ಉಡುಪಿ: ರಷ್ಯಾ-ಉಕ್ರೇನ್ ನಡುವಿನ ಯುದ್ಧದಿಂದ ದಕ್ಷಿಣ ಭಾರತೀಯರಿಗೆ ಯುದ್ಧದ ಅನುಭವವಾದರೆ, ನನಗೆ ಮಾತೃಭೂಮಿ ಮೇಲೆ ಪ್ರೀತಿ ಜಾಸ್ತಿಯಾಯ್ತು ಎಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕಹಿ ಅನುಭವಗಳನ್ನು ಉಡುಪಿಯ ಅನೀಫ್ರೆಡ್ ರೆಡ್ಲೀ ಡಿಸೋಜಾ ವಿವರಿಸಿದರು.
Advertisement
ಪಬ್ಲಿಕ್ ಟಿವಿ ಜೊತೆ ಯುದ್ಧಭೂಮಿಯ ಅನುಭವ ಬಿಚ್ಚಿಟ್ಟ ಅವರು,ನಾವು ದಕ್ಷಿಣ ಭಾರತದವರು. ನಾವು ಯುದ್ಧ, ಬಾಂಬ್, ಶೆಲ್, ವಿಮಾನಗಳ ಓಡಾಟ ಯಾವುದನ್ನು ಕೂಡ ನಾವು ನೋಡಿಲ್ಲ. ಜೀವನದಲ್ಲಿ ಮೊದಲ ಬಾರಿಗೆ ಯುದ್ಧ ವಿಮಾನಗಳನ್ನು ನೋಡಿದ್ದೇನೆ. ಬಾಂಬ್‍ಗಳು ಶೆಲ್ ದಾಳಿ ಎಲ್ಲವೂ ಮೊದಲು. ಉತ್ತರ ಭಾರತದ ನನ್ನ ಫ್ರೆಂಡ್ಸ್ ಬಂಕರ್ ಒಳಗೆ ಇದ್ದಾಗಲೂ ಪಿಕ್ನಿಕ್ ರೀತಿಯಲ್ಲಿ ಇದ್ದರು. ಆದರೆ ನಾವು ಬಹಳ ಕಷ್ಟಪಟ್ಟು ಹತ್ತು ದಿನಗಳನ್ನು ಕಳೆದೆವು. ನಮಗೆ ಜೋರು ಹಸಿವಾಗ್ತಾ ಇದ್ರೂ ಸ್ವಲ್ಪ ಊಟ ಮಾಡಬೇಕಾಗಿತ್ತು. ಇಂದಿನ ಆಹಾರವನ್ನು ನಾಳೆ ಮತ್ತು ನಾಡಿದ್ದಿಗೆ ತೆಗೆದು ಇಡಬೇಕಾದ ಪರಿಸ್ಥಿತಿ ಎದುರಿಸಿದೆವು. ಏನೂ ಶಬ್ದ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದೇ ನಮಗೆ ದೊಡ್ಡ ಶಿಕ್ಷೆಯ ಹಾಗೆ ಅನ್ನಿಸುತ್ತಿತ್ತು. ಹಗಲು ಮತ್ತು ರಾತ್ರಿ ನಾವು ಲೈಟ್ ಹಾಕದೆ ಕತ್ತಲಲ್ಲೇ ಕಳೆಯಬೇಕಾಗಿತ್ತು. ಇದು ನಮ್ಮ ಮನಸ್ಸಿಗೆ ಬಹಳ ಕಿರಿಕಿರಿಯಾಗುತ್ತಿತ್ತು ಎಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕಹಿ ಅನುಭವಗಳನ್ನು ವಿವರಿಸಿದರು. ಇದನ್ನೂ ಓದಿ: ಹೋಟೆಲ್‍ನಲ್ಲಿ ಅತ್ಯಾಚಾರಕ್ಕೆ ಯತ್ನ – ಬಿಹಾರ ಕ್ರಿಕೆಟ್ ಮುಖ್ಯಸ್ಥನ ವಿರುದ್ಧ ಆರೋಪ
Advertisement
Advertisement
ಖಾರ್ಕಿವ್‍ನ ಬಂಕರ್‍ನಲ್ಲಿ ನಾವು 10 ದಿನ ಕಳೆಯಬೇಕಾಯಿತು. ಸರಿಯಾಗಿ ನಿದ್ದೆ ಇಲ್ಲ ಊಟ ಇಲ್ಲ ಅದರ ಜೊತೆಗೆ ಜೀವಭಯ. ನಮಗೆ ರಾಯಭಾರಿ ಕಚೇರಿಯಿಂದ ಸಂದೇಶ ಬಂತು. ಕೂಡಲೇ ಬಂಕರ್ ಖಾಲಿ ಮಾಡಿ ಎಂದು. ಹೊರಬಂದು ನಾವು ಬಸ್‍ಗಾಗಿ ಬಹಳ ಕಾದೆವು. ಪ್ರೈವೇಟ್ ವಾಹನಗಳನ್ನು ಮಾಡಲು ಪ್ರಯತ್ನಪಟ್ಟೆವು. ಅದು ಸಾಧ್ಯವಾಗದಿದ್ದಾಗ ಸುಮಾರು ಎಂಟು ಕಿಲೋಮೀಟರ್‌ಗಳ ದೂರವನ್ನು ನಡೆದುಕೊಂಡು ಹೋಗಲು ನಿರ್ಧಾರ ಮಾಡಿದೆವು. ಶೆಲ್ ದಾಳಿ, ಬಾಂಬ್ ಸದ್ದು ವಿಮಾನಗಳ ಹೋರಾಟಗಳ ನಡುವೆ ನಡೆದುಕೊಂಡು ರೈಲು ನಿಲ್ದಾಣ ಸೇರಿದೆವು. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ
Advertisement
ವಿಮಾನಗಳ ಓಡಾಟದ ಶಬ್ದ ಬಾಂಬ್‍ಗಳ ಶಬ್ದ ಕೇಳಿಸಿಕೊಂಡು ನಾವು ವಾಪಸ್ ಬರುತ್ತೇವೆ ಅಂತ ಅಂದುಕೊಂಡಿರಲಿಲ್ಲ. ನನ್ನ ಮನಸ್ಸಿನಲ್ಲಿ ನಾವು ವಾಪಸ್ ಬರಬೇಕು, ನಾನು ವಾಪಸ್ ಇಂಡಿಯಾಕ್ಕೆ ತಲುಪಬೇಕು. ನನ್ನ ಕುಟುಂಬವನ್ನು ಸೇರಿಕೊಳ್ಳಬೇಕು ಎಂದು ಗಟ್ಟಿ ನಿರ್ಧಾರ ಮಾಡಿದ ಕಾರಣ ನನಗೆ ವಾಪಸ್ ಬರಲು ಸಾಧ್ಯವಾಯಿತು. ನಾನು ವಾಪಸ್ ಉಡುಪಿಗೆ ಹೋಗಿ ತಂದೆ ತಾಯಿಯ ಮುಖ ನೋಡಬೇಕು ಎಂದು ಮನಸ್ಸಿನಲ್ಲಿ ಇದ್ದ ಕಾರಣ ನಾವು ವಾಪಸ್ ಬಂದೆ. ಇಲ್ಲದಿದ್ದರೆ ಅಲ್ಲೇ ಬಾಕಿಯಾಗಬೇಕಾಗಿತ್ತು ಎಂದು ನೆನಪು ಮಾಡಿಕೊಂಡರು.
ಉಕ್ರೇನಿಗರು ಥಳಿಸಿದರು:
ಹೊರಗೆ ನಾವು ರೈಲು ಹತ್ತುವಾಗ ಉಕ್ರೇನಿನ ಸ್ಥಳೀಯರು ನಮ್ಮ ಗುಂಪಿನ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದರು. ರೈಲು ಹತ್ತಲು ಬಿಡಲಿಲ್ಲ. ಬಾಗಿಲಿನಲ್ಲಿ ತಳ್ಳಿದರು, ಹೊಡೆದರು. ನೀವು ಭಾರತೀಯರು ನಿಮ್ಮ ದೇಶಬಿಟ್ಟು ಇಲ್ಲಿ ಬಂದದ್ದು ಯಾಕೆ? ನೀವು ಇಲ್ಲೇ ಸತ್ತುಹೋಗಿ ಎಂದು ನಮ್ಮನ್ನು ರೈಲು ಹತ್ತಲು ಬಿಡುತ್ತಿರಲಿಲ್ಲ. ನಾವು ಅಲ್ಲಿನ ಪ್ರಜೆಗಳಿಗೆ ಸರಿಯಾಗಿ ಉತ್ತರಕೊಟ್ಟು ಅವರನ್ನು ತಳ್ಳಿ ರೈಲಿನಲ್ಲಿ ಜಾಗ ಮಾಡಿಕೊಂಡು ವಾಪಸ್ ಬಂದಿದ್ದೇವೆ ಎಂದು ಅನೀಫ್ರೆಡ್ ಡಿಸೋಜಾ ಅನುಭವ ಹಂಚಿಕೊಂಡರು.
ಖಾರ್ಕಿವ್ ಅಥವಾ ಕೀವ್‍ಗೆ ಹೆಲಿಕಾಪ್ಟರ್ ಅಥವಾ ವಿಮಾನವನ್ನು ತೆಗೆದುಕೊಂಡು ಭಾರತ ದೇಶ ಅಲ್ಲಿಗೆ ಬರಲು ಸಾಧ್ಯವಿರಲಿಲ್ಲ. ನಿರಂತರವಾಗಿ ಏರ್‍ಸ್ಟ್ರೈಕ್, ಮಿಸೈಲ್ ದಾಳಿ ಮತ್ತು ಬಾಂಬಿಂಗ್ ನಡೆಯುತ್ತಿರುವುದರಿಂದ ಹೊರದೇಶದವರು ಯಾರು ಉಕ್ರೇನಿಗೆ ಬರಲು ಸಾಧ್ಯವಿರಲಿಲ್ಲ. ಇಲ್ಲಿ ಬಂದು ಹೇಳಿದಷ್ಟು ಸುಲಭ ಇಲ್ಲ. ರಾಯಭಾರ ಕಚೇರಿ ಸಲಹೆಗಳನ್ನು ಕೊಟ್ಟು, ಬಂಕರ್‌ನಲ್ಲಿ ನಮ್ಮನ್ನು ಕಾಪಾಡಿದೆ. ಹಂಗೇರಿಯಿಂದ ನಮ್ಮನ್ನು ಸೇಫಾಗಿ ಸರ್ಕಾರ ಮನೆಗೆ ತಲುಪಿಸಿದೆ. ನಮಗೆ ನಮ್ಮ ಮಾತೃಭೂಮಿಯ ಮೇಲೆ ಮೊದಲೇ ಪ್ರೀತಿಯಿತ್ತು. ಈಗ ದೇಶದ ಮೇಲೆ ಪ್ರೀತಿ ಜಾಸ್ತಿಯಾಗಿದೆ ಎಂದರು. ಇದನ್ನೂ ಓದಿ: ಡ್ರಗ್ಸ್ ನಶೆಯಲ್ಲಿ ಕಲರ್ ಲೈಟ್ ನೋಡಿದ್ರೆ ಮತ್ತಷ್ಟು ಕಿಕ್ ಸಿಕ್ತಿತ್ತು
ನನ್ನ ಮಗಳಿಗೆ ಆರೋಗ್ಯ ಸಮಸ್ಯೆ ಇತ್ತು. ಡಸ್ಟ್ ಅಲರ್ಜಿ ಮತ್ತು ಆಸ್ತಮಾ ಇದ್ದ ಕಾರಣ ನಮಗೆ ಬಹಳ ಆತಂಕ ಆಗುತ್ತಿತ್ತು. ಯುದ್ಧ ಆರಂಭವಾಗಿದೆ ಎಂದು ತಿಳಿದ ಕೂಡಲೇ ನಾವು ಇಡೀ ದಿನ ಪ್ರಾರ್ಥನೆ ಮಾಡುತ್ತಿದ್ದೆವು. ದಿನಕ್ಕೆ ಎರಡು ಮೂರು ಬಾರಿ ಚರ್ಚಿಗೆ ಹೋಗಿ ದೇವರಲ್ಲಿ ಪೂಜೆ ಸಲ್ಲಿಸುತ್ತಿದ್ದೆವು. ಮಗಳ ಫೋನಿಗಾಗಿ ಕಾಯುವುದು ಮತ್ತು ಅವಳಿಗೆ ಕೆಲವು ಸಲಹೆಗಳನ್ನು ಕೊಡುವುದು ನಮ್ಮ ದಿನಚರಿಯಾಗಿತ್ತು. ಕಳೆದ ಹತ್ತು ದಿನಗಳಲ್ಲಿ ನಾವು ಬೇರೆ ಏನನ್ನು ಮಾಡಿಲ್ಲ. ನಮ್ಮ ಪ್ರಾರ್ಥನೆಯ ಫಲ ಮಗಳು ನಮ್ಮ ಮನೆಗೆ ಬಂದಿದ್ದಾಳೆ. ನಮಗೆ ಸರ್ಕಾರ ಮತ್ತು ರಾಯಭಾರ ಕಚೇರಿ ಬಹಳ ಸಹಾಯ ಆಗಿದೆ. ಕ್ಷಣಕ್ಷಣಕ್ಕೂ ಅಲ್ಲಿನ ಬೆಳವಣಿಗೆಗಳನ್ನು ನಮಗೆ ತಿಳಿಸಿದ್ದಾರೆ. ಮಕ್ಕಳಿಗೆ ಸರಿಯಾಗಿ ಮಾರ್ಗದರ್ಶನ ಮಾಡಿದ್ದಾರೆ. ಚಾನಲ್ ಮತ್ತು ವೆಬ್‌ಸೈಟ್‌ಗಳ ಮೂಲಕ ನಮಗೆ ನಿರಂತರ ಮಾಹಿತಿಗಳನ್ನು ಕೊಡುತ್ತಿದ್ದರು ಇದು ನಮಗೆ ಬಹಳ ಉಪಕಾರವಾಯಿತು ಎಂದು ತಾಯಿ ಶೋಭಾ ಡಿಸೋಜಾ ಹೇಳಿದರು.