ಕಿವ್: ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವುದನ್ನು ಇಡೀ ವಿಶ್ವ ನೋಡುತ್ತಿದೆ. ಆದರೆ ಅಲ್ಲಿನ ಜನರು ಹೊರಗೆ ಏನು ನಡೆಯುತ್ತಿದೆ ಎಂಬುದೇ ತಿಳಿಯದೆ ಉಸಿರು ಬಿಗಿಯಾಗಿಸಿ ಒದ್ದಾಡುವಂತಹ ಪರಿಸ್ಥಿತಿಗೆ ಬಂದಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ಬಾಂಬುಗಳ ದಾಳಿ ನಡೆಸುತ್ತಿದ್ದು, ಉಕ್ರೇನ್ ನಿವಾಸಿಗಳಿಗೆ ಸರ್ಕಾರ ತಮ್ಮ ಜೀವ ಉಳಿಸಿಕೊಳ್ಳಲು ಬಂಕರ್ ಹಾಗೂ ಮೆಟ್ರೋ ಸುರಂಗಗಳಿಗೆ ತೆರಳುವಂತೆ ಸೂಚನೆ ನೀಡಿದೆ. ಇದರಂತೆ ಸಾವಿರಾರು ಜನರು ದಿಕ್ಕು ತೋಚದೇ ಸುರಂಗ ಮಾರ್ಗ ಹಾಗೂ ಬಂಕರ್‍ಗಳಿಗೆ ತೆರಳಿ ಬೀಡು ಬಿಟ್ಟಿದ್ದಾರೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್
Advertisement
Advertisement
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬರು, ಇಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ನಮಗೆ ಬಂಕರ್ ಇಲ್ಲವೇ ಮೆಟ್ರೋ ಸುರಂಗಗಳಿಗೆ ಹೋಗಿ ಜೀವ ಉಳಿಸಿಕೊಳ್ಳು ಸಲಹೆ ನೀಡಲಾಗಿದೆ. ಹೀಗಾಗಿ ನಾವು ಮೆಟ್ರೋ ಸುರಂಗಗಳಲ್ಲಿ ಆಶ್ರಯ ಪಡೆದಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ನಾವೆಲ್ಲರೂ ಸುರಕ್ಷಿತವಾಗಿದ್ದೇವೆ: ಉಕ್ರೇನ್‍ನಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳು
Advertisement
Advertisement
ಮೆಟ್ರೋ ಸುರಂಗಗಳಲ್ಲಿ ಸಾವಿರಾರು ಜನರು ಜೀವ ಉಳಿಸಿಕೊಳ್ಳಲು ತೆರಳಿದ್ದು, ಇದರಲ್ಲಿ ಕರ್ನಾಟಕದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಸದ್ಯ ಯಾರಿಗೂ ತೊಂದರೆಯಾಗಿಲ್ಲ. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಕರ್ನಾಟಕ ಮೂಲದ ವಿದ್ಯಾರ್ಥಿ ಉಕ್ರೇನ್‍ನಿಂದ ಸಂದೇಶವನ್ನು ತಲುಪಿಸಿದ್ದಾರೆ.