ಧಾರವಾಡ: ಬೆಳಗ್ಗೆಯಿಂದ ವಾಟ್ಸಪ್ ಸಂದೇಶಕ್ಕೆ ತಮ್ಮನಿಂದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ವಿದ್ಯಾರ್ಥಿ ಸಹೋದರ ಅನಂತ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಉಕ್ರೇನ್‍ಲ್ಲಿ ಸಿಲುಕಿರುವ ಎಂಬಿಬಿಎಸ್ ವಿದ್ಯಾರ್ಥಿ ಮಿಲನ್ ದೇವಮಾನೆ ಇಂದು ಬೆಳಿಗ್ಗೆ ಹಂಗೇರಿ ಗಡಿ ಬಳಿ ಇದ್ದೇನೆ ಎಂದು ಕುಟುಂಬದವರಿಗೆ ಹೇಳಿದ್ದ. ಅದರ ನಂತರ ಕಾಲ್ ಮಾಡುತ್ತೇನೆ ಎಂದಿದ್ದ ಮಿಲನ್, ಮತ್ತೇ ವಾಟ್ಸಪ್ ಸಂದೇಶಕ್ಕೆ ಉತ್ತರ ನೀಡಿಲ್ಲ ಎಂದು ಸಹೋದರ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ
Advertisement
Advertisement
ನಗರದ ಮಾಧ್ಯಮಗಳೊಂದಿಗೆ ಮಾತನಾಡಿದ ಸಹೋದರ ಅನಂತ ಅವರು, ಮಿಲನ್ ಜಾಫೆÇ್ರೀಜಿಯಾ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಮಾಡುತ್ತಿದ್ದಾನೆ. ಕಳೆದ ಡಿಸೆಂಬರ್‍ನಲ್ಲಿ ಉಕ್ರೇನ್‍ಗೆ ಹೋಗಿದ್ದಾನೆ ಅಂತ ಹೇಳಿದರು. ಮಿಲನ್ ಯುದ್ಧ ಇದೆ ಎಂದು ವಾಪಸ್ ಬರಲು ತಯಾರಾಗಿದ್ದನು. ಆದರೆ ದಾಖಲೆ ತಡ ಸಿಕ್ಕಿದ್ದರಿಂದ ವಿಮಾನ ಬುಕ್ ಮಾಡಲು ಆಗಿರಲಿಲ್ಲ ಎಂದರು. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಿಲ್ಲಲ್ಲ: ಮೋದಿ
Advertisement
ಮಿಲನ್ ಈಗ ರೇಲ್ವೇ ಮೂಲಕ ಹಂಗೇರಿಗೆ ಬಂದಿದ್ದಾನೆ. ಕಳೆದ ರಾತ್ರಿ 12 ಗಂಟೆಗೆ ಅವನು ಹಂಗೇರಿ ಮುಟ್ಟಿದ್ದಾನೆ. ಸದ್ಯ ಧಾರವಾಡ ಜಿಲ್ಲಾಧಿಕಾರಿ ಇಂದು ಬಂದು ನನಗೆ ಭೇಟಿ ಮಾಡಿ, ಎಲ್ಲ ಮಾಹಿತಿ ತಿಳಿದುಕೊಂಡಿದ್ದಾರೆ ಎಂದು ತಿಳಿಸಿದರು.