ಲಂಡನ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಶುರುವಾದ ದಿನದಿಂದ ಬ್ರೆಂಟ್ ಕಚ್ಚಾ ತೈಲ ಬೆಲೆ ಏರುಮುಖವಾಗಿ ಸಾಗುತ್ತಿದೆ. ಬುಧವಾರ 1 ಬ್ಯಾರಲ್‌ಗೆ 113 ಡಾಲರ್‌ಗೆ (8,565 ರೂಪಾಯಿ) ಏರಿಕೆಯಾಗಿದೆ.
2014ರ ಬಳಿಕ ಇದೇ ಮೊದಲ ಬಾರಿಗೆ ಬ್ರೆಂಟ್ ಕಚ್ಚಾ ತೈಲ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧದಿಂದಾಗಿ ವಿಶ್ವಮಟ್ಟದಲ್ಲಿ ಕಚ್ಚಾ ತೈಲ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಇದನ್ನೂ ಓದಿ: ರಷ್ಯನ್ನರ ವಿರುದ್ಧ ಹೋರಾಡಲು ಸ್ಥಳೀಯರಿಂದ ಪೆಟ್ರೋಲ್ ಬಾಂಬ್ ದಾಳಿ
ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸುವ ಯತ್ನದಲ್ಲಿ ಮಿತ್ರರಾಷ್ಟ್ರಗಳೊಂದಿಗೆ ತನ್ನ ಆಯಾಕಟ್ಟಿನ ಮೀಸಲುಗಳಿಂದ ಅಮೆರಿಕ ಸುಮಾರು 60 ಮಿಲಿಯನ್ ಬ್ಯಾರಲ್ ಬಿಡುಗಡೆ ಮಾಡಿದೆ. ಆದರೂ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ.
ತೈಲದ ಜಾಗತಿಕ ಬೆಲೆ ಏರಿಕೆಯು ಭಾರತದ ಮೇಲೆ ಪರಿಣಾಮ ಬೀರಲಿದೆ. ಭಾರತ ತನ್ನ ಅಗತ್ಯಗಳಲ್ಲಿ ಶೇ.85 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಇದು ಭಾರತದ ಹಣದುಬ್ಬರದ ಒತ್ತಡಕ್ಕೆ ಕಾರಣವಾಗಬಹುದು. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಬಹುದು. ಇದನ್ನೂ ಓದಿ: 3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ
ರಷ್ಯಾ ವಿಶ್ವದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ಉತ್ಪಾದಕ ದೇಶವಾಗಿದೆ. ರಷ್ಯಾ ಮೇಲೆ ವಿಧಿಸಿರುವ ರಫ್ತು ನಿರ್ಬಂಧಗಳು ಆ ದೇಶದಿಂದ ತೈಲ ಪೂರೈಕೆಗೆ ಅಡಚಣೆ ಉಂಟುಮಾಡಿದೆ.