ವಾರ್ಸಾ: ಉಕ್ರೇನ್‍ನ ಕೀವ್‌ನಲ್ಲಿ ಸಿಲುಕಿದ್ದ ಕೇರಳದ ವ್ಯಕ್ತಿಯನ್ನು ಹಾಗೂ ಆತನ ಪತ್ನಿಯನ್ನು ʼಆಪರೇಷನ್ ಗಂಗಾʼದಡಿಯಲ್ಲಿ ಭಾರತ ರಕ್ಷಿಸಿದ್ದಕ್ಕೆ ತಮ್ಮ ಮಗುವಿಗೆ ಗಂಗಾ ಎಂಬ ಹೆಸರನ್ನು ಇಡಲು ನಿರ್ಧರಿಸಿದ್ದಾರೆ.
ಅಭಿಜಿತ್ ಕೇರಳದ ನಿವಾಸಿ. ರಷ್ಯಾ ದಾಳಿಗೆ ಪುಟ್ಟ ರಾಷ್ಟ್ರ ಉಕ್ರೇನ್ ನಲುಗಿ ಹೋಗಿದೆ. ಅಲ್ಲಿನ ಕೀವ್ ನಗರದಲ್ಲಿ ಅಭಿಜಿತ್ ಪುಟ್ಟದಾದ ರೆಸ್ಟೋರೆಂಟ್‍ನ್ನು ಇಟ್ಟುಕೊಂಡಿದ್ದರು. ಆದರೆ ರಷ್ಯಾ ದಾಳಿಯಿಂದಾಗಿ ಅಭಿಜಿತ್ ಹಾಗೂ ಅವರ ಗರ್ಭಿಣಿ ಪತ್ನಿಯು ಉಕ್ರೇನ್‌ಲ್ಲಿ ಸಿಲುಕಿದ್ದರು. ನಂತರ ಅವರನ್ನು ರಕ್ಷಿಸಿ, ಸುರಕ್ಷಿತವಾಗಿ ಪೋಲೆಂಡಿಗೆ ಕರೆತರಲಾಯಿತು.
Advertisement
Advertisement
ಈ ಬಗ್ಗೆ ಮಾತನಾಡಿದ ಅವರು, ದಾಳಿಯಿಂದ ಸುರಕ್ಷಿತವಾಗಿ ಪಾರಾದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ನನ್ನ ಪತ್ನಿ ಒಂಬತ್ತು ತಿಂಗಳ ಗರ್ಭಿಣಿ. ಇದರಿಂದಾಗಿ ಪೋಲೆಂಡ್‍ನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಪತ್ನಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯಲ್ಲಿ ತಿಳಿಸಿದ್ದಾರೆ. ಮಾರ್ಚ್ 26ಕ್ಕೆ ಮಗು ಜನಿಸುವ ನಿರೀಕ್ಷೆಯಿದೆ ಎಂದರು.
Advertisement
Advertisement
ಇದೇ ವೇಳೆ ಅವರು ಭಾರತ ಸರ್ಕಾರ ಪ್ರಾರಂಭಿಸಿದ ರಕ್ಷಣಾ ಕಾರ್ಯಾಚರಣೆಯ ಆಪರೇಷನ್ ಗಂಗಾ ಹೆಸರಿನ ನೆನಪಿಗಾಗಿ ನನ್ನ ಮಗುವಿಗೆ ಗಂಗಾ ಎಂದು ಹೆಸರಿಡುತ್ತೇನೆ ಎಂದಿದ್ದಾರೆ. ವೈದ್ಯಕೀಯ ಸುರಕ್ಷತೆಯ ಕಾರಣದಿಂದಾಗಿ ಪೋಲೆಂಡ್‍ನ ಆಸ್ಪತ್ರೆಯಲ್ಲಿ ಪತ್ನಿಯೂ ಇರಬೇಕಾದ ಕಾರಣದಿಂದಾಗಿ ಅವರನ್ನು ಬಿಟ್ಟು ತಾವೊಬ್ಬರೇ ಭಾರತಕ್ಕೆ ಬರುವುದಾಗಿ ತಿಳಿಸಿದರು. ಇದನ್ನೂ ಓದಿ: ನವೀನ್ ಮೃತದೇಹ ಪಡೆಯಲು ಎಲ್ಲ ಪ್ರಯತ್ನ: ಬಸವರಾಜ ಬೊಮ್ಮಾಯಿ
ನಾನು ಉಕ್ರೇನ್‍ನಿಂದ ಪೋಲೆಂಡ್‍ಗೆ ಬರಲು ಒಂದು ಪೈಸೆ ಖರ್ಚು ಮಾಡಿಲ್ಲ. ಎಲ್ಲವನ್ನು ಭಾರತ ಸರ್ಕಾರವೇ ನೋಡಿಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೈಕೊಟ್ಟಿತೆ ನ್ಯಾಟೋ- ರಷ್ಯಾ ಬಾಂಬ್ ದಾಳಿ ತಡೆಗೆ ಉಕ್ರೇನ್ ಮನವಿ ತಿರಸ್ಕಾರ
ಉಕ್ರೇನ್‍ನಲ್ಲಿ ಸಿಲುಕಿರುವ ಭಾರತದ ಪ್ರಜೆಗಳನ್ನು ರಕ್ಷಿಸಲು ಸರ್ಕಾರ ಆಪರೇಷನ್ ಗಂಗಾವನ್ನು ಪ್ರಾರಂಭಿಸಿದೆ. ಭಾರತದ ಏರ್ ಫೋರ್ಸ್‍ನವರು ಇದರಲ್ಲಿ ಪಾಲ್ಗೊಂಡು ಪ್ರಜೆಗಳನ್ನು ರಕ್ಷಿಸುವ ಕಾರ್ಯ ಚುರುಕುಗೊಳಿಸಿದ್ದಾರೆ.