ಕೀವ್: ರಷ್ಯಾದ 400 ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಹತ್ಯೆ ಮಾಡಲು ಆದೇಶಿಸಿದ್ದು, ಇದರಿಂದಾಗಿ ಅವರು ರಷ್ಯಾ ಸೈನಿಕರು ಹುಡುಕುತ್ತಿದ್ದಾರೆ ಎಂಬ ವಿಷಯ ಇದೀಗ ಬಹಿರಂಗವಾಗಿದೆ.
400ಕ್ಕೂ ಹೆಚ್ಚು ಸೈನಿಕರನ್ನು ರಷ್ಯಾ ಆಫ್ರಿಕಾದಿಂದ ಕರೆಸಿಕೊಂಡಿದ್ದು, ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಅವರ ಸರ್ಕಾರದ ಅಧಿಕಾರಿಗಳನ್ನು ಹತ್ಯೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಅಧ್ಯಕ್ಷ ಪುಟಿನ್ ಅವರ ಮಿತ್ರರ ಬಳಗದಲ್ಲಿ ಒಬ್ಬರಿಂದ ನಡೆಸಲ್ಪಡುವ ವ್ಯಾಗ್ನರ್ ಗ್ರೂಪ್ ಕಂಪನಿಯು ಐದು ವಾರಗಳ ಹಿಂದೆ ಆಫ್ರಿಕಾದಿಂದ ಸೈನಿಕರಿಗೆ ಆರ್ಥಿಕ ಸಹಾಯ ಮಾಡಿ ಅದಕ್ಕೆ ಪ್ರತಿಫಲವಾಗಿ ಝೆಲೆನ್ಸ್ಕಿಯ ಶಿರಚ್ಛೇದ ಮಾಡಲು ಆದೇಶಿಸಿತ್ತು.
ವ್ಯಾಗ್ನರ್ ಗ್ರೂಪ್‍ನ ಚಟುವಟಿಕೆಗಳ ಜ್ಞಾನವಿರುವ ಮೂಲವೊಂದು 2,000 ಮತ್ತು 4,000 ಕೂಲಿ ಸೈನಿಕರು ಜನವರಿಯಲ್ಲಿ ಉಕ್ರೇನ್‍ಗೆ ಆಗಮಿಸಿದ್ದರು ಎಂದು ಮಾಹಿತಿ ನೀಡಿದ್ದು, ಕೆಲವರನ್ನು ದೇಶದ ಪೂರ್ವದಲ್ಲಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್‍ನ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಿಗೆ ಕಳುಹಿಸಲಾಯಿತು. ಆದರೆ 400 ಸೈನಿಕರು ಝೆಲೆನ್‍ಸ್ಕಿಯನ್ನು ಹತ್ಯೆಗೈಯಲು ಬೆಲಾರಸ್‍ನಿಂದ ಕೈವ್‍ಗೆ ತೆರಳಿದ್ದರು.
ಈ ಗುಂಪು ಉಕ್ರೇನ್‍ನ ಅಧ್ಯಕ್ಷ ಹಾಗೂ ಅವರ ಸಹೋದ್ಯೋಗಿಗಳು ಇರುವ ಸ್ಥಳವನ್ನು ತಮ್ಮ ಫೋನ್‍ಗಳ ಮೂಲಕ ಟ್ರ್ಯಾಕ್ ಮಾಡುತ್ತಿತ್ತು. ಅವರು ಯಾವ ಸಮಯದಲ್ಲಿ ಎಲ್ಲಿ ಇರುತ್ತಾರೆ ಎಂಬ ವಿವರಗಳನ್ನೆಲ್ಲಾ ತಿಳಿದುಕೊಳ್ಳುತ್ತಿತ್ತು. ಇದನ್ನೂ ಓದಿ: ಉಕ್ರೇನ್‍ಗಡಿಗೆ ತಲುಪಿದ್ದರು ಭಾರತಕ್ಕೆ ಬರಲಾಗದೆ ಪರದಾಡುತ್ತಿರುವ ರಾಯಚೂರು ವಿದ್ಯಾರ್ಥಿಗಳು
ಈ ಹಿಂದೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮಾತನಾಡಿ, ರಷ್ಯಾದ ಟಾರ್ಗೆಟ್ ನಂಬರ್ ಒನ್ ನಾನಾಗಿದ್ದೇನೆ. ರಷ್ಯಾದ ವಿಶೇಷ ಪಡೆಗಳು ಹತ್ಯೆ ಮಾಡಲು ಸಂಚು ಮಾಡುತ್ತೀವೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್‌ಗಳನ್ನು ನೋಡಿದಾಗ ಮತ್ತೆ ಬದುಕಿದಂತಾಯ್ತು: ವಿದ್ಯಾರ್ಥಿನಿ