ಕೀವ್: ಇರಾನಿನ (Iran) ಡ್ರೋನ್‍ಗಳನ್ನು (Drone) ಬಳಸಿ ನಮ್ಮ ಮೇಲೆ ರಷ್ಯಾ (Russia) ಸೇನೆ ದಾಳಿ ನಡೆಸಿದೆ ಎಂದು ಉಕ್ರೇನ್ (Ukraine) ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ (Volodymyr Zelensky) ಆರೋಪಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕನಸಿನ ಕ್ರಿಮಿಯಾ ರಷ್ಯಾ ಸಂಪರ್ಕಿಸುವ ಕ್ರಿಮಿಯಾ ಸೇತುವೆಯನ್ನು (Crimean Bridge) ಉಕ್ರೇನ್ ಸೇನೆ ದಾಳಿ ನಡೆಸಿ ನಾಶಮಾಡಿತ್ತು. ಉಕ್ರೇನ್‍ನ ಖೇರ್ಸನ್, ಝರ್ಝಿಯಾದಲ್ಲಿರುವ ಸೇನೆಗೆ ಇಂಧನ ಸರಬರಾಜು ರಷ್ಯಾದ ರೈಲನ್ನು ಉಕ್ರೇನ್ ಉಡಾಯಿಸಿತ್ತು. ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ರಷ್ಯಾ ಸೇಡು ತಿರಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಉಕ್ರೇನ್‍ನಲ್ಲಿ ಮತ್ತೆ ರಷ್ಯಾ ಸೇನೆ ಗುಂಡಿನ ಮಳೆ ಆರಂಭಿಸಿದೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ- ಸೇತುವೆ ಉಡೀಸ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ರಷ್ಯಾ
ಉಕ್ರೇನ್‍ನ ರಾಜಧಾನಿ ಕೀವ್ (Kyiv), ಲಿವ್, ತೆರ್ನೋಪಿಲ್ ಸೇರಿದಂತೆ ಹಲವು ನಗರಗಳ ಮೇಲೆ ರಷ್ಯಾ ರಾಕೆಟ್ ದಾಳಿ ನಡೆದಿದೆ. ಕೀವ್ ನಗರದಲ್ಲಿ ಭಾರೀ ಪ್ರಮಾಣದ ಸ್ಫೋಟದ ಸದ್ದು, ಹೊಗೆ, ಧೂಳು ಹಾಗೂ ಬೆಂಕಿ ತುಂಬಿಕೊಂಡಿದೆ. ಇದರಿಂದಾಗಿ ಕಿವ್ ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈಗಾಗಲೇ ರಷ್ಯಾ ಕೀವ್ ನಗರವನ್ನು ಮತ್ತೊಮ್ಮೆ ಟಾರ್ಗೆಟ್ ಮಾಡಿದ್ದು, ಇದೀಗ ಇರಾನ್‍ನ ಡ್ರೋನ್‍ಗಳನ್ನು ಬಳಸಿ ನಮ್ಮ ಮೇಲೆ ದಾಳಿ ನಡೆದಿದೆ ಎಂದು ಝೆಲೆನ್ಸ್ಕಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ‘ಗೋವನ್ನು’ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಮನವಿ – ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ರಷ್ಯಾ ಸೈನ್ಯ ಉಕ್ರೇನ್‍ನ ಕೀವ್ ನಗರದ ಮೇಲೆ 75ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದೆ ಎಂದು ಮೂಲಗಳಿಂದ ವರದಿಯಾಗಿದೆ. ಈಗಾಗಲೇ ಹಲವು ಕಟ್ಟಡಗಳು ಧ್ವಂಸವಾಗಿವೆ, ರಸ್ತೆಯಲ್ಲಿದ್ದಂತಹ ಕಾರ್ ಸೇರಿದಂತೆ ವಾಹನಗಳು ಬೆಂಕಿಗಾಹುತಿಯಾಗಿದೆ.