ಮಡಿಕೇರಿ: ಮಾನವೀಯತೆ ಇಲ್ಲದ ಪರಿಸ್ಥಿತಿ ರಷ್ಯಾದಿಂದ ಅಗುತ್ತಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಉಕ್ರೇನ್ ಹಾಗೂ ರಷ್ಯಾದ ನಡುವೆ ನಡೆಯುತ್ತಿರುವ ಯುದ್ದ ಹಿನ್ನೆಲೆ ಉಕ್ರೇನ್‍ನಲ್ಲಿ ಸಿಲುಕಿಕೊಂಡು ಇರುವ ಭಾರತೀಯರಿಗೆ ಅಹಾರ ಕೊರತೆ ಎದುರಾಗಿದ್ದು, ಮಾನವೀಯತೆ ಇಲ್ಲದ ಪರಿಸ್ಥಿತಿ ರಷ್ಯಾದಿಂದ ಅಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಎಷ್ಟು ಜನರು ಭಾರತೀಯರು ಉಕ್ರೇನ್ ನಲ್ಲಿ ಸಿಲುಕಿಕೊಂಡು ಇದ್ದಾರೆ. ವಿದ್ಯಾರ್ಥಿಗಳು ಸಾರ್ವಜನಿಕರು ಅವರು ಎಲ್ಲಾರನ್ನು ಹೋಸ ಯೋಜನೆಯನ್ನೆ ಮಾಡಿ ಏರ್‌ಲಿಫ್ಟ್ ಮಾಡುವ ಕೆಲಸಗಳು ಅಗತ್ತ ಇದೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ಮೇಕೆದಾಟು ಪಾದಯಾತ್ರೆ ಮಾಡುತ್ತಿದೆ : ಕೋಟಾ ಶ್ರೀನಿವಾಸ್ ಪೂಜಾರಿ
Advertisement
Advertisement
ಉಕ್ರೇನ್‍ನಲ್ಲಿ ನಡೆಯುತ್ತಿರುವ ಯುದ್ದದಿಂದ ಅಲ್ಲಿಯ ಗಡಿಭಾಗದಲ್ಲಿ ಇರುವವರನ್ನು ಕರೆತರುವ ಕೆಲಸ ವಿಳಂಬ ಆಗಿದೆ. ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಅಲ್ಲೇ ಸಿಲುಕಿರುವುದರಿಂದ ಜನಪ್ರತಿನಿಧಿಯಾಗಿ ನಾವು ಹೆಚ್ಚು ಗಮನ ಹರಿಸಬೇಕಿದೆ. ಸಂಬಂಧಪಟ್ಟ ಕರ್ನಾಟಕ ಆದಿಕಾರಿಗಳ ಜೊತೆಯು ದೂರವಾಣಿ ಸಂಪರ್ಕ ಮಾಡಿ ವ್ಯವಸ್ಥೆಗಳನ್ನು ಮಾಡವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ವಿದ್ಯುತ್ ಪೂರೈಕೆ ಉಚಿತವಲ್ಲ, ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್ : ನಿತಿನ್ ರಾವತ್
Advertisement
Advertisement
ವಿದ್ಯಾರ್ಥಿಗಳಿಗೆ ಅಹಾರದ ಕೊರತೆ ಎದುರಾಗಿದೆ. ಮಾನವೀಯತೆ ಇಲ್ಲದ ಪರಿಸ್ಥಿತಿ ರಷ್ಯಾದಿಂದ ಅಗುತ್ತಿದೆ ಅದು ಅಗಬರದಾಗಿತ್ತು.ಅದ್ರೆ ಅವರು ಮಾಡುತ್ತಿದ್ದಾರೆ. ಸದ್ಯದಲ್ಲೇ ಬೇಗಾ ಏರ್‍ಲಿಪ್ಟ್ ಮಾಡುವ ಕೆಲಸ ಅದಷ್ಟು ಬೇಗಾ ಅಗುತ್ತದೆ ಎಂದು ನನ್ನ ಆಶಾಭಾವನೆಯಾಗಿದೆ. ದೇವರ ಕೃಪೆ ಇರಬೇಕು ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.