ವಾಷಿಂಗ್‌ಟನ್: ಸಂಯುಕ್ತ ಅರಬ್ ಒಕ್ಕೂಟ(ಯುಎಇ) ತೈಲ ಉತ್ಪಾದನೆಯನ್ನು ಹೆಚ್ಚಳ ಮಾಡುವುದಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆಯು ಬಾರೀ ಇಳಿಕೆ ಕಂಡಿದೆ.
ತೈಲ ಕಾರ್ಟೆಲ್ ಒಪೆಕ್‍ನ ಸದಸ್ಯರಾದ ಯುಎಇ ಹೇಳಿಕೆಯನ್ನು ನೀಡಿದ ನಂತರ ಬ್ರೇಂಟ್ ಕಚ್ಚಾ ತೈಲ ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಶೇ. 12ರಷ್ಟು ಇಳಿಕೆ ಕಂಡಿದ್ದು, ಸುಮಾರು 112 ಡಾಲರ್(8,549ರೂ.)ಗೆ ಇಳಿದಿದೆ.
ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಗಗನಕ್ಕೆ ಏರಿದ್ದವು. ಸೋಮವಾರ 1 ಬ್ಯಾರಲ್‍ಗೆ 130 ಡಾಲರ್ (10,006 ರೂ.) ಆಗಿತ್ತು. ಕಳೆದ 14 ವರ್ಷಗಳಲ್ಲಿ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿತ್ತು. ಇದನ್ನೂ ಓದಿ: Punjab Election Results 2022: ರಾಷ್ಟ್ರೀಯ ಕಚೇರಿ ಎದುರು ಬ್ಯಾನರ್, ಜಿಲೇಬಿ ರೆಡಿ – ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡ AAP
ಇದರಿಂದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಇತರ ನಾಯಕರು ಸಭೆ ನಡೆಸಿ, ಕಚ್ಚಾ ತೈಲ ಬೆಲೆಯ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ಅರಬ್ ರಾಷ್ಟ್ರಗಳ ತೈಲ ಉತ್ಪಾದಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯುಎಇ ರಾಯಭಾರಿ ಕಚೇರಿ, ನಾವು ತೈಲ ಉತ್ಪಾದನೆ ಮಟ್ಟವನ್ನು ಹೆಚ್ಚು ಮಾಡಲು ಒಲವು ತೋರಿಸಿದ್ದೇವೆ. ಉತ್ಪಾದನೆ ಮಟ್ಟವನ್ನು ಪರಿಗಣಿಸಲು ಒಪೆಕ್‍ನ್ನು ಪ್ರೋತ್ಸಾಹಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್
ರಷ್ಯಾ ಉಕ್ರೇನ್ ಯುದ್ಧದಿಂದ ಈಗಾಗಲೇ ಅಮೆರಿಕ ಹಾಗೂ ಕೆನಡಾ ರಾಷ್ಟ್ರಗಳು ರಷ್ಯಾದ ತೈಲ ಆಮದುಗಳನ್ನು ನಿಷೇಧಿಸಿದೆ. ಆದರೆ ಅಮೆರಿಕ ವರ್ಷಾಂತ್ಯದ ವೇಳೆಗೆ ಅವುಗಳನ್ನು ಹಂತ ಹಂತವಾಗಿ ತೆಗೆಯುವುದಾಗಿ ಹೇಳಿದೆ.