ಕೀವ್: ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ಸೇನೆಗೆ ಉಕ್ರೇನ್ ತಿರುಗೇಟು ನೀಡುತ್ತಿದೆ. ರಷ್ಯಾದ 4,300ಕ್ಕೂ ಹೆಚ್ಚು ಸೈನಿಕರನ್ನು ಹೊಡೆದುರುಳಿಸಿದ್ದೇವೆ ಎಂದು ಉಕ್ರೇನ್ ಸಚಿವರೊಬ್ಬರು ತಿಳಿಸಿದ್ದಾರೆ.
Advertisement
ಉಕ್ರೇನ್ ಮೇಲೆ ರಷ್ಯಾ ಸೇನೆ ಮುಗಿಬಿದ್ದಿದೆ. ರಷ್ಯಾ ಸೇನೆಗೆ ತಕ್ಕ ತಿರುಗೇಟು ನೀಡುತ್ತಿದ್ದು, ಈಗಾಗಲೇ ಉಕ್ರೇನ್ ದಾಳಿಗೆ 4,300ಕ್ಕೂ ಹೆಚ್ಚು ರಷ್ಯಾ ಸೈನಿಕರ ಸಾವನ್ನಪ್ಪಿದ್ದಾರೆ. ನೂರಾರು ರಷ್ಯಾ ಸೇನಾ ವಾಹನಗಳು ಸುಟ್ಟು ಬೂದಿಯಾಗಿವೆ ಎಂಬ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ಈ ಕ್ಷಣವೇ ನಮ್ಮ ದೇಶ ಬಿಟ್ಟು ಹೋಗಿ- ಉಕ್ರೇನ್ ಬಾಲಕಿಯ ಸಿಟ್ಟು
Advertisement
Advertisement
ರಷ್ಯಾ ಕ್ಷಿಪಣಿ ಮತ್ತು ಬಾಂಬ್ ದಾಳಿ ನಡೆಸುತ್ತಿದ್ದು, ಉಕ್ರೇನ್ ಮಿಲಿಟರಿ ಪಡೆ ಕೂಡ ಪ್ರತಿ ದಾಳಿ ನಡೆಸುತ್ತಿದೆ. ರಷ್ಯಾ ಸೈನ್ಯ ಉಕ್ರೇನ್ ರಾಜಧಾನಿ ಕೀವ್‍ನ ಅಸುಪಾಸಿನಲ್ಲಿದೆ. ಉಕ್ರೇನ್ ಕೀವ್‍ನಲ್ಲಿ ಕರ್ಫ್ಯೂ ಜಾರಿಗೆ ತಂದಿದ್ದು, ಸೋಮವಾರದವರೆಗೆ ಯಾರು ಕೂಡ ಮನೆಯಿಂದ ಹೊರ ಬರದಂತೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ರಷ್ಯಾ ಸಂಧಾನ ಆಹ್ವಾನ ತಿರಸ್ಕರಿಸಿದ ಉಕ್ರೇನ್ – ಕೀವ್, ಖಾರ್ಕಿವ್ ಪ್ರದೇಶದಲ್ಲಿ ಗುಂಡಿನ ಸುರಿಮಳೆ
Advertisement
ಈಗಾಗಲೇ ರಷ್ಯಾ ದಾಳಿಗೆ ಅನಿಲ ಘಟಕಗಳು ಸ್ಫೋಟಗೊಂಡಿವೆ. ಸುಕೋಯ್ ಫೈಟರ್ ಜೆಟ್ ಧ್ವಂಸವಾಗಿದೆ. ಉಕ್ರೇನ್‍ನಲ್ಲಿ ಮನೆ ವಾಹನಗಳು ಸುಟ್ಟು ಕರಕಲಾಗಿದೆ. ಇತ್ತ ಉಕ್ರೇನ್ ಕೂಡ ಪ್ರತಿ ಸವಾಲು ಹಾಕಿದ್ದು, ರಷ್ಯಾದ ಸೇನಾ ವಾಹನಗಳು, ಹೆಲಿಕಾಪ್ಟರ್‌ಗಳನ್ನು ಉಡೀಸ್ ಮಾಡಿದೆ. ಖಾರ್ಕಿವ್ ನಗರಕ್ಕೆ ರಷ್ಯಾ ಸೇನೆ ಎಂಟ್ರಿ ಕೊಟ್ಟಿದ್ದು, ಗುಂಡಿನ ದಾಳಿಗೆ ಉಕ್ರೇನ್ ನಾಗರಿಕರು ಬಲಿಯಾಗಿದ್ದಾರೆ. ಇದನ್ನೂ ಓದಿ: ರಷ್ಯಾ ಸೈನಿಕರನ್ನು ಸೆರೆ ಹಿಡಿದು ಅರೆಬೆತ್ತಲೆಗೊಳಿಸಿ ಸಿಗರೇಟ್ ಸೇದಿಸಿದ ಉಕ್ರೇನ್ ಸೇನೆ