ತುಮಕೂರು: ಯುದ್ಧದ ನಡುವೆ ಉಕ್ರೇನ್ ಒಳಗಡೆ ಪ್ರವೇಶ ಮಾಡಿ ಭಾರತೀಯರನ್ನು ರಕ್ಷಣೆ ಮಾಡುವ ಗಟ್ಸ್ ಇಲ್ಲ ಅನ್ನೋರು ಮೊದಲು ತಾವು ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು ಎಂದು ಉಕ್ರೇನ್‍ನಿಂದ ವಾಪಸ್ಸಾದ ತುಮಕೂರಿನ ವಿದ್ಯಾರ್ಥಿ ಸುಜಯ್ ಅಭಿಪ್ರಾಯ ಪಟ್ಟಿದ್ದಾರೆ.
Advertisement
ಇಂದು ಬೆಳಗ್ಗೆ ತುಮಕೂರು ನಗರದ ಮಾರುತಿ ನಗರದ ಮನೆಗೆ ಬಂದು ತಲುಪಿದ ಸುಜಯ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಭಾರತದ ಎಂಬೆಸ್ಸಿಯ ಸಹಾಯ, ಕಾಳಜಿಯನ್ನು ಕೊಂಡಾಡಿದ್ದಾರೆ. ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಎರಡೂ ಪದೇ, ಪದೇ ಫೋನ್ ಮೆಸೇಜ್ ಮಾಡಿ ನಮ್ಮನ್ನು ವಿಚಾರಿಸಿಕೊಳ್ಳುತಿತ್ತು. ಪೈವ್ ಸ್ಟಾರ್ ಹೊಟೇಲ್‍ನಲ್ಲಿ ಇರಿಸಿ ಊಟ ತಿಂಡಿ ಕೊಟ್ಟಿದೆ. ಉಕ್ರೇನ್ ಗಡಿಯಿಂದ ತುಮಕೂರಿನವರೆಗೂ ಒಂದು ರೂಪಾಯಿಯೂ ನಾವು ಖರ್ಚು ಮಾಡಿಲ್ಲ. ಎಲ್ಲವನ್ನು ಸರ್ಕಾರ ನೋಡಿಕೊಂಡಿದೆ. ಇಷ್ಟಾದ ಮೇಲೂ ಸರ್ಕಾರಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ತಮ್ ಧಮ್ ತೋರಿಸಿಬೇಕು ಎಂದು ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಬಂದು ಪೋಷಕರನ್ನು ನೋಡ್ತೇನೆ ಅಂದುಕೊಂಡಿರಲಿಲ್ಲ: ವಿದ್ಯಾರ್ಥಿನಿ
Advertisement
Advertisement
ಯುದ್ಧದ ಸನ್ನಿವೇಶದಲ್ಲಿ ಭಾರತ ಉಕ್ರೇನ್‍ಗೆ ಬಂದು ಭಾರತೀಯರನ್ನು ರಕ್ಷಿಸುವಷ್ಟು ನಿರೀಕ್ಷೆ ಮಾಡುವುದು ತಪ್ಪು. ಆದರೆ ಭಾರತೀಯ ರಾಯಭಾರ ಕಚೇರಿಯವರು ಅವರ ಪ್ರಯತ್ನ ಮೀರಿ ಕೆಲಸ ನಿರ್ವಹಿಸಿದ್ದಾರೆ. ನಾವು ಇಂತಹ ಸಂದರ್ಭದಲ್ಲಿ ಭಾರತಕ್ಕೆ ಮರಳಿದ್ದೇವೆ ಎಂದರೆ ಅದು ನಮ್ಮ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ. ಅಲ್ಲಿನ ಪರಿಸ್ಥಿತಿ ನೋಡಿ ನಾವು ಭಾರತ, ಉಕ್ರೇನ್‍ಗೆ ಬಂದು ಭಾರತೀಯರಿಗೆ ಸಹಾಯ ಮಾಡಲು ಸಾಧ್ಯವಿರಲಿಲ್ಲ ಅದನ್ನು ಮೊದಲು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಉಕ್ರೇನ್ ಮತ್ತು ರಷ್ಯಾದ ಯುದ್ಧ ವಿಮಾನಗಳು ರಾಕೆಟ್‍ಗಳು, ಕ್ಷಿಪಣಿಗಳ ಮಧ್ಯೆ ಭಾರತ ಏರ್‌ಲಿಫ್ಟ್ ಮಾಡುವುದು ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಇಷ್ಟು ಸಹಾಯ ಮಾಡಿರುವುದು ಗ್ರೇಟ್ ಎಂದು ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ : ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿದ ಬಿಎಸ್‍ವೈ
Advertisement