ಮಾಸ್ಕೋ: ಉಕ್ರೇನ್ ಹಾಗೂ ರಷ್ಯಾ ನಡುವೆ ಸಂಘರ್ಷ ಮುಂದುವರಿದಿದ್ದು, ಮಾರ್ಚ್ 14ರಿಂದ ಇನ್‍ಸ್ಟಾಗ್ರಾಮ್ ಬಳಕೆಗೆ ಸಂಪೂರ್ಣ ನಿರ್ಬಂಧ ಹೇರಲು ರಷ್ಯಾ ಸರ್ಕಾರ ಮುಂದಾಗಿದೆ.
Advertisement
ಈಗಾಗಲೇ ರಷ್ಯಾ ಫೇಸ್‍ಬುಕ್ ಹಾಗೂ ಟ್ವಿಟ್ಟರ್‌ಗೆ ಪ್ರವೇಶವನ್ನು ನಿರ್ಬಂಧಿಸಿದೆ. ಇದೀಗ ಇನ್‍ಸ್ಟಾಗ್ರಾಮ್ ಮೇಲೆ ಮಾರ್ಚ್ 14ರಿಂದ ನಿರ್ಬಂಧ ಹೇರಲು ನಿರ್ಧರಿಸಿದೆ. ರಷ್ಯಾ ಸೈನಿಕರ ವಿರುದ್ಧ ಹಿಂಸಾಚಾರ ನಡೆಸಲು ಇನ್‍ಸ್ಟಾಗ್ರಾಮ್‍ನಲ್ಲಿ ಬಳಕೆದಾರರಿಗೆ ಮೆಟಾ ತನ್ನ ದ್ವೇಷದ ಭಾಷಣದ ಮೂಲಕ ಕರೆ ನೀಡಲು ನಿರ್ಧರಿಸಿದ್ದರಿಂದ ಈ ಕ್ರಮ ಕೈಗೊಳ್ಳಲು ರಷ್ಯಾ ಮುಂದಾಗಿದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಘರ್ಷನೆಯಿಂದ 3ನೇ ವಿಶ್ವ ಯುದ್ಧವಾಗದಂತೆ ತಡೆಯಲು ನಾವು ಶ್ರಮಿಸಬೇಕು: ಜೋ ಬೈಡೆನ್
Advertisement
Advertisement
“ಉಗ್ರವಾದಿ ಚಟುವಟಿಕೆಯನ್ನು ಎದುರಿಸುವ” ಫೆಡರಲ್ ಕಾನೂನಿಗೆ ಅನುಸಾರವಾಗಿ, ರಷ್ಯಾದ ಒಕ್ಕೂಟದ ಪ್ರಾಸಿಕ್ಯೂಟರ್ ಜನರಲ್ ಕಚೇರಿಯು ಮೆಟಾ ಪ್ಲಾಟ್‍ಫಾಮ್ರ್ಸ್ ಅನ್ನು ಉಗ್ರಗಾಮಿ ಸಂಘಟನೆ ಎಂದು ಗುರುತಿಸಿದೆ. ರಷ್ಯಾ ಒಕ್ಕೂಟದ ಪ್ರದೇಶದಲ್ಲಿ ಅದರ ಚಟುವಟಿಕೆಗಳನ್ನು ನಿಷೇಧಿಸಲು ನ್ಯಾಯಾಲಯಕ್ಕೆ ಅರ್ಜಿಯನ್ನು ಕಳುಹಿಸಲಾಗಿದೆ ಎಂದು ತಿಳಿಸಿದೆ.
Advertisement
ಈಗಾಗಲೇ ರಷ್ಯಾ ದೇಶದಲ್ಲಿ ಫೇಸ್‍ಬುಕ್ ನಿರ್ಬಂಧಿಸಿದ್ದು, ವಾಟ್ಸಾಪ್ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಿದೆ. ಕಾರಣ ವಾಟ್ಸಾಪ್ ಮೆಟಾ ವಿರುದ್ಧದ ಕ್ರಮಗಳಿಂದ ಪ್ರಭಾವಿತವಾಗುವುದಿಲ್ಲ. ಇದು ಮಾಹಿತಿಯನ್ನು ಪೋಸ್ಟ್ ಮಾಡಲಾಗದಂತಹ ಸಂವಹನ ಸಾಧನವಾಗಿದೆ ಎಂದು ಮೂಲವೊಂದು ಸರ್ಕಾರಿ ಸ್ವಾಮ್ಯದ ಸಂಸ್ಥೆ ಆರ್‍ಐಎ ನೊವೊಸ್ಟಿಗೆ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಮೇಯರ್ ಕಿಡ್ನಾಪ್ ಮಾಡಿದ ರಷ್ಯಾ ಸೇನೆ
ಟಿಕ್‍ಟಾಕ್, ಚೀನಾದ ಒಡೆತನದ ವೀಡಿಯೋ ಅಪ್ಲಿಕೇಶನ್ ಆಗಿದ್ದು, ರಷ್ಯಾದಲ್ಲಿ ಲೈವ್-ಸ್ಟ್ರೀಮಿಂಗ್ ಮತ್ತು ವೀಡಿಯೋಗಳನ್ನು ಅಪ್‍ಲೋಡ್ ಮಾಡುವುದನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.