ಕೀವ್: ಉಕ್ರೇನ್ (Ukraine) ಮೇಲೆ ರಷ್ಯಾ (Russia) ತನ್ನ ದಾಳಿ ಮುಂದುವರಿಸಿದೆ. ಇಂದು ಏಕಕಾಲದಲ್ಲಿ 120 ಕ್ಷಿಪಣಿಗಳಿಂದ (Missiles) ಉಕ್ರೇನ್‍ನ ಕೀವ್ ನಗರದ ಮೇಲೆ ರಷ್ಯಾ ದಾಳಿ ನಡೆಸಿದೆ.
ದಾಳಿಯಲ್ಲಿ ಹದಿಹರೆಯದ ಮೂವರು ಮಕ್ಕಳಿಗೆ ಗಾಯಗಳಾಗಿದೆ. ಕೀವ್ ಮತ್ತು ಖಾರ್ಕಿವ್ ಪಟ್ಟಣಗಳ ಮೇಲೆ ದಾಳಿ ನಡೆಸಿರುವ ಕ್ಷಿಪಣಿಗಳು ಹಲವು ಕಟ್ಟಡಗಳ ಮೇಲೆ ಬಿದ್ದಿದೆ. ಪರಿಣಾಮ ಪಶ್ಚಿಮ ವಲಯದ ನಗರಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಗುಡ್‌ನ್ಯೂಸ್- ಫೆಬ್ರವರಿಯಿಂದ ಚೀತಾ ಪ್ರವಾಸೋದ್ಯಮ ಸಾಧ್ಯತೆ
ರಷ್ಯಾ ವಾಯು ಮತ್ತು ಜಲ ಮಾರ್ಗಗಳ ಮೂಲಕ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಜನ ಎಚ್ಚರಿಕೆಯಿಂದ ಇರಬೇಕೆಂದು ಉಕ್ರೇನ್ ಸೈನ್ಯ ಎಚ್ಚರಿಸಿದೆ. ಈಗಾಗಲೇ ದಾಳಿ ಇನ್ನಷ್ಟು ನಡೆಯುವ ಸಾಧ್ಯತೆ ಇರುವುದರಿಂದಾಗಿ ವಿದ್ಯುತ್ ಕಡಿತಗೊಳಿಸಲಾಗಿದೆ. ಜನ ತಮಗೆ ಬೇಕಾದಷ್ಟು ನೀರನ್ನು ತುಂಬಿಟ್ಟುಕೊಳ್ಳಿ ಎಂದು ಸೂಚಿಸಿದೆ. ಈಗಾಗಲೇ ಸೈನ್ಯ ದಾಳಿಯನ್ನು ಹಿಮ್ಮೆಟ್ಟಿಸಲು ಪ್ರಯತ್ನಸುತ್ತಿದೆ. ಯಾರು ಕೂಡ ಮನೆಯಿಂದ ಹೊರಬರಬೇಡಿ ಮನೆಯಲ್ಲೇ ಇರಿ ಎಂದು ಸೂಚಿಸಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಭೀಕರ ಹತ್ಯೆ – ಶಿರಚ್ಛೇದಿಸಿ, ಚರ್ಮ ಸುಲಿದ್ರು
Russia launched 120 missiles this morning. But we know what we should do with them⚡️#UkraineWar #Kyiv #russiaisaterrorisstate #UkraineWillResist pic.twitter.com/rj7O6OhnWo
— Ali Salyar (@Ali_Salyar) December 29, 2022
2022ರ ಫೆಬ್ರವರಿ 24ರಂದು ರಷ್ಯಾ, ಉಕ್ರೇನ್ ಮೇಲೆ ಯುದ್ಧ ಸಾರಿತ್ತು. 10 ತಿಂಗಳುಗಳಿಂದ ರಷ್ಯಾ ನಿರಂತರವಾಗಿ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ಆದರೆ ಯುದ್ಧ ಆರಂಭಗೊಂಡಾಗ ಇದ್ದಂತಹ ತೀವ್ರತೆ ಇದೀಗ ಇಳಿಕೆ ಕಂಡಿದ್ದು, ಈಗಾಗಲೇ ಸಾಕಷ್ಟು ಸಾವು-ನೋವುಗಳಾಗಿವೆ. ಉಕ್ರೇನ್ ರಷ್ಯಾದ ಕ್ರಿಮಿಯಾ ಸೇತುವೆಯನ್ನು (Crimean Bridge) ಧ್ವಂಸಗೊಳಿಸಿದ ನಂತರ ಪ್ರತೀಕಾರವಾಗಿ ರಷ್ಯಾ ದಾಳಿ ಮತ್ತಷ್ಟು ತೀವ್ರಗೊಳಿಸಿದೆ. ಈ ನಡುವೆ ರಷ್ಯಾ ಯದ್ಧ ಕೊನೆಗೊಳಿಸಲು ಮಾತುಕತೆಗೆ ಬರುವುದಾಗಿ ಉಕ್ರೇನ್‍ಗೆ ತಿಳಿಸಿದೆ.