ಕೀವ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಿಸಿದಾಗಿನಿಂದ ಅಲ್ಲಿನ ಹಲವು ಕಟ್ಟಡಗಳಲ್ಲಿ, ವಾಹನಗಳಲ್ಲಿ ಕೆಲವು ನಿಗೂಢ ಸಂಕೇತಗಳು ಮೂಡುತ್ತಿವೆ. ಇದೀಗ ಉಕ್ರೇನ್ ಗಡಿ ಬಳಿಯಲ್ಲಿರುವ ರಷ್ಯಾದ ಟ್ಯಾಂಕ್, ಮಿಲಿಟರಿ ಟ್ರಕ್ಗಳಲ್ಲಿ Z ಗುರುತು ಕಾಣಿಸುತ್ತಿವೆ.
ಇಲ್ಲಿಯವರೆಗೆ ವಾಹನ ಹಾಗೂ ಮಿಲಿಟರಿ ಯಂತ್ರಗಳಲ್ಲಿ ಕೇವಲ Z ಚಿನ್ಹೆ ಮಾತ್ರ ಇರದೇ O, X, A, V ಚಿನ್ಹೆಗಳೂ ಕಾಣಿಸಿಕೊಂಡಿದ್ದವು. ಆದರೆ ಈ ಚಿನ್ಹೆಗಳ ಹಿನ್ನೆಲೆ ಏನು, ಇದನ್ನು ಏಕೆ ಬರೆಯಲಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.
Advertisement
ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ಗಳಲ್ಲಿ ಹಲವರು ಈ ನಿಗೂಢ ಸಂಕೇತಗಳ ಬಗೆಗೆ ವಿವರಿಸಿದ್ದಾರೆ. ಹಲವರು ತಮ್ಮ ತಮ್ಮ ಅಭಿಪ್ರಾಯ ಹಾಗೂ ವ್ಯಾಖ್ಯಾನ ನೀಡಿದ್ದಾರೆ. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್ಗಳ ಮೇಲೆ Z ಮಾರ್ಕ್?
Advertisement
Advertisement
Z ಎಂದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ ಹಾಗೂ V ಎಂದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ತಮ್ಮ ತಮ್ಮ ಪಡೆಗಳನ್ನು ಗುರುತಿಸಲು ಈ ರೀತಿಯಾಗಿ ಸಂಕೇತಗಳನ್ನು ಬರೆಯಲಾಗಿದೆ ಎನ್ನಲಾಗುತ್ತಿದೆ. ಕುತೂಹಲಕಾರಿ ಸಂಗತಿಯೆoದರೆ ಸಿರಿಲಿಕ್ ರಷ್ಯನ್ ವರ್ಣಮಾಲೆಯಲ್ಲಿ Z ಹಾಗೂ V ಅಕ್ಷರಗಳೇ ಅಸ್ಥಿತ್ವದಲ್ಲಿ ಇಲ್ಲ.
Advertisement
ಇನ್ನೂ ಕೆಲವರು ರಷ್ಯಾದ ಪಡೆಗಳು ಪರಸ್ಪರ ದಾಳಿಯಿಂದ ರಕ್ಷಿಸಿಕೊಳ್ಳಲು ತಮ್ಮ ಟ್ಯಾಂಕ್ಗಳಲ್ಲಿ ಈ ರೀತಿಯ ಅಕ್ಷರಗಳನ್ನು ಬರೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆ- ಕಟ್ಟಡ ತೊರೆಯುವಂತೆ ಅಧಿಕಾರಿಗಳ ಸೂಚನೆ
ರಷ್ಯಾದ ರಕ್ಷಣಾ ಸಚಿವಾಲಯ ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ Z ಹಾಗೂ V ಅಕ್ಷರಗಳ ವಿನ್ಯಾಸದ ಗ್ರಾಫಿಕ್ಸ್ಒಂದನ್ನು ಹಂಚಿಕೊಂಡಿದೆ. ಆದರೆ ಈ ಎರಡು ಅಕ್ಷರಗಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ವಿವರಣೆಗಳನ್ನು ನೀಡಿಲ್ಲ.
ಒಟ್ಟಿನಲ್ಲಿ Z ಅಕ್ಷರ ರಷ್ಯಾ ಸೈನ್ಯದ ಸಂಕೇತ ಎನ್ನಲಾಗುತ್ತಿದೆ. ದೇಶಾದ್ಯಂತ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಈ ಗುರುತನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಕೇವಲ ಯುದ್ಧದ ಟ್ಯಾಂಕ್ಗಳಲ್ಲಿ ಮಾತ್ರವಲ್ಲದೇ ನಾಗರಿಕರೂ ತಮ್ಮ ವಾಹನಗಳಲ್ಲಿ ಈ ಸಂಕೇತವನ್ನು ಬಳಸುತ್ತಿರುವುದು ಗಮನಾರ್ಹವಾಗಿದೆ.