ಉಕ್ರೇನ್‍ನ ಮತ್ತೊಬ್ಬ ಮೇಯರ್ ಕಿಡ್ನಾಪ್ ಮಾಡಿದ ರಷ್ಯಾ

Public TV
1 Min Read
ukraine mayor

ಕೀವ್: ರಷ್ಯಾ ಸೈನಿಕರು ಝಪೊರಿಝಿಯಾ ಪ್ರದೇಶದ ಡ್ನಿಪ್ರೊರುಡ್ನೆ ನಗರದ ಮೇಯರ್‌ನನ್ನು ಅಪಹರಿಸಿದ್ದಾರೆ ಎಂದು ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ತಿಳಿಸಿದ್ದಾರೆ.

ಯೆವ್ಹೆನ್ ಮ್ಯಾಟ್ವೀವ್ ಅಪಹರಣರಾದ ಮೇಯರ್. ಇವರನ್ನು ರಷ್ಯಾ ಸೈನಿಕರು ಅಪಹರಿಸಿದ್ದಾರೆ ಎಂದು ಜಪೋರಿಝಿಯಾ ಪ್ರದೇಶದ ರಾಜ್ಯ ಆಡಳಿತದ ಮುಖ್ಯಸ್ಥ ಒಲೆಕ್ಸಾಂಡರ್ ಸ್ಟಾರುಖ್ ಭಾನುವಾರ ಬೆಳಿಗ್ಗೆ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ಅಧಿಕವಾಗುತ್ತಿದೆ. ದ್ನಿಪ್ರೊರುಡ್ನೆಯ ಮೇಯರ್ ಅವರನ್ನು ಅಪಹರಿಸಲಾಗಿದೆ. ರಷ್ಯಾದ ವಿರುದ್ಧ ಸ್ಥಳೀಯ ನಾಗರಿಕರು ತಿರುಗಿಬಿದ್ದರುವುದಕ್ಕೆ ರಷ್ಯಾ ಸೈನಿಕರು ಈ ರೀತಿ ಮಾಡುತ್ತಿದ್ದಾರೆ. ಉಕ್ರೇನ್ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ, ರಷ್ಯಾ ಹನಡೆಸುತ್ತಿರುವ ಇಂತಹ ಕೃತ್ಯವನ್ನುಉ ನಿಲ್ಲಿಸಲು ಎಲ್ಲರೂ ಒಗ್ಗೂಡಬೇಕು ಎಂದು ಸ್ಟಾರುಖ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

Russia Ukraine War 4

ಶನಿವಾರ ಉಕ್ರೇನಿಯನ್ ಅಧಿಕಾರಿಗಳು ರಷ್ಯಾದ ಮಿಲಿಟರಿಯೊಂದಿಗೆ ಸಹಕರಿಸಲು ನಿರಾಕರಿಸಿದ ನಂತರ ದಕ್ಷಿಣ ಉಕ್ರೇನ್‌ನ ಮೆಲಿಟೊಪೋಲ್‌ನ ಮೇಯರ್ ಅವರನ್ನು ರಷ್ಯಾದ ಸೈನಿಕರು ಅಪಹರಿಸಿತ್ತು. ಈ ಬಗ್ಗೆ ಉಕ್ರೇನ್ ಸಂಸತ್ ಟ್ವೀಟ್‌ ಮಾಡಿ, ೧೦ ಆಕ್ರಮಿತರ ಗುಂಪು ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರನ್ನು ಅಪಹರಿಸಿದೆ. ಇದರಿಂದಾಗಿ ರಷ್ಯಾ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಆರೋಪಿಸಿತ್ತು. ಇದನ್ನೂ ಓದಿ: ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥರಾಗಬೇಕು: ಅಶೋಕ್ ಗೆಹ್ಲೋಟ್

Share This Article
Leave a Comment

Leave a Reply

Your email address will not be published. Required fields are marked *