ಕೀವ್: ರಷ್ಯಾ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಭೀಕರ ಯುದ್ಧ, ರಕ್ತಪಾತದ ನಡುವೆಯೂ ಯಾವೊಬ್ಬ ದೇಶವೂ ಶರಣಾಗುವ ಹಂತಕ್ಕೆ ಬಂದಿಲ್ಲ. ಆದರೆ ಉಕ್ರೇನ್ ಅಧ್ಯಕ್ಷನ ನಕಲಿ ಟೆಲಿಗ್ರಾಮ್ ಖಾತೆ ಸೈನಿಕರಲ್ಲಿ ಗೊಂದಲ ಸೃಷ್ಟಿಸುವಂತೆ ಮಾಡಿದೆ.
ಉಕ್ರೇನ್ ಅಧ್ಯಕ್ಷನ ಟೆಲಿಗ್ರಾಮ್ ಖಾತೆಯಂತೆಯೇ ಹೋಲುವ ನಕಲಿ ಖಾತೆಯೊಂದರಲ್ಲಿ ಉಕ್ರೇನ್ ಯೋಧರಿಗೆ ಶರಣಾಗುವಂತೆ ಸಂದೇಶ ನೀಡಲಾಗಿತ್ತು. ಈ ಸಂದೇಶ ದೇಶಾದ್ಯಂತ ವೈರಲ್ ಆಗುತ್ತಿದ್ದಂತೆ ಸೈನಿಕರಲ್ಲಿ ಗೊಂದಲ ಏರ್ಪಟ್ಟಿತು.
ಈ ಮಾಹಿತಿ ಹರಿದಾಡಲು ಪ್ರಾರಂಭವಾಗುತ್ತಿದ್ದಂತೆ ಉಕ್ರೇನ್ ಅಧ್ಯಕ್ಷ ಎಚ್ಚೆತ್ತು, ಇದು ತಪ್ಪು ಮಾಹಿತಿ ಎಂದು ತನ್ನ ಪ್ರಜೆಗಳಿಗೆ ತಿಳಿಸಿದ್ದಾರೆ. ಬಳಿಕ ಝೆಲೆನ್ಸ್ಕಿ ಹೆಸರಿನಲ್ಲಿದ್ದ ನಕಲಿ ಖಾತೆಯನ್ನು ಬ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್
ವರದಿಗಳ ಪ್ರಕಾರ ಝೆಲೆನ್ಸ್ಕಿಯ ನಕಲಿ ಟೆಲಿಗ್ರಾಮ್ ಖಾತೆಯನ್ನು ತೆಗೆದು ಹಾಕುವುದಕ್ಕೂ ಮೊದಲು ಸುಮಾರು 20,000 ಅನುಯಾಯಿಗಳು ಇದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಗೆಳತಿಗೆ ಪ್ರಪೋಸ್ ಮಾಡಿದ ಉಕ್ರೇನ್ ಯೋಧನ ಮನಕರಗುವ ವೀಡಿಯೋ
ಟೆಲಿಗ್ರಾಮ್ ಉಕ್ರೇನ್‌ನಲ್ಲಿ ವ್ಯಾಪಕವಾಗಿ ಬಳಸುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಉಕ್ರೇನ್‌ನಲ್ಲಿ ಅತ್ಯಂತ ಉಪಯುಕ್ತವಾಗಿದ್ದು, ಇದರ ವೈಶಿಷ್ಯದಲ್ಲಿ 2ಲಕ್ಷ ಸದಸ್ಯರಿರುವ ಗುಂಪಿಗೂ ಸಂದೇಶ ಕಳುಹಿಸಲು ಸಾಧ್ಯವಿದೆ. ಆದರೆ ಟೆಲಿಗ್ರಾಮ್‌ನ ನಕಲಿ ಖಾತೆಯ ತಪ್ಪು ಮಾಹಿತಿಯಿಂದಾಗಿ ಸೈನಿಕರ ದಾರಿ ತಪ್ಪಿಸುವಂತೆ ಮಾಡಿದೆ.