ಮಾಸ್ಕೋ ಮೇಲೆ ಡ್ರೋನ್‌ ದಾಳಿ – ಇದು ಉಕ್ರೇನ್‌ ಕೃತ್ಯ ಎಂದ ರಷ್ಯಾ

Public TV
1 Min Read
Russia Ukraine war Drone attacks on Moscow

ಮಾಸ್ಕೋ: ರಷ್ಯಾ ಉಕ್ರೇನ್‌ ಯುದ್ಧ (Russia-Ukraine War) ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಮಾಸ್ಕೋ (Moscow) ಮೇಲೆ ಡ್ರೋನ್‌ ದಾಳಿ (Drone Attacks) ನಡೆದಿದ್ದು, ಈ ದಾಳಿಯನ್ನು ಉಕ್ರೇನ್‌ ನಡೆಸಿದೆ ಎಂದು ರಷ್ಯಾ ಆರೋಪ ಮಾಡಿದೆ

ಪಶ್ಚಿಮದಲ್ಲಿರುವ ಓಡಿಂಟ್ಸೊವೊ ಜಿಲ್ಲೆಯಲ್ಲಿ ಒಂದು ಡ್ರೋನ್‌ ಹೊಡೆದು ಉರುಳಿಸಲಾಗಿದೆ. ಇನ್ನು ಎರಡು ಡ್ರೋನ್‌ ಮೇಲೆ ದಾಳಿ ಮಾಡಿ ತಟಸ್ಥಗೊಳಿಸಿದ್ದರೂ ಅವು ಕಟ್ಟಡದ ಮೇಲೆ ಅಪ್ಪಳಿಸಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ಈ ದಾಳಿಯಿಂದ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಎರಡು ಕಟ್ಟಡಗಳ ಮುಂಭಾಗಗಳು ಸ್ವಲ್ಪ ಹಾನಿಗೊಳಗಾಗಿವೆ ಎಂದು ನಗರದ ಮೇಯರ್ ಸೆರ್ಗೆಯ್ ಸೊಬಯಾನಿನ್ ಹೇಳಿದ್ದಾರೆ. ಇದನ್ನೂ ಓದಿ: ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದ ಶಾಸಕ ಪ್ರದೀಪ್ ಈಶ್ವರ್

ಉಕ್ರೇನ್‌ ಅಧಿಕಾರಿಗಳು ಘಟನೆಯನ್ನು ಒಪ್ಪಿಕೊಂಡಿಲ್ಲ. ನಗರ ಕೇಂದ್ರದ ನೈಋತ್ಯದಲ್ಲಿರುವ ವ್ನುಕೊವೊ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು ಈ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವಿಮಾನಗಳನ್ನು ಬೇರೆ ನಿಲ್ದಾಣಗಳ ಕಡೆಗೆ ತಿರುಗಿಸಲಾಗಿದೆ.

ಭಾನುವಾರ ಬೆಳಗಿನ ಜಾವ ಈ ದಾಳಿ ನಡೆದಿದೆ. ಉಕ್ರೇನ್‌ ಗಡಿಯಿಂದ ಮಾಸ್ಕೋ 500 ಕೀ.ಮೀ ದೂರದಲ್ಲಿದೆ. ರಷ್ಯಾದ ಒಳಗಡೆ ನಡೆದ ದಾಳಿಗೆ ನಾನು ಕಾರಣ ಎಂದು ಉಕ್ರೇನ್‌ ಒಪ್ಪಿಕೊಂಡಿರುವುದು ಬಹಳ ವಿರಳ.

Web Stories

Share This Article