ಹಾಸನ: ರಷ್ಯಾ ದಾಳಿಗೆ ಸಿಲುಕಿರುವ ಉಕ್ರೇನ್ ದೇಶದ ಖಾರ್ಕಿವ್‌ನಲ್ಲಿ ಕಟ್ಟಡಗಳು ನಾಶವಾಗಿದ್ದು, ನಾವು ವಿದ್ಯಾಭ್ಯಾಸ ಮಾಡಲು ಹೋಗಿದ್ದ ಉಕ್ರೇನ್ ಇದೇನಾ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸದ್ಯದ ಉಕ್ರೇನ್ ಸ್ಥಿತಿಯ ಬಗ್ಗೆ ಹಾಸನದ ಗಗನ್ ಗೌಡ ಆತಂಕ ಹೊರಹಾಕಿದ್ದಾರೆ.
ಎಂಬಿಬಿಎಸ್ ಓದಲು ಹೋಗಿದ್ದ ಗಗನ್ ಗೌಡ ಯುದ್ಧ ನಡೆಯುತ್ತಿದ್ದ ಖಾರ್ಕಿವ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು. ಯುದ್ಧದ ಸಂದರ್ಭ ಬಂಕರ್‌ನಲ್ಲಿ ರಕ್ಷಣೆ ಪಡೆದಿದ್ದ ಗಗನ್ ಊಟ, ನೀರಿಲ್ಲದೆ ಕಾಲ ಕಳೆದಿದ್ದೆವು. ಊಟಕ್ಕೆ ಹೊರಗೆ ಹೋದರೆ ಮತ್ತೆ ವಾಪಸ್ ಬರುವ ನಂಬಿಕೆ ಇರಲಿಲ್ಲ. ಹೀಗಾಗಿ ಜೀವ ಇದ್ದರೆ ಅಲ್ಲವೆ ಬದುಕು ಎಂದು ಹಸಿವನ್ನು ಸಹಿಸಿಕೊಂಡು ಬಂಕರ್‌ನಲ್ಲೇ ಇದ್ದೆವು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ಇದನ್ನೂ ಓದಿ: ಮತ್ತೆ 4 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಿದ್ದಾರಾ ವಿಶಾಲ್ ಗಾರ್ಗ್?
ಅಲ್ಲಿಯ ಪರಿಸ್ಥಿತಿ ಭಯಾನಕವಾಗಿತ್ತು. ನಾವು ಇದ್ದ ಸ್ಥಳದ ಸುತ್ತಮುತ್ತ ಬಾಂಬ್ ದಾಳಿಯಾಗುತ್ತಿದ್ದು, ಅದರ ಸದ್ದು ಆತಂಕ ಉಂಟುಮಾಡಿತ್ತು. ಅಂತಿಮವಾಗಿ ಕಾರ್ಕಿವ್ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ತೊರೆದು, ರೈಲನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಂದೆವು ಎಂದು ತಿಳಿಸಿದರು. ಇದನ್ನೂ ಓದಿ: ಪುಟಿನ್‍ನ್ನು ತಡೆಯದಿದ್ದರೇ ಯಾರೂ ಸುರಕ್ಷಿತವಾಗಿರಲ್ಲ: ಉಕ್ರೇನ್ ಅಧ್ಯಕ್ಷರ ಪತ್ನಿ
ನಾವು ಭಾರತಕ್ಕೆ ವಾಪಸ್ ಬರುವಲ್ಲಿ ನಮ್ಮ ಸರ್ಕಾರ ನಮಗೆ ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.