ಮಡಿಕೇರಿ: ಕೊಡಗಿನ ವಿದ್ಯಾರ್ಥಿ ಶಾರುಖ್ ಸುರಕ್ಷಿತವಾಗಿ ಇದ್ದಾನೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ತಿಳಿಸಿದ್ದಾರೆ.
ಓರ್ವ ವಿದ್ಯಾರ್ಥಿಯೊಬ್ಬರು ಸಂಪರ್ಕಕ್ಕೆ ಸಿಗದೇ ಅವರ ಕುಟುಂಬ ವರ್ಗದವರು ಕಂಗಾಲಾಗಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಕೊಡಗು ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಹೈ ಅಲರ್ಟ್ ಆಗಿದ್ದರು. ಇದನ್ನೂ ಓದಿ: ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ: ಸ್ಮೃತಿ ಇರಾನಿ
Advertisement
Advertisement
ಮೂರು ನಾಲ್ಕು ದಿನಗಳಿಂದ ಸಂಪರ್ಕಕ್ಕೆ ಸಿಗದೆ ಇರುವ ವಿದ್ಯಾರ್ಥಿ ಶಾರುಖ್ ಅವರನ್ನು ಸಂಪರ್ಕ ಮಾಡಿ ತೊಂದರೆಯಲ್ಲಿ ಸಿಲುಕಿದ್ದೀರಾ ಎಂದು ಕೇಳಿದ್ದಾರೆ. ಬಳಿಕ ಶಾರುಖ್ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ನಾವು ಉಕ್ರೇನ್ ಗಡಿಭಾಗವನ್ನು ದಾಟಿ ಬರುತ್ತಿದ್ದೇವೆ. ಯಾರು ಅತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗೆ ಶಾರುಖ್ ತಿಳಿಸಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ
Advertisement
ಮಗ ಸಂಪರ್ಕಕ್ಕೆ ಸಿಕ್ಕಿ ಮಾತಾನಾಡಿರುವುದರಿಂದ ಸ್ಪಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಅಗಿದೆ ಎಂದು ಪೋಷಕರು ತಿಳಿಸಿದ್ದಾರೆ.