ಮಾಸ್ಕೋ: ರಷ್ಯಾ – ಉಕ್ರೇನ್ ಮೇಲೆ ಯುದ್ಧ ಘೋಷಿಸುತ್ತಿದ್ದಂತೆ ಮಾಸ್ಕೋ ಮತ್ತು ಉಕ್ರೇನ್ ನಡುವಿನ ರಾಜತಾಂತ್ರಿಕ ಸಂಬಂಧ ಮುರಿದು ಬಿದ್ದಿದೆ. ಇತ್ತ ರಷ್ಯಾ- ಉಕ್ರೇನ್ ಯುದ್ಧ ವಿಚಾರವಾಗಿ ಇತರ ರಾಷ್ಟ್ರಗಳು ಮೂಗುತೂರಿಸಬೇಡಿ ಎಂದು ಪುಟಿನ್ ನೇರವಾಗಿ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Advertisement
ರಷ್ಯಾ ಈಗಾಗಲೇ ಉಕ್ರೇನ್ ಮೇಲೆ ದಾಳಿ ಆರಂಭಿಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್‍ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಉಕ್ರೇನ್‍ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದೆ. ಈ ವಿಚಾರದಲ್ಲಿ ಯಾವುದೇ ರಾಷ್ಟ್ರಗಳು ಮೂಗುತೂರಿಸದಂತೆ ಇತರ ರಾಷ್ಟ್ರಗಳಿಗೆ ವಾಡ್ಲಿಮಿರ್ ಪುಟೀನ್ ಎಚ್ಚರಿಕೆ ನೀಡಿದ್ದಾರೆ. ರಷ್ಯಾದ ಇತ್ತೀಚಿನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದು, ಹಸ್ತಕ್ಷೇಪ ಮಾಡುವ ಇತರ ರಾಷ್ಟ್ರಗಳು ಪರಿಣಾಮ ಎದುರಿಸಬೇಕಾದಿತು. ಈ ಹಿಂದೆ ಎಂದೂ ನೋಡಿರದ ತೀವ್ರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಪುಟೀನ್ ವಾರ್ನಿಂಗ್ ನೀಡಿದ್ದಾರೆ. ಇದನ್ನೂ ಓದಿ: ರಷ್ಯಾದ 6 ಮಿಲಿಟರಿ ವಿಮಾನ ಪತನ – 50 ಸೈನಿಕರನ್ನು ಹತ್ಯೆಗೈದ ಉಕ್ರೇನ್
Advertisement
Advertisement
ಈ ಬಗ್ಗೆ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಪ್ರತಿಕ್ರಿಯಿಸಿ, ಪುಟಿನ್ ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ್ದಾರೆ. ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಮತ್ತು ಗೆಲ್ಲುತ್ತದೆ. ಇದೊಂದು ಆಕ್ರಮಣಕಾರಿ ಯುದ್ಧ ಜಗತ್ತು ಪುಟೀನ್ ಅವರನ್ನು ತಡೆಯಬಹುದು ಮತ್ತು ತಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: Russia-Ukraine crisis: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಉಕ್ರೇನ್ ಮನವಿ
Advertisement
ರಷ್ಯಾ ಈಗಾಗಲೇ ಉಕ್ರೇನ್ ಮೇಲೆ ಯುದ್ಧ ಸಾರಿದ್ದು, ಉಕ್ರೇನ್‍ನಿಂದ ಜನ ಮಹಾವಲಸೆ ಆರಂಭಿಸಿದ್ದಾರೆ. ರಷ್ಯಾ ಮತ್ತು ಭಾರತದ ನಡುವೆ ಉತ್ತಮ ಸಂಬಂಧವಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಅಧ್ಯಕ್ಷರಾದ ವಾಡ್ಲಿಮಿರ್ ಪುಟೀನ್ ಜೊತೆ ಮಾತುಕತೆ ನಡೆಸಬೇಕಾಗಿದೆ ಎಂದು ಉಕ್ರೇನ್ ರಾಯಭಾರಿ ಕೇಳಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಉಕ್ರೇನ್ ರಾಯಭಾರಿ ಇಗೂರ್ ಪೋಲಿಖಾ, ಮೋದಿಯವರು ರಷ್ಯಾ ಅಧ್ಯಕ್ಷರಾದ ಪುಟೀನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಬೇಕು. ಈಗಾಗಲೇ ಯುದ್ಧ ಆರಂಭವಾಗಿದೆ. ಇದರಿಂದ ಉಕ್ರೇನ್ ನಾಗರೀಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.
ರಷ್ಯಾದ 5 ಯುದ್ಧ ವಿಮಾನ, 2 ಹೆಲಿಕಾಪ್ಟರ್, ಟ್ಯಾಂಕ್ ಮತ್ತು ಟ್ರಕ್‍ಗಳನ್ನು ಈಗಾಗಲೇ ಉಕ್ರೇನ್ ಮಿಲಿಟರಿ ಪಡೆ ಹೊಡೆದುರುಳಿಸಿದೆ. ನಾವು ಈ ಮೊದಲು ರಷ್ಯಾದ ಮಿಲಿಟರಿ ಪಡೆ ನಮ್ಮ ಗಡಿ ಪ್ರದೇಶದಿಂದ ಒಳಬರದಂತೆ ತಿಳಿಸಿದ್ದೇವು ಆದರೂ ಬಂದಿದ್ದಾರೆ ಹಾಗಾಗಿ ಉಕ್ರೇನ್, ರಷ್ಯಾದ ಮಿಲಿಟರಿ ಪಡೆಗಳನ್ನು ಹೊಡೆದುರುಳಿಸಿದೆ. ಈಗಾಗಲೇ ಪರಿಸ್ಥಿತಿ ಕೈಮೀರುತ್ತಿದ್ದು, ಭಾರತ ಕೂಡಲೇ ಮಧ್ಯಪ್ರವೇಶಿಸಿ ಮಾತುಕತೆಗೆ ಮುಂದಾಗಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ಉಕ್ರೇನ್‍ನಲ್ಲಿ ನಾಶವಾಗಿದ್ದು ಏನೇನು? ಇಲ್ಲಿದೆ ವಿವರ
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ಹಿನ್ನೆಲೆ ರಷ್ಯಾ ದೇಶದ ನಡೆಯನ್ನು ಬ್ರಿಟನ್ ಮತ್ತು ಮಿತ್ರರಾಷ್ಟ್ರಗಳು ನಿರ್ಣಾಯಕವಾಗಿ ಪ್ರತಿಕ್ರಿಯಿಸಲಿವೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೆ ನಿಡಿದ್ದಾರೆ. ಇತ್ತ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ನಾಳೆ ಜಿ 7 ರಾಷ್ಟ್ರಗಳ ಸಭೆ ಕರೆದಿದ್ದಾರೆ. ಅಮೇರಿಕಾ, ಕೆನಡಾ, ಫ್ರಾನ್ಸ್, ಜರ್ಮನಿ, ಯುಕೆ, ಜಪಾನ್, ಇಟಲಿ ನಡುವೆ ನಾಳೆ ಜಿ7 ಸಭೆ ನಡೆಯಲಿದೆ.