ಕೀವ್: ರಷ್ಯಾ-ಉಕ್ರೇನ್ (Russia-Ukraine) ನಡುವೆ ಮತ್ತೆ ಯುದ್ಧದ (War) ಭೀತಿ ಆರಂಭವಾಗಿದ್ದು, ಉಕ್ರೇನ್‍ನಲ್ಲಿರುವ ಭಾರತೀಯರು (Indians) ಕೂಡಲೇ ಉಕ್ರೇನ್ ಬಿಟ್ಟು ಬನ್ನಿ ಎಂದು ಭಾರತೀಯರಿಗಾಗಿ 5 ಬಾರ್ಡರ್ ಕ್ರಾಸಿಂಗ್‍ನ್ನು (Border-Crossing) ಭಾರತದ ರಾಯಭಾರ ಕಚೇರಿ (Indian Embassy) ಗುರುತಿಸಿದೆ.
Advertisement
ರಷ್ಯಾ-ಉಕ್ರೇನ್ ಮೇಲೆ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸಿದ್ದು, ಇದೀಗ ಭಾರತ ಭಾರೀ ಕಳವಳ ವ್ಯಕ್ತಪಡಿಸಿದೆ. ಉಕ್ರೇನ್‍ನಲ್ಲಿರುವ ತನ್ನ ನಾಗರಿಕರಿಗೆ ಭಾರತ, ತುರ್ತಾಗಿ ಉಕ್ರೇನ್ ಅನ್ನು ತೊರೆಯುವಂತೆ ತಿಳಿಸಿದೆ. ಪ್ರಸ್ತುತ ಉಕ್ರೇನ್‍ನಲ್ಲಿರುವ ವಿದ್ಯಾರ್ಥಿಗಳು (Students) ಸೇರಿದಂತೆ ಭಾರತೀಯ ನಾಗರಿಕರು ಕೂಡಲೇ ಉಕ್ರೇನ್ ಬಿಟ್ಟು ಬರುವಂತೆ ಭಾರತೀಯರಿಗೆ 5 ಬಾರ್ಡರ್ ಕ್ರಾಸಿಂಗ್ ಗುರುತಿಸಿ ಸುರಕ್ಷಿತವಾಗಿ ಭಾರತಕ್ಕೆ ಮರಳಲು ಸಹಾಯ ಮಾಡುತ್ತಿದೆ. ಜೊತೆಗೆ ಸಹಾಯವಾಣಿ ಕೂಡ ತೆರೆದಿದೆ. ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು
Advertisement
Advertisement
ಯಾವೆಲ್ಲ ಬಾರ್ಡರ್?
ಉಕ್ರೇನ್-ಹಂಗೇರಿ ಗಡಿ:
ಉಕ್ರೇನ್-ಹಂಗೇರಿ ಗಡಿ ಪ್ರದೇಶದ ಚೆಕ್‍ಪೋಸ್ಟ್‌ಗಳು ಜಕಾರ್ಪತಿಯಾ ಪ್ರದೇಶದಲ್ಲಿವೆ. ಇಲ್ಲಿಂದ ರೈಲಿನಲ್ಲಿ ಚಾಪ್ ಸಿಟಿಗೆ ಪ್ರಯಾಣಿಸುವುದು ಅನುಕೂಲಕರ ಆಯ್ಕೆಯಾಗಿದೆ. ಗಡಿ ದಾಟಲು, ಭಾರತೀಯ ಪ್ರಜೆಗಳು ಮಾನ್ಯವಾದ ಪಾಸ್‌ಪೋರ್ಟ್, ಮಾನ್ಯ ಉಕ್ರೇನಿಯನ್ ನಿವಾಸಿ ಪರವಾನಿಗೆ (Posvidka). ವಿದ್ಯಾರ್ಥಿ ಕಾರ್ಡ್ ಅಥವಾ ವಿದ್ಯಾರ್ಥಿ ಪ್ರಮಾಣಪತ್ರ, ವಿಮಾನ ಟಿಕೆಟ್ ಇದ್ದರೆ ಈ ಗಡಿ ಮೂಲಕ ದಾಖಲೆಗಳೊಂದಿಗೆ ಬರಬಹುದಾಗಿದೆ. ಇದನ್ನೂ ಓದಿ: ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ
Advertisement
ಉಕ್ರೇನ್-ಸ್ಲೋವಾಕಿಯಾ ಗಡಿ:
ಉಕ್ರೇನ್-ಸ್ಲೋವಾಕಿಯಾ ಗಡಿಯಲ್ಲಿ ಚೆಕ್‍ಪಾಯಿಂಟ್‍ಗಳು ಜಕಾರ್ಪತಿಯಾ ಪ್ರದೇಶದಲ್ಲಿದೆ. ಅಲ್ಲಿ ಈಗಾಗಲೇ ಮಾನ್ಯವಾದ ಷೆಂಗೆನ್/ಸ್ಲೋವಾಕ್ ವೀಸಾವನ್ನು ಹೊಂದಿಲ್ಲದಿದ್ದರೆ, ಭಾರತೀಯ ಪ್ರಜೆಗಳು ಗಡಿ ಚೆಕ್ ಪೋಸ್ಟ್‌ನಲ್ಲಿ ವೀಸಾವನ್ನು ಪಡೆಯಬೇಕಾಗುತ್ತದೆ. ಇಲ್ಲಿ ವೀಸಾ ಪಡೆಯಲು ಮತ್ತು ಗಡಿ ದಾಟಲು, ಭಾರತೀಯ ಪ್ರಜೆಗಳು ಮಾನ್ಯವಾದ ಪಾಸ್‌ಪೋರ್ಟ್. ಮಾನ್ಯ ಉಕ್ರೇನಿಯನ್ ನಿವಾಸಿ ಪರವಾನಿಗೆ . ವಿದ್ಯಾರ್ಥಿ ಕಾರ್ಡ್ ಅಥವಾ ವಿದ್ಯಾರ್ಥಿ ಪ್ರಮಾಣಪತ್ರ, ವಿಮಾನ ಟಿಕೆಟ್ ದಾಖಲೆ ಇದ್ದರೆ ಸಾಕು.
ಉಕ್ರೇನ್-ಮಾಲ್ಡೊವಾ ಗಡಿ:
ಉಕ್ರೇನ್-ಮಾಲ್ಡೊವಾ ಗಡಿ ಮೂಲಕ ಬಂದರೆ ಚೆಕ್‍ಪಾಯಿಂಟ್‍ಗಳು ಚೆರ್ನಿವೆಟ್ಸ್ಕಾ, ವಿನ್ನಿಟ್ಸ್ಕಾ ಮತ್ತು ಒಡೆಸ್ಕಾ ಪ್ರದೇಶದಲ್ಲಿದೆ. ಅಲ್ಲಿಗೆ ಬಂದು ಈಗಾಗಲೇ ಮಾನ್ಯವಾದ ಮೊಲ್ಡೊವನ್ ವೀಸಾವನ್ನು ಹೊಂದಿಲ್ಲದಿದ್ದರೆ, ಭಾರತೀಯ ಪ್ರಜೆಗಳು ಕೈವ್‍ನಲ್ಲಿರುವ ಮೊಲ್ಡೊವಾ ರಾಯಭಾರ ಕಚೇರಿಯಲ್ಲಿ ಮುಂಚಿತವಾಗಿ ಮೊಲ್ಡೊವನ್ ಟ್ರಾನ್ಸಿಟ್ ವೀಸಾವನ್ನು ಪಡೆಯಬೇಕಾಗುತ್ತದೆ. ಗಡಿ ದಾಟಲು ಭಾರತೀಯ ಪ್ರಜೆಗಳು ಭಾರತೀಯ ಪ್ರಜೆಗಳು ಮಾನ್ಯವಾದ ಪಾಸ್‌ಪೋರ್ಟ್. ಮಾನ್ಯ ಉಕ್ರೇನಿಯನ್ ನಿವಾಸಿ ಪರವಾನಿಗೆ. ವಿದ್ಯಾರ್ಥಿ ಕಾರ್ಡ್ ಅಥವಾ ವಿದ್ಯಾರ್ಥಿ ಪ್ರಮಾಣಪತ್ರ, ಏರ್ ಟಿಕೆಟ್ ದಾಖಲೆ ಹೊಂದಿದ್ದರೆ ಗಡಿ ದಾಟ ಬಹುದಾಗಿದೆ. ಇದನ್ನೂ ಓದಿ:
ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಚೀನಾದ ಅಧ್ಯಕ್ಷ ಜಿನ್‌ಪಿಂಗ್ 3ನೇ ಅವಧಿಗೆ ಮರು ಆಯ್ಕೆ
ಉಕ್ರೇನ್-ಪೋಲೆಂಡ್ ಗಡಿ:
ಉಕ್ರೇನ್-ಪೋಲೆಂಡ್ ಗಡಿಯಲ್ಲಿ ಚೆಕ್‍ಪಾಯಿಂಟ್‍ಗಳು ಎಲ್ವಿವ್ಸ್ಕಾ, ವೊಲಿನ್ಸ್ಕಾ ಪ್ರದೇಶಗಳಲ್ಲಿದೆ. ಇಲ್ಲಿಗೆ ಬರುವ ಭಾರತೀಯರು ಮಾನ್ಯವಾದ ಷೆಂಗೆನ್, ಪೋಲಿಷ್ ವೀಸಾವನ್ನು ಹೊಂದಿಲ್ಲದಿದ್ದರೆ, ಭಾರತೀಯ ಪ್ರಜೆಗಳು ಪೋಲೆಂಡ್‍ನ ಕಾನ್ಸುಲೇಟ್ ಜನರಲ್‍ನಲ್ಲಿ ಮುಂಚಿತವಾಗಿ ಷೆಂಗೆನ್, ಪೋಲಿಷ್ ವೀಸಾವನ್ನು ಪಡೆಯಬೇಕಾಗುತ್ತದೆ. ಭಾರತೀಯ ಪ್ರಜೆಗಳು ಮಾನ್ಯವಾದ ಪಾಸ್‌ಪೋರ್ಟ್. ಮಾನ್ಯ ಉಕ್ರೇನಿಯನ್ ನಿವಾಸಿ ಪರವಾನಿಗೆ. ವಿದ್ಯಾರ್ಥಿ ಕಾರ್ಡ್ ಅಥವಾ ವಿದ್ಯಾರ್ಥಿ ಪ್ರಮಾಣಪತ್ರ, ವಿಮಾನ ಟಿಕೆಟ್ ದಾಖಲೆ ಇದ್ದರೆ ಇಲ್ಲಿ ಗಡಿ ದಾಟಲು ಅವಕಾಶವಿದೆ.
ಉಕ್ರೇನ್-ರೊಮೇನಿಯಾ ಗಡಿ:
ಭಾರತೀಯ ರಾಯಭಾರ ಕಚೇರಿ ಹೊರಡಿಸಿದ ಸಲಹೆಯ ಪ್ರಕಾರ, ಚೆಕ್‍ಪೋಸ್ಟ್‌ಗಳು ಜಕಾರ್ಪತಿಯಾ ಮತ್ತು ಚೆರ್ನಿವೆಟ್ಸ್ಕಾನಲ್ಲಿವೆ. ಇಲ್ಲಿಗೆ ಬಂದು ಮಾನ್ಯವಾದ ರೊಮೇನಿಯನ್ ವೀಸಾವನ್ನು ಹೊಂದಿಲ್ಲದಿದ್ದರೆ, ಭಾರತೀಯ ಪ್ರಜೆಗಳು ಕಾನ್ಸುಲೇಟ್ ಜನರಲ್‍ನಲ್ಲಿ ಮುಂಚಿತವಾಗಿ ರೊಮೇನಿಯನ್ ವೀಸಾವನ್ನು ಪಡೆಯಬೇಕು. ಈ ವೀಸಾ ಪಡೆಯಲು ಭಾರತೀಯ ಪ್ರಜೆಗಳು ಮಾನ್ಯವಾದ ಪಾಸ್‌ಪೋರ್ಟ್. ಮಾನ್ಯ ಉಕ್ರೇನಿಯನ್ ನಿವಾಸಿ ಪರವಾನಿಗೆ. ವಿದ್ಯಾರ್ಥಿ ಕಾರ್ಡ್ ಅಥವಾ ವಿದ್ಯಾರ್ಥಿ ಪ್ರಮಾಣಪತ್ರ, ವಿಮಾನ ಟಿಕೆಟ್ ದಾಖಲೆ ಇದ್ದರೆ ಗಡಿ ದಾಟಲು ಅವಕಾಶ ನೀಡಲಾಗಿದೆ.
ಸಹಾಯವಾಣಿ:
ಭಾರತದ ರಾಯಭಾರ ಕಚೇರಿ, ಕೈವ್: +380933559958, +380635917881, +380678745945
ಹಂಗೇರಿಯಲ್ಲಿರುವ ಭಾರತದ ರಾಯಭಾರ ಕಚೇರಿ: +361325-7742/43, +36305154192
ಸ್ಲೋವಾಕಿಯಾದಲ್ಲಿ ಭಾರತದ ರಾಯಭಾರ ಕಚೇರಿ: +421252962916, +421908025212, +421951697560
ರೊಮೇನಿಯಾದಲ್ಲಿ ಭಾರತದ ರಾಯಭಾರ ಕಚೇರಿ: +40372147432, +40731347727
ಪೋಲೆಂಡ್‍ನಲ್ಲಿರುವ ಭಾರತದ ರಾಯಭಾರ ಕಚೇರಿ: +48225400000, +48606700105