ಕೀವ್: ರಷ್ಯಾ, ಉಕ್ರೇನ್ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸುತ್ತಿದೆ. ಈ ನಡುವೆ ರಷ್ಯಾದ ಮಿಲಿಟರಿ ಪಡೆಯ ಯುದ್ಧ ಟ್ಯಾಂಕ್ ಮತ್ತು ವಾಹನಗಳ ಮೇಲಿರುವ ಝಡ್ (Z) ಮಾರ್ಕ್ ತೀವ್ರ ಚರ್ಚೆಗೆ ಕಾರಣವಾಗಿದೆ.
Advertisement
ಏನಿದು Z ಮಾರ್ಕ್
ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮೂರನೇ ದಿನವಾದ ಇಂದು ಉಕ್ರೇನ್ನ ಕೀವ್ ನಗರದಲ್ಲಿ ಕ್ಷಿಪಣಿ, ಬಾಂಬ್ಗಳ ಸುರಿಮಳೆಗೈದಿದೆ. ಈ ಎಲ್ಲದರ ನಡುವೆ ರಷ್ಯಾದ ಯುದ್ಧ ಟ್ಯಾಂಕರ್, ಬಂಕರ್ ಮತ್ತು ಎಲ್ಲಾ ಯುದ್ಧೋಪಕರಣಗಳ ಮೇಲೆ Z ಮಾರ್ಕ್ ಒಂದು ಎಲ್ಲರ ಗಮನಸೆಳೆಯುತ್ತಿದೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್ ಹಿಡಿದ ದಂಪತಿ
Advertisement
ಸಾಮಾಜಿಕ ಜಾಲತಾಣಗಳಲ್ಲೂ ಕೂಡ Z ಮಾರ್ಕ್ನ ಟ್ಯಾಂಕರ್ಗಳ ವೀಡಿಯೋ ವೈರಲ್ ಆಗುತ್ತಿದೆ. ಆದರೆ ಈ ಮಾರ್ಕಿಂಗ್ ಬಗ್ಗೆ ರಷ್ಯಾ ಆರ್ಮಿ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಅಲ್ಲದೇ ಈ Z ಅಕ್ಷರ ರಷ್ಯಾದ ವರ್ಣಮಾಲೆಗಲಲ್ಲೂ ಇಲ್ಲ ಇದು ಸಿರಿಲಿಕ್ ಲಿಪಿಯಾಗಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.
Advertisement
Advertisement
ಈ ಮಾರ್ಕಿಂಗ್ ಬಗ್ಗೆ ಇದೀಗ ಎಲ್ಲಡೆ ಮಾತುಕತೆ ಆರಂಭವಾಗಿದ್ದು, ರಕ್ಷಣಾ ತಜ್ಞರ ಪ್ರಕಾರ, ಉಕ್ರೇನ್ ಮತ್ತು ರಷ್ಯಾ ಸೇನೆಯ ಸೈನಿಕರು ಮತ್ತು ಯುದ್ಧ ಉಪಕರಣಗಳ ವ್ಯತ್ಯಾಸಕ್ಕಾಗಿ ಈ ಚಿಹ್ನೆ ಬಳಸಲಾಗುತ್ತಿದೆ. ಈ ಎರಡು ದೇಶಗಳ ಮಿಲಿಟರಿ ಪಡೆ ಟ್ಯಾಂಕ್ಗಳು ಒಂದೇ ರೀತಿ ಇರುವುದರಿಂದ ರಷ್ಯಾ ಈ ರೀತಿ ಮಾಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ
ರಷ್ಯಾದ ಬಲಿಷ್ಠ ಯುದ್ಧ ಟ್ಯಾಂಕರ್ T-72 ತದ್ರೂಪಿಯಾಗಿ ಉಕ್ರೇನ್ನ ಯುದ್ಧ ಟ್ಯಾಂಕರ್ T-80 ಇದೆ. ಈ ಎಲ್ಲಾ ಕಾರಣಗಳನ್ನು ಮನಗಂಡು ರಷ್ಯಾ ತನ್ನ ಯುದ್ಧೋಪಕರಣಗಳಿಗೆ Z ಮಾರ್ಕ್ ಮಾಡಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಉಕ್ರೇನ್ನ ಬಹುಮಹಡಿ ಕಟ್ಟಡಕ್ಕೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ – ಭೀಕರ ದೃಶ್ಯ ವೈರಲ್
ಈ ಹಿಂದೆ 1944ರಲ್ಲಿ ನಾರ್ಮಂಡಿ ವಶ ಪಡೆಯುವ ವೇಳೆ ಮಿತ್ರ ರಾಷ್ಟ್ರಗಳಿಗೆ ತಿಳಿಯಲೆಂದು ಅಮೆರಿಕ ತನ್ನ ಸೇನಾ ವಾಹನಗಳ ಮೇಲೆ ಕಪ್ಪು ಮತ್ತು ಬಿಳಿ ಪಟ್ಟಿಗಳನ್ನು ಹಾಕಿಕೊಂಡಿತ್ತು.