆಂಗಾವಲು ಪಡೆ 9 ಬಾಂಗ್ಲಾದೇಶದ ವಿದ್ಯಾರ್ಥಿಗಳನ್ನು ಹಾಗೂ ನೇಪಾಳದ ವಿದ್ಯಾರ್ಥಿಗಳನ್ನೂ ಸ್ಥಳಾಂತರಿಸಿದೆ. ಭಾರತೀಯರೊಂದಿಗೆ ಬಾಂಗ್ಲಾದೇಶದ ವಿದ್ಯಾರ್ಥಿಗಳನ್ನೂ ಸ್ಥಳಾಂತರಿಸಿದ್ದಕ್ಕೆ ಶೇಕ್ ಹಸೀನಾ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಈಗಾಗಲೇ ಸುಮಿಯಲ್ಲಿ ಸಿಲುಕಿಕೊಂಡಿದ್ದ 694 ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಬ್ಯಾರೆಲ್‍ಗೆ 300 ಡಾಲರ್‌ಗೆ ಏರಬಹುದು: ರಷ್ಯಾ ಎಚ್ಚರಿಕೆ