ಕೀವ್: ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ದಾಳಿ ಸತತ 16ನೇ ದಿನವೂ ಮುಂದುವರಿದೆ. ಉಕ್ರೇನ್‍ನ ಮರಿಯುಪೋಲ್‍ನಲ್ಲಿ ಅರ್ಧ ಗಂಟೆಗೊಂದು ಬಾಂಬ್ ಸ್ಫೋಟವಾಗುತ್ತಿರುವ ಬಗ್ಗೆ ವರದಿಯಾಗಿದೆ.
ಯುದ್ಧ ಪ್ರಾರಂಭವಾಗಿ 16 ದಿನಕ್ಕೆ ಕಾಲಿಟ್ಟಿದ್ದು, ಯುದ್ಧದ ಪರಿಣಾಮ ಮಾತ್ರ ಅಕ್ಷರಶಃ ಘನಘೋರವಾಗಿದೆ. ಈಗಾಗಲೇ ಉಕ್ರೇನ್‍ನ ಬಹುತೇಕ ನಗರಗಳಲ್ಲಿ ಕ್ಷಿಪಣಿ, ರಾಕೆಟ್‍ಗಳ ದಾಳಿಯಿಂದ ಜನ ಕಂಗೆಟ್ಟಿದ್ದಾರೆ. ಮರಿಯುಪೋಲ್‍ನಲ್ಲಿ ಆಸ್ಪತ್ರೆಯ ಮೇಲೆ ದಾಳಿ ನಡೆಸಿರುವ ರಷ್ಯಾ ಸೇನೆ ಆಸ್ಪತ್ರೆಯಲ್ಲಿದ್ದ 17ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಇದನ್ನೂ ಓದಿ: ರಷ್ಯಾ ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್ ಹಾಕುವುದು ಖಚಿತ ಎಂದ ಬ್ರಿಟನ್
https://twitter.com/olya_borderless/status/1502201180210016257
ಈಗಾಗಲೇ ರಷ್ಯಾ ದಾಳಿಗೆ ಉಕ್ರೇನ್‍ನ ಇವಾನೋ, ಲಸ್ಕ್ ಸೇರಿದಂತೆ ಹಲವು ನಗರಗಳ ಮೇಲೆ ಡೋಂಸ್ಟೆ ಮಿಸೈಲ್ ದಾಳಿ ನಡೆಸಲಾಗಿದೆ. ರಷ್ಯಾ ಸತತವಾಗಿ ಕೀವ್ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ನಡುವೆ ನಿನ್ನೆ ಉಕ್ರೇನ್ ಮತ್ತು ರಷ್ಯಾದ ವಿದೇಶಾಂಗ ಸಚಿವರು ಸಂಧಾನ ಮಾತುಕತೆಗೆ ಮುಂದಾಗಿದ್ದು, ಆದರೆ ಅದು ಫಲ ಪ್ರದವಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಬಾಂಬ್ ಶೆಲ್ಟರ್‌ನಿಂದ ಲೈವ್ ಸ್ಟ್ರೀಮ್ ಮಾಡಿದ ಉಕ್ರೇನ್ ರಾಕ್ ಬ್ಯಾಂಡ್!