ಕೀವ್: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಬಹುತೇಕ ಉಕ್ರೇನ್ ಅನ್ನು ಸರ್ವನಾಶ ಮಾಡಿರುವ ರಷ್ಯಾ ಶುಕ್ರವಾರ ಇನ್ನೊಂದು ಭೀಕರ ದಾಳಿ ನಡೆಸಿದೆ. ಉಕ್ರೇನ್‌ನ ಕ್ರಾಮಾಟೋರ್ಸ್ಕ್ ರೈಲು ನಿಲ್ದಾಣಕ್ಕೆ ರಾಕೆಟ್ ದಾಳಿ ನಡೆಸಿದ್ದು, 35 ಮಂದಿ ಸಾವನ್ನಪ್ಪಿದ್ದಾರೆ.
ನಾಗರಿಕರನ್ನು ಸ್ಥಳಾಂತರಿಲು ಬಳಸಲಾಗುತ್ತಿದ್ದ ರೈಲು ನಿಲ್ದಾಣದ ಮೇಲೆ ಶುಕ್ರವಾರ ರಾಕೆಟ್ ದಾಳಿ ನಡೆದಿದ್ದು, 35 ಜನರು ಸಾವನ್ನಪ್ಪಿದ್ದಾರೆ ಹಾಗೂ ನೂರಾರು ಜನರು ಗಾಯಗೊಂಡಿದ್ದಾರೆ. ಆದರೆ ರಷ್ಯಾ ತಾನು ದಾಳಿ ನಡೆಸಿರುವುದನ್ನು ಅಲ್ಲೆಗಳೆದಿದೆ. ಇದನ್ನೂ ಓದಿ: ತುರ್ತು ಭೂಸ್ಪರ್ಶ ವೇಳೆ ಕಾರ್ಗೋ ವಿಮಾನ ಇಬ್ಬಾಗ
Advertisement
Advertisement
ರಾಕೆಟ್ ದಾಳಿಯ ಬಳಿಕ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾವನ್ನು ಮಿತಿಯೇ ಇಲ್ಲದ ಕ್ರೂರಿ ಎಂದು ಟೀಕಿಸಿದ್ದಾರೆ. ಉಕ್ರೇನ್ ನಾಗರಿಕರನ್ನು ಸಿಕ್ಕ ಸಿಕ್ಕಲ್ಲಿ ಕೊಲ್ಲುತ್ತಿರುವ ರಷ್ಯಾವನ್ನು ಶಿಕ್ಷಿಸದಿದ್ದರೆ ಈ ಕ್ರೂರತನಕ್ಕೆ ಕೊನೆಯೇ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಸಸ್ಪೆಂಡ್
Advertisement
ಇತ್ತೀಚೆಗೆ ಉಕ್ರೇನ್‌ನ ಬುಚಾ ನಗರದಲ್ಲಿ ರಷ್ಯಾ ಪಡೆಗಳು ಉಕ್ರೇನಿಯನ್ನರ ಭೀಕರ ಹತ್ಯೆಗೈದಿದ್ದು, ಇದನ್ನು ಭಾರತ ಸೇರಿದಂತೆ ಹಲವು ದೇಶಗಳು ಬಲವಾಗಿ ಖಂಡಿಸಿದೆ. ಬುಚಾ ನಗರದ ರಸ್ತೆಗಳಲ್ಲಿ ಉಕ್ರೇನಿಯನ್ನರ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಇತ್ತೀಚೆಗೆ ವರದಿ ಮಾಡಲಾಗಿತ್ತು.