ಉಕ್ರೇನ್ ಯುದ್ಧದ ನಡುವೆ ಕಾಂಡೋಮ್‍ಗೆ ಬೇಡಿಕೆ – ರಷ್ಯಾದಲ್ಲಿ ಗಗನಕ್ಕೇರಿದ ಬೆಲೆ

Public TV
2 Min Read
Condom Neaw 3

ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧದ ನಡುವೆ ರಷ್ಯಾದಲ್ಲಿ ಕಾಂಡೋಮ್‍ಗೆ ಬೇಡಿಕೆ ಹೆಚ್ಚಳಗೊಂಡಿದ್ದು, ಬೆಲೆ ಗಗನಕ್ಕೇರಿದೆ.

RUSSIA UKRANE WAR 9

ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ನಡೆಗೆ ಈಗಾಗಲೇ ವಿಶ್ವದ ಇತರ ಕೆಲ ದೇಶಗಳು ನಿರ್ಬಂಧ ವಿಧಿಸಿದ ಪರಿಣಾಮ ರಷ್ಯಾದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ. ಇದೀಗ ಇತರ ದೇಶಗಳು ನಿಷೇಧಾಜ್ಲೆ ಹೊರಡಿಸಿರುವುದರಿಂದ ರಷ್ಯಾದಲ್ಲಿ ಕಾಂಡೋಮ್‍ಗೆ ಕೊರತೆ ಉಂಟಾಗಬಹುದು ಎಂಬ ಭಯದಿಂದ ಜನ ಕಾಂಡೋಮ್ ಖರೀದಿಗೆ ಮುಗಿಬಿದ್ದಿದ್ದಾರೆ. ಇದರಿಂದ ಕಾಂಡೋಮ್‍ಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೂ ಓದಿ: 133 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ

ಈ ಬಗ್ಗೆ ಸ್ಥಳೀಯ ಮಧ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿರುವ ರಷ್ಯಾದ ಅತಿದೊಡ್ಡ ರಿಟೇಲರ್ ವೈಲ್ಡ್‌ಬೆರ್ರಿ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರ್ಚ್‍ನ ಮೊದಲ ಎರಡು ವಾರಗಳಲ್ಲಿ ಕಾಂಡೋಮ್ ಮಾರಾಟದಲ್ಲಿ ಶೇ.170 ರಷ್ಟು ಏರಿಕೆ ಆಗಿದೆ. ಇತರ ಕೆಲ ದೇಶಗಳು ನಿರ್ಬಂಧ ಹೇರಿರುವ ಪರಿಣಾಮ ಈ ಪರಿಸ್ಥಿತಿ ಕಂಡುಬಂದಿದೆ. ಜನಸಾಮಾನ್ಯರು ಮುಂದೆ ಕಾಂಡೋಮ್ ಸಿಗುವುದು ಕಷ್ಟ ಎಂದು ಭಾವಿಸಿಕೊಂಡು ಕಾಂಡೋಮ್‍ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ ಎಂದು ತಿಳಿಸಿದೆ.

Condom 4

ಇತ್ತ ಡ್ಯುರೆಕ್ಸ್ ಮತ್ತು ಇತರ ಬ್ರಾಂಡ್‍ಗಳ ತಯಾರಕ ಬ್ರಿಟಿಷ್ ಕಂಪನಿ ರೆಕಿಟ್, ರಷ್ಯಾದಲ್ಲಿ ವ್ಯವಹಾರವನ್ನು ಮುಂದುವರೆಸಿದೆ. ಪ್ರಮುಖ ಫಾರ್ಮಸಿ ಚೈನ್ 36.6 ಇಲ್ಲಿ ತನ್ನ ಮಾರಾಟದಲ್ಲಿ ಶೇ. 26 ಹೆಚ್ಚಳವಾಗಿದೆ ಎಂದು ಸ್ಪಷ್ಟಪಡಿಸಿದ್ದು, ಕೆಮಿಸ್ಟ್ ಕಾಂಡೋಮ್‍ಗಳ ಖರೀದಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 32 ರಷ್ಟು ಏರಿಕೆ ಕಂಡಿದೆ. ಅಲ್ಲದೆ ರಷ್ಯಾದ ಸೂಪರ್ ಮಾರ್ಕೆಟ್‍ಗಳಲ್ಲೂ ಕೂಡ ಶೇ. 30 ರಷ್ಟು ಜನ ಕಾಂಡೋಮ್ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ ಬೇಡಿಕೆಗೆ ಅನುಗುಣವಾಗಿ ಬೆಲೆ ಏರಿಕೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಬ್ರಾಂಡ್‍ಗೆ ಅನುಗುಣವಾಗಿ ಕೆಲ ಕಾಂಡೋಮ್‍ಗಳ ಬೆಲೆ ಶೇ. 50 ರಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ ಪಾಕ್ ಪ್ರಧಾನಿ

Condom 1

ಮೂಲಗಳ ಪ್ರಕಾರ ರಷ್ಯಾ ವರ್ಷಕ್ಕೆ 600 ಮಿಲಿಯನ್ (60 ಕೋಟಿ) ಕಾಂಡೋಮ್‍ಗಳನ್ನು ಆಮದು ಮಾಡಿಕೊಳ್ಳುತ್ತದೆ. ಕೇವಲ 100 ಮಿಲಿಯನ್ (10 ಕೋಟಿ) ಮಾತ್ರ ತಮ್ಮ ದೇಶದಲ್ಲಿ ಉತ್ಪಾದಿಸುತ್ತಿರುವುದಾಗಿ ವರದಿಯಾಗಿದೆ. ಅಲ್ಲದೆ ರಷ್ಯಾದಲ್ಲಿ ಬ್ರಿಟಿಷ್ ಮೂಲದ ಕಂಪನಿಗಳು ಹೆಚ್ಚಾಗಿ ಕಾಂಡೋಮ್ ವ್ಯವಹಾರವನ್ನು ನಡೆಸುತ್ತಿವೆ.

Share This Article