ಕೀವ್: ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್ ಪ್ರಜೆಗಳು ಪೆಟ್ರೋಲ್ ಬಾಂಬ್‍ಗಳ ದಾಳಿ ನಡೆಸುತ್ತಿದ್ದಾರೆ.
ಕೀವ್‍ನ ಚೆಕ್‍ಪಾಯಿಂಟ್‍ನಲ್ಲಿ ಉಕ್ರೇನ್‍ನ ಸ್ಥಳೀಯರು ಪೆಟ್ರೋಲ್ ಬಾಂಬ್‍ಗಳನ್ನು ತಾವೇ ತಯಾರಿಸಿ ರಷ್ಯನ್ನರ ವಿರುದ್ಧ ಹೋರಾಡಲು ಸಿದ್ಧ ಎನ್ನುತ್ತ ತಮ್ಮ ರೋಷವನ್ನು ತೋಸಿಕೊಳ್ಳುತ್ತಿದ್ದಾರೆ.
Advertisement
ಈಗಾಗಲೇ ಉಕ್ರೇನ್‍ನ 6 ಸಾವಿರ ಸೈನಿಕರನ್ನು ಬಲಿ ತೆಗೆದುಕೊಂಡಿರುವ ರಷ್ಯಾ ವಿರುದ್ಧ ಹೋರಾಡಲು ಸ್ಥಳೀಯರೂ ಎದೆಗುಂದದೆ ನಿಂತಿದ್ದಾರೆ. ಪೆಟ್ರೋಲ್ ಬಾಂಬುಗಳನ್ನು ತಯಾರಿಸಿ ರಷ್ಯಾದ ಸೈನ್ಯವನ್ನು ಎದುರಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಉಕ್ರೇನ್ ಯುದ್ಧ – ಭಾರತದ ಮತ್ತೊಬ್ಬ ವಿದ್ಯಾರ್ಥಿ ಸಾವು
Advertisement
Advertisement
ನಾವು ನಮ್ಮ ಮಾತೃಭೂಮಿಗಾಗಿ ಹೋರಾಡುತ್ತಿದ್ದೇವೆ. ನಾವು ರಷ್ಯನ್ನರಿಗೆ ಹೆದರುವುದಿಲ್ಲ. ನಮ್ಮಲ್ಲೂ ಉತ್ತಮ ಹೋರಾಟಗಾರರು ಇದ್ದಾರೆ. ಶಸ್ತ್ರಾಸ್ತ್ರ ಅಥವಾ ಪೆಟ್ರೋಲ್ ಬಾಂಬ್‍ಗಳಿಲ್ಲದಿದ್ದರೂ ಅವರೊಂದಿಗೆ ನಾವು ಹೋರಾಡಲು ಸಿದ್ಧರಾಗಿದ್ದೇವೆ ಎಂದು ಉಕ್ರೇನ್ ಪ್ರಜೆಗಳು ಆವೇಶ ಭರಿತ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: 3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ
Advertisement
ಉಕ್ರೇನ್‍ನಲ್ಲಿ ಸೈನಿಕರು, ನಾಗರಿಕರು, ಹಿರಿಯರು, ಮಹಿಳೆಯರು ಎನ್ನದೇ ಎಲ್ಲರೂ ಒಗ್ಗೂಡಿ ರಷ್ಯಾದ ವಿರುದ್ಧ ಹೋರಾಡುತ್ತಿದ್ದಾರೆ. ಶಸ್ತ್ರಾಸ್ತ್ರಗಳ ಕೊರತೆಯಿದ್ದರೂ ಒಂದೆರಡು ದಿನಗಳಲ್ಲಿ ಉಕ್ರೇನ್ ಸರ್ಕಾರ ಶಸ್ತ್ರಾಸ್ತ್ರ ಒದಗಿಸಲಿದೆ ಎಂಬ ಭರವಸೆಯಲ್ಲಿ ಕಾಯುತ್ತಿದ್ದಾರೆ. ತಮ್ಮ ತೋಳುಗಳಲ್ಲಿ ಹಳದಿ ಬಣ್ಣದ ಬ್ಯಾಂಡ್‍ಗಳನ್ನು ಧರಿಸಿ ತಮ್ಮನ್ನು ತಾವು ಕೀವ್‍ನ ರಕ್ಷಕರು ಎಂದು ಕರೆಯುತ್ತಿದ್ದಾರೆ.